Advertisement

ಸರ್ಕಾರಕ್ಕೆ ವಿವಿಗಳ ಪರಿಕಲ್ಪನೆ ತಿಳಿದಿಲ್ಲ

12:38 PM Apr 09, 2018 | Team Udayavani |

ಮೈಸೂರು: ವಿಶ್ವವಿದ್ಯಾಲಯ ಆರಂಭಿಸಿ ದವರಿಗೆ, ಆಡಳಿತ ನಡೆಸುವವರಿಗೆ ಹಾಗೂ ಸರ್ಕಾರಕ್ಕೆ ವಿಶ್ವವಿದ್ಯಾನಿಲಯದ ಪರಿಕಲ್ಪನೆಯೇ ಇಲ್ಲದಂತಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯಗಳು ಹಾಗೂ ಕುಲಪತಿಗಳನ್ನು ಸಿಂಡಿಕೇಟ್‌ ಸದಸ್ಯರು ನಿಯಂತ್ರಿಸುತ್ತಿರುವುದು ಆತಂಕ ಕಾರಿ ಬೆಳವಣಿಗೆ ಎಂದು ವಿಶ್ರಾಂತ ಕುಲಪತಿ ಪ್ರೊ. ಎಸ್‌.ಎನ್‌. ಹೆಗಡೆ ವಿಷಾದಿಸಿದರು.

Advertisement

ಡಾ. ಸರ್ವಮಂಗಳಾ ಶಂಕರ್‌ ಅಭಿಮಾನಿ ಬಳಗದಿಂದ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾನುವಾರ ಆಯೋಜಿಸಿದ್ದ ಸಂಗೀತ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್‌ ಅವರಿಗೆ ಅಭಿನಂದನೆ, ಗಾನಯಾನ ಅಭಿನಂದನಾ ಗ್ರಂಥ ಸಮರ್ಪಣೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಖಾಸಗಿ ವಿಶ್ವವಿದ್ಯಾಲಯಗಳನ್ನು ಹೊರತು ಪಡಿಸಿ ಸರ್ಕಾರ 28 ವಿಶ್ವವಿದ್ಯಾನಿಲಯಗಳನ್ನು ಸ್ಥಾಪನೆ ಮಾಡಿದೆ. ಆದರೆ, ಈ ವಿವಿಗಳು ಏನು ಮಾಡುತ್ತಿವೆ? ಇಲ್ಲಿನ ಶಿಕ್ಷಣದ ಗುಣಮಟ್ಟ ಹೇಗಿದೆ? ಎಂಬುದು ಪ್ರಶ್ನೆಯಾಗಿದೆ. ಯಾವುದೇ ಒಂದು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಬೇಕಾದರೆ ಸಾರ್ವಜನಿಕ ರೊಂದಿಗೆ ಚರ್ಚೆ ನಡೆಸುವ ಜತೆಗೆ ಸಾರ್ವಜನಿಕರಿಂದ ಬೇಡಿಕೆಯೂ ಇರಬೇಕು.

ವಿಶ್ವವಿದ್ಯಾನಿಲಯ ಎಂಬುದು ಕೇವಲ ಪಾಠಕ್ಕೆ ಮಾತ್ರ ಸೀಮಿತವಾಗಿದ್ದು, ಸರ್ಕಾರಗಳು ಏನು ಮಾಡುತ್ತಿವೆ?, ಎಷ್ಟು ಪ್ರಯೋಗ ಮಾಡುತ್ತಿವೆ? ಎಂದ ಅವರು, ಅನೇಕರಿಗೆ ವಿಶ್ವವಿದ್ಯಾಲಯಗಳ ಪರಿಕಲ್ಪನೆಯೇ ತಿಳಿದಿಲ್ಲ ಎಂದು ಹೇಳಿದರು.

ವಿವಿಯಲ್ಲಿ ಜಾತಿ ತಾರತಮ್ಯ: ಇಂದು ವಿವಿಗಳಲ್ಲಿ ಹೊಸ ಹೊಸ ಆವಿಷ್ಕಾರ, ಸಂಶೋಧನೆಗಳು ನಡೆಯದಂತಾಗಿದ್ದು, ಕೇವಲ ಪದವಿ ನೀಡಲು ವಿಶ್ವವಿದ್ಯಾಲಯದ ಸ್ಥಾಪನೆ ಮಾಡಬೇಕೇ ಎಂಬ ಪ್ರಶ್ನೆ ಉದ್ಬವಿ ಸಿದೆ. ಆದರೆ, ಪ್ರತಿಯೊಬ್ಬರು ವಿಶ್ವವಿದ್ಯಾ ನಿಲಯ ಎಂದರೇನು? ಎಂಬುದನ್ನು ಅರಿತು ಕೊಳ್ಳಬೇಕಿದ್ದು, ಇದಕ್ಕಾಗಿ ಸಂಕುಚಿತ ಮನೋ ಭಾವದಿಂದ ಹೊರಬರಬೇಕಿದೆ. ಜತೆಗೆ ವಿವಿಗಳಲ್ಲಿ ಜಾತಿ, ಸಮುದಾಯ, ವರ್ಗ ತಾರತಮ್ಯ ಹೊರತುಪಡಿಸಿ ವಿಶ್ವವಿದ್ಯಾ ನಿಲಯಗಳನ್ನು ಕಟ್ಟಬೇಕಿದೆ ಎಂದು ಹೇಳಿದರು.

Advertisement

ವಿವಿಗಳನ್ನು ಆರಂಭಿಸುವವರು ವಿಶ್ವವಿದ್ಯಾ ನಿಲಯಕ್ಕೆ ಏನೆಲ್ಲಾ ಬೇಕೆಂಬುದನ್ನು ತಿಳಿದು ಕೊಳ್ಳಬೇಕು. 5 ವರ್ಷಕ್ಕಾಗುವ ವ್ಯವಸ್ಥೆ ಕಲ್ಪಿಸುವ ಜತೆಗೆ ಅಗತ್ಯ ಬೋಧಕ ವರ್ಗ ಕಲ್ಪಿಸಬೇಕಿದೆ. ವಿವಿಗಳ ಸಿಂಡಿಕೇಟ್‌ಗಳು ಕುಲಪತಿಗಳು ಹಾಗೂ ವಿವಿಗಳನ್ನು ನಿಯಂತ್ರಿಸದೆ, ತಪ್ಪುಗಳನ್ನು ತಿದ್ದುವ ಹಾಗೂ ವಿವಿಗಳನ್ನು ಸರಿಯಾದ ದಾರಿಯಲ್ಲಿ ಸಾಗು ವಂತೆ ಮಾಡಬೇಕಿದೆ ಎಂದು ವಿವರಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡುವುದು ಎಷ್ಟು ಕಷ್ಟವೋ, ಅದನ್ನು ಮುನ್ನಡೆಸುವುದೂ ಶ್ರಮದಾಯಕ ವಾಗಿದೆ. ಸಂಗೀತ ಮತ್ತು ಪ್ರದರ್ಶಕ ಕಲೆಗಳು ತಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಮನುಷ್ಯನ ಅಭಿವೃದ್ಧಿಗೆ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಸಂಗೀತ ವಿವಿಯನ್ನು ಮತ್ತಷ್ಟು ಸಮೃದ್ಧವಾಗಿ ಬೆಳಸಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಅವರು ಗಾನಯಾನ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ತುಮಕೂರು ವಿವಿ ವಿಶ್ರಾಂತ ಕುಲಪತಿ ಡಾ.ಎಸ್‌.ಸಿ.ಶರ್ಮ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ. ಎಸ್‌. ಶಿವರಾಜಪ್ಪ, ಉದ್ಯಮಿ ಕೆ.ವಿ. ಮೂರ್ತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next