ಬೆಂಗಳೂರು: ನಾಡಿನ ಅಭ್ಯುದಯಕ್ಕಾಗಿ ಶ್ರಮಿಸಿದ ಬಸವಣ್ಣ, ಕನಕದಾಸ, ಕೆಂಪೇಗೌಡರಂತಹ ಮಹನೀಯರನ್ನು ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ತಿಳಿಸಿದ್ದಾರೆ.
ಜೆಡಿಎಸ್ ಕಚೇರಿ “ಜೆಪಿ’ಭವನದಲ್ಲಿ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ 530 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜ ಸುಧಾರಕರು ಎಲ್ಲರಿಗೂ ಸೇರಿದವರು. ಆವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು.
ಮಾಜಿ ಸಂಸದ ಎಚ್.ವಿಶ್ವನಾಥ್ ಮಾತನಾಡಿ, ದಾಸರು-ಶರಣರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ನಾಡಿನ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಆಡು ಭಾಷೆಯಲ್ಲಿ ಜನರಿಗೆ ಹಿತವಾಗುವಂತೆ ಸಾಹಿತ್ಯ ರಚಿಸಿ ಸರಳ ಮತ್ತು ವಾಸ್ತವದ ಚಿತ್ರಣ ಬಿಡಿಸಿಟ್ಟು ಆ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿದವರು ಕನಕದಾಸರು ಎಂದು ಬಣ್ಣಿಸಿದರು. ಮಾಜಿ ಶಾಸಕರಾದ ಎಂ.ಎಸ್.ನಾರಾಯಣರಾವ್,ಶಿವರಾಜು, ರಾಜಣ್ಣ, ಮುಖಂಡರಾದ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಜೆಡಿಎಸ್ ಪಕ್ಷದ ಸಾಧನೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ಬಾರಿ ವಿಭಿನ್ನ ರೀತಿಯ ಪ್ರಚಾರಕ್ಕೆ ಒತ್ತು ನೀಡಲಾಗುವುದು. ಗ್ರೀಕ್ ದೇಶದ ಬಗ್ಗೆ ಕನ್ನಡದಲ್ಲಿ ಪುಸ್ತಕ ಬರೆದುಕೊಡಲು ಆಹ್ವಾನ ಬಂದಿದ್ದು ಅದಕ್ಕಾಗಿ ಗ್ರೀಸ್ ಪ್ರವಾಸಕ್ಕೆ ತೆರಳಲಿದ್ದೇನೆ. ಅಲ್ಲಿಂದ ಬಂದ ನಂತರ ರಾಜ್ಯಾದ್ಯಂತ ವಿಭಿನ್ನ ಪ್ರಚಾರದಲ್ಲಿ ತೊಡಗಲಿದ್ದೇನೆ. ಇದಕ್ಕಾಗಿ ಸಾಹಿತಿ, ಬರಗಾರರ ಸಹಕಾರ ಸಹ ಪಡೆಲಾಗುವುದು.
-ಎಚ್.ವಿಶ್ವನಾಥ್, ಮಾಜಿ ಸಂಸದ