Advertisement

ಗ್ಯಾಸ್‌ ದರ 886 ರೂ…ಇದೇ ಮೋದಿ ಅಚ್ಚೇ ದಿನ್‌; ಸಿದ್ದರಾಮಯ್ಯ ವ್ಯಂಗ್ಯ

03:14 PM Sep 02, 2021 | Team Udayavani |

ಮೈಸೂರು: ಮನಮೋಹನ್‌ ಸಿಂಗ್‌ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ 2014ರ ಹಿಂದೆ 414 ರೂ. ಇದ್ದ ಅಡುಗೆ ಅನಿಲದ ಬೆಲೆ ಇಂದು ನಿತ್ಯ ಏರುತ್ತಿದೆ. ಒಂದು ವಾರದ ಅವಧಿಯಲ್ಲಿ 25 ರೂಪಾಯಿಯಂತೆ 2 ಬಾರಿ ಹೆಚ್ಚಳವಾಗಿದ್ದು ಒಂದು ಗ್ಯಾಸ್‌ ಸಿಲೆಂಡರ್‌ಗೆ 886 ರೂ. ಆಗಿದೆ. 2014ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದ ಅಚ್ಚೇ ದಿನ್‌ ಆಯೇಗ ಎಂಬ ಮಾತು ಇದೆ ಇರಬಹುದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Advertisement

ಇದನ್ನೂ ಓದಿ:ತಾಲಿಬಾನ್ ಆಡಳಿತ; ಭಾರತದ ಕೆಲವು ಮುಸ್ಲಿಮರ ಸಂಭ್ರಮ ಅಪಾಯಕಾರಿ ಬೆಳವಣಿಗೆ: ಷಾ

ಸಂಕಷ್ಟ ಸೂತ್ರ ಅನುಸರಿಸಿ: ನಮ್ಮಲ್ಲಿ ಉತ್ತಮ ಮಳೆಯಾಗಿ ಜಲಾಶಯ ತುಂಬಿದ್ದರೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದಷ್ಟು ನೀರನ್ನು ತಮಿಳುನಾಡಿಗೆ ಬಿಡಬಹುದಿತ್ತು. ಆದರೆ ನಮ್ಮಲ್ಲಿ ಮಳೆ ಕೊರತೆಯಿಂದಾಗಿ ಜಲಾಶಯವೇ ಭರ್ತಿಯಾಗಿಲ್ಲ. ಹೀಗಿದ್ದ ಮೇಲೆ ನೀರನ್ನು ಕೊಡುವುದು ಹೇಗೆ, ಮಳೆ ಬೀಳದ ಸಂಕಷ್ಟದ ವರ್ಷದಲ್ಲಿ ಹೇಳಿದಷ್ಟು ನೀರನ್ನು ಬಿಡುವ ಹಾಗಿಲ್ಲ. ಅದರಂತೆ ಸರ್ಕಾರ ಸಂಕಷ್ಟ ಸೂತ್ರ ಅನುಸರಿಸಲಿ ಎಂದು ಸಲಹೆ ನೀಡಿದರು.

ಶಾಸಕ ಜಿ.ಟಿ.ದೇವೆಗೌಡ ಕಾಂಗ್ರೆಸ್‌ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿ.ಟಿ.ದೇವೆಗೌಡ ನನ್ನನ್ನ ಭೇಟಿಯಾಗಿದ್ದು ನಿಜ. ಅವರು ನನಗೂ ಮತ್ತು ನನ್ನ ಮಗನಿಗೂ ಟಿಕೆಟ್‌ ಕೊಡಿ ಅಂತ ಕೇಳಿದ್ದರು. ಅದೆಲ್ಲವೂ ಹೈಕಮಾಂಡ್‌ನ‌ಲ್ಲಿ ತೀರ್ಮಾನ ಆಗಬೇಕು. ನಾನು ಹೈಕಮಾಂಡ್‌ ಕೇಳಿ ಹೇಳುತ್ತೇನೆ ಎಂದು ಹೇಳಿದ್ದೆ. ನಾನು ಎಲ್ಲಿಯೂ ಅಪ್ಪ-ಮಗ ಇಬ್ಬರಿಗೂ ಟಿಕೆಟ್‌ ಕೊಡುತ್ತೇನೆ ಎಂದು ಹೇಳಿಲ್ಲ ಎಂದರು.

ಸ್ಥಳ ಪರಿಶೀಲಿಸಿ ಪೊಲೀಸರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸಿದ್ದು
ಮೈಸೂರು: ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್‌ ರೇಪ್‌ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಮೈಸೂರಿನ ಲಲಿತಾದ್ರಿಪುರ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಆ.24ರಂದು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌ ನಡೆದಿದ್ದ ಘಟನಾ ಸ್ಥಳಕ್ಕೆ ಬುಧವಾರ ಮಧ್ಯಾಹ್ನ ಭೇಟಿ ನೀಡಿದ ಸಿದ್ದರಾಮಯ್ಯ ಡಿಸಿಪಿ ಪ್ರದೀಪ್‌ ಗುಂಟಿ ಹಾಗೂ ಗೀತಾ ಪ್ರಸನ್ನ ಅವರಿಂದ ಮಾಹಿತಿ ಪಡೆದುಕೊಂಡರು.

ಈ ವೇಳೆ ಸ್ಥಳದಲ್ಲಿದ್ದ ಆಲನಹಳ್ಳಿ ಪೊಲೀಸ್‌ ಇನ್ಸ್ ಪೆಕ್ಟರ್‌ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಈ ಠಾಣೆಗೆ ನೀನು ಬಂದು ಎಷ್ಟು ತಿಂಗಳಾಯ್ತು, ಘಟನೆ ನಡೆದ ಸ್ಥಳ ಯಾರಿಗೆಗೆ ಸೇರುತ್ತೆ, ಇಲ್ಲಿಂದ ರಿಂಗ್‌ ರಸ್ತೆ ಎಷ್ಟು ದೂರು ಬರುತ್ತೆ ಹೇಳು ಎಂದು ಪ್ರಶ್ನಿಸಿದರು. ಇಲ್ಲಿ ಹುಡುಗ, ಹುಡುಗಿ ಬರುತ್ತಾರೆ ಅಂತಾ ಗೊತ್ತೇನಯ್ಯ. ನೀನು ಎಷ್ಟು ಸಾರಿ ಇಲ್ಲಿಗೆ ಬಂದಿದ್ದಿ. ಗರುಡ ವಾಹನ ಇಲ್ಲಿಗೆ ಗಸ್ತು ಬರುತ್ತಾ ಎಂದು ಪ್ರಶ್ನೆಗಳ ಸುರಿಮಳೆಗೈದರು. ಈ ಎಲ್ಲಾ ಪ್ರಶ್ನೆಗಳನ್ನು
ನ್ಯಾಯಾಲಯದಲ್ಲಿ ಕೇಳಿದರೆ ಏನು ಹೇಳ್ತಿಯಾ ಎಂದು ಗದರಿದರು.

ಈ ವೇಳೆ ಮಾಜಿ ಸಚಿವ ಎಚ್‌.ಸಿ ಮಹದೇವಪ್ಪ, ಮಾಜಿ ಶಾಸಕ ಎಂ.ಕೆ ಸೋಮಶೇಖರ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌, ಮಂಜುಳಾ ಮಾನಸ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next