Advertisement

ತಾಳ್ಮೆಯೆಂಬ ಬಂಗಾರ

10:40 PM Jan 26, 2020 | Sriram |

ತಾಳ್ಮೆ ಮನುಷ್ಯ ಜೀವನದಲ್ಲಿ ಇರುವ ಬಂಗಾರ. ನಾವು ಹೇಗೆ ಕಪಾಟಿನಲ್ಲಿ ಜೋಪನವಾಗಿ ಬಂಗಾರವನ್ನು ಲಾಕರ್‌ನಲ್ಲಿ ಇಟ್ಟುಕೊಂಡಿದ್ದೇವೋ ಹಾಗೆಯೇ ಮನಸ್ಸೆಂಬ ಮಹಾನ್‌ ಕೂಪದಲ್ಲಿ, ಸಿಟ್ಟು, ಅಸೂಯೆ, ದ್ವೇಷ, ರೋಷ ಯಾರದೋ ಮೇಲಿನ ಸ್ವಾರ್ಥ ಆಗಾಗ ನೀರಿನ ಗುಳ್ಳೆಯಂತೆ ಏರುತ್ತಲೇ ಇರುತ್ತದೆ ವಿನಾ ಮನಸ್ಸಿನಾಳದಲ್ಲಿರುವ ತಾಳ್ಮೆ ಎಂಬ ಬಂಗಾರ ಪರಿಸ್ಥಿತಿಯ ಅನುಗುಣವಾಗಿಯೂ ಬಳಕೆ ಆಗುವುದು ಕಡಿಮೆ.

Advertisement

ತಾಳಿದವನು ಬಾಳಿಯಾನು ಈ ಗಾದೆ ಮಾತಿನ ತಣ್ತೀ ಇವತ್ತಿನ ಕಾಲದ ಯುವ ಮನಸ್ಸಿಗೆ ಅಥೆìçಸಿ ಹೇಳುವುದು ಒಂದು ತಾಳ್ಮೆಯ ಸಾಹಸವೇ. ತಾಳ್ಮೆ ಮಗುವನ್ನು ಬೆಳೆಸಿ, ಕಲಿಸುವ ತಾಯಿಯ ಮಮತೆಯಲ್ಲಿರಬೇಕು. ತಾಳ್ಮೆ ಶಿಕ್ಷಕನ ಕೈಯಿಂದ ಪೆಟ್ಟು ತಿಂದು ಕೂರುವ ವಿದ್ಯಾರ್ಥಿಯಲ್ಲಿರಬೇಕು. ತಾಳ್ಮೆ ದಾರಿ ತಪ್ಪಿ ಹೋಗುವ ಮಗನನ್ನು ಸರಿ ದಾರಿಗೆ ತಂದು ಬುದ್ಧಿ ಹೇಳುವ ತಂದೆಯಲ್ಲಿರಬೇಕು. ತಾಳ್ಮೆ ಮುನಿಸಾಗಿ ಮನಸ್ಸು ಹದಗೆಡುವ ಸಂಬಂಧದಲ್ಲಿರಬೇಕು. ತಾಳ್ಮೆ ವಯಸ್ಸಾಗಿ ಜ್ವರದಿಂದ, ಒಂಟಿಯಾಗಿ ಕೂರುವ ವೃದ್ಧ ತಂದೆ -ತಾಯಿಯನ್ನು ಸಾಕಿ ಸಲಹುವ ಮಕ್ಕಳ ಪ್ರೀತಿಯಲ್ಲಿರಬೇಕು. ತಾಳ್ಮೆ ಹದಿಹರೆಯದಲ್ಲಿ ಹಬೆಯಾಡುವ ಯುವ ಮನಸ್ಸಿನ ಭಾವನೆಗಳಿರಬೇಕು. ತಾಳ್ಮೆ ಸ್ನೇಹದಲ್ಲಿರಬೇಕು. ಒಬ್ಬರನ್ನು ಅರಿಯುವ ಭಾವದಲ್ಲಿರಬೇಕು.

ಹೀಗೆ ತಾಳ್ಮೆಗೆ ನೂರು ಮುಖಗಳಿವೆ. ಸಾವಿರಾರು ಪರಿಸ್ಥಿತಿಗಳಿವೆ. ಕೋಪದಲ್ಲಿ ಮನುಷ್ಯನಿಗೆ ಅಸ್ತ್ರವಾಗಬೇಕಿರುವುದು ತಾಳ್ಮೆ ಹಾಗೂ ಮೌನ ಎನ್ನುವ ಒಂದೇ ನಾಣ್ಯದ ಎರಡು ಮುಖಗಳು ಮಾತ್ರ. ವಿನಾ ಪರಿಸ್ಥಿತಿಯಲ್ಲಿ ಪಾತ್ರವಾಗುವ ಅನಗತ್ಯರ ಬಾಯಿ ಮಾತುಗಳಲ್ಲ. ಏನೇ ಆಗಲಿ ಮೊದಲು ನಾವು ಒಬ್ಬರ ಒಳಿತನ್ನು ನೋಡಿ ಶ್ಲಾ ಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಬದಲಾಗಿ ರೋಧಿಸಿಕೊಳ್ಳುವುದನ್ನಲ್ಲ. ನೆನಪಿರಲಿ. ಬದುಕಿನಲ್ಲಿ ಬಯಸಿ ಬರುವ ನಿರೀಕ್ಷೆಗಳಿಗಿಂತ, ಬಯಸದೇ ಬರುವ ನಿರಾಶೆಗಳೇ ಹೆಚ್ಚು.

- ಸುಹಾನ್‌ ಶೇಕ್‌

Advertisement

Udayavani is now on Telegram. Click here to join our channel and stay updated with the latest news.

Next