Advertisement

ಆಮ್ಲಜನಕ ನೀಡುವ ಕಾಡನ್ನುಉಳಿಸುವ ಪಣ ತೊಡಿ: ತಾರಾಅನುರಾಧ

11:13 AM Jun 15, 2022 | Team Udayavani |

ಬೆಂಗಳೂರು: ಸಮೃದ್ದ ಆಮ್ಲಜನಕ ನೀಡುವ ಕಾಡನ್ನು ಉಳಿಸಲು ಪಣ ತೊಡಬೇಕು ಎಂದು ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾ ಅನುರಾಧ ಕರೆ ನೀಡಿದರು.

Advertisement

ಬೆಂಗಳೂರಿನಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಜನರಲ್ಲಿ ಪರಿಸರ ಜಾಗೃತಿ ಮತ್ತು ಮಾಲಿನ್ಯ ನಿಯಂತ್ರಣ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾಲ್ನಡಿಗೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೋವಿಡ್‌ ಸಂಧರ್ಭದಲ್ಲಿ ಆಮ್ಲಜನಕದ ಕೊರತೆಯಿಂದ ಬಹಳಷ್ಟು ಸಮಸ್ಯೆಯನ್ನು ಅನುಭವಿಸಿದ್ದೇವೆ. ಆಮ್ಲಜನಕವನ್ನು ಸಮೃದ್ದವಾಗಿ ನೀಡುವಂತಹ ಪರಿಸರ ಮತ್ತು ಕಾಡನ್ನು ಬೆಳೆಸುವಂತಹ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾದ ಅವಶ್ಯಕತೆಯನ್ನು ಅರಿತುಕೊಂಡಿದ್ದೇವೆ. ಈ ಹಿನ್ನಲೆಯಲ್ಲಿ ಕಾಡನ್ನು ಬೆಳೆಸುವ ಹಾಗೂ ಪರಿಸರವನ್ನು ರಕ್ಷಿಸುವಂತಹ ಪಣವನ್ನು ನಾವೆಲ್ಲರೂ ತೊಡಬೇಕಾಗಿದೆ. ಅರಣ್ಯ ಅಭಿವೃದ್ದಿ ನಿಗಮ ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಕಾಡನ್ನು ಉಳಿಸುವಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಈ ನಿಗಮದ ಕಾರ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಕೇಸ್; ರಾಹುಲ್ ಬಂಧನ ಸಾಧ್ಯತೆ? ಛತ್ತೀಸ್ ಗಢ್ ಸಿಎಂ ಹೇಳಿದ್ದೇನು

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್‌ ಕೆ ಸಿಂಗ್‌ ಮಾತನಾಡಿ, ಪರಿಸರ ಜಾಗೃತಿ ಮಾಸಾಚರಣೆಯ ತಿಂಗಳಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಬಹಳ ಸಂತಸದ ವಿಷಯ. ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಗಳು ಇನ್ನೂ ಹೆಚ್ಚಾಗಬೇಕು ಎಂದು ಹೇಳಿದರು.

Advertisement

ನಿಗಮದ ಉಪಾಧ್ಯಕ್ಷರಾದ ರೇವಣ್ಣಪ್ಪ, ಸರಕಾರದ ಅಧೀನ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಧಾದೇವಿ ಐ.ಎಫ್.ಎಸ್‌ ಸೇರಿದಂತೆ ನಿಗಮದ ಅಧಿಕಾರಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೌಕರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next