Advertisement

ಚಿನ್ನದ ಚಿಗರೆ

07:43 PM Oct 08, 2019 | Team Udayavani |

ಅಥ್ಲೆಟಿಕ್ಸ್‌ನಲ್ಲಿ ಒಂದು ಚಿನ್ನದ ಪದಕ ಗಳಿಸುವುದೇ ಅತಿ ಕಷ್ಟದ ವಿಷಯ. ಅದರಲ್ಲೂ, ನೂರು ಮೀಟರ್‌ ಓಟದಲ್ಲಿ ಸೆಕೆಂಡ್‌ಗಳ ಅಂತರದಲ್ಲಿ ಪದಕ ಮಿಸ್‌ ಆಗಿಬಿಡುತ್ತದೆ. ಆದರೆ, ಜಮೈಕಾದ ಶೆಲ್ಲಿ ಆನ್‌ ಫ್ರೇಸರ್‌ ಪ್ರೈಸ್‌ ಎಂಬಾಕೆ ಒಂದಲ್ಲ ಎರಡಲ್ಲ, ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಹೊಸ ವಿಶ್ವ ದಾಖಲೆ ಸೃಷ್ಟಿಸಿದ್ದಾಳೆ.

Advertisement

ಕಳೆದ ವಾರ ಕತಾರ್‌ನ ದೋಹಾದಲ್ಲಿ ನಡೆದ ಐಎಎಎಫ್ ವಿಶ್ವ ಚಾಂಪಿಯನ್‌ಶಿಪ್‌ನ ನೂರು ಮೀಟರ್‌ ಓಟವನ್ನು 10.71 ಸೆಕೆಂಡ್‌ನ‌ಲ್ಲಿ ಕ್ರಮಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಳು ಶೆಲ್ಲಿ. ವಿಷಯ ಅದಲ್ಲ; ಯಾಕಂದ್ರೆ, 2008ರಿಂದಲೂ ಶೆಲ್ಲಿ, ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುತ್ತಿದ್ದಾಳೆ. ಆದರೆ, ತಾಯಿಯಾದ ಮೇಲೆ ಆಕೆ ಪಡೆದ ಮೊದಲ ಪದಕ ಇದು. ಹದಿಮೂರು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಶೆಲ್ಲಿಯ ತಾಯ್ತನ ಸುಖಕರವಾಗಿರಲಿಲ್ಲ.

ಏಳು ತಿಂಗಳಿಗೇ ಹೆರಿಗೆಯಾಯ್ತು. ದಿನಗಳು ತುಂಬದೆ ಹುಟ್ಟಿದ ಮಗುವನ್ನು ಒಂದು ತಿಂಗಳ ಕಾಲ ಐಸಿಯುನಲ್ಲಿ ಇಟ್ಟಿದ್ದರು. ಆ ಸಮಯದಲ್ಲಿ ಶೆಲ್ಲಿ ಅನುಭವಿಸಿದ ದೈಹಿಕ, ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಆದರೂ, ಧೃತಿಗೆಡದೆ ಮತ್ತೆ ಪುಟಿದೆದ್ದು, ಓಟದ ಅಂಗಳಕ್ಕೆ ಇಳಿದಿದ್ದೇ ದೊಡ್ಡ ಸಾಧನೆಯಾದರೆ, ಪದಕ ಗೆದ್ದಿದ್ದು ಮಹಾ ಸಾಧನೆಯೇ!

Advertisement

Udayavani is now on Telegram. Click here to join our channel and stay updated with the latest news.

Next