Advertisement

ಆಟಿ ಬಂತು: ಆದೂರು ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ಹರಕೆ ಕೋಲ ಆರಂಭ

05:25 AM Jul 20, 2017 | |

ಮುಳ್ಳೇರಿಯ: ಆಟಿ ತಿಂಗಳು ಆರಂಭವಾಯಿ ತೆಂದರೆ ಆಟಿ ಭೂತಗಳ ಆರಾಧನೆ ಆರಂಭವಾಗುತ್ತದೆ. ಮನುಷ್ಯ, ಪ್ರಾಣಿ, ಪಕ್ಷಿಗಳು, ಸಸ್ಯಾದಿಗಳು ಈ ತಿಂಗಳಲ್ಲಿ ರೋಗ ರುಜಿನಗಳಿಗೆ ತುತ್ತಾಗುತ್ತವೆ. ಹೀಗಾಗಿ ನಾಡಿನ ಕಷ್ಟಗಳನ್ನು ದೂರಮಾಡುವುದಕ್ಕಾಗಿ ದೈವಗಳು ಭೇಟಿ ನೀಡುತ್ತವೆ ಎಂಬುದು ನಂಬಿಕೆ. ಆದೂರು ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ತಿಂಗಳು ಪೂರ್ತಿ ದೈವದ ಕೋಲ ನಡೆಯುವುದು ಒಂದು ವಿಶೇಷ.

Advertisement

ಹಿನ್ನೆಲೆ : ಸುಮಾರು 400 ವರ್ಷಗಳ ಹಿಂದೆ ಗಟ್ಟದಿಂದ ಇಳಿದುಬಂದ ಕಲ್ಲುರ್ಟಿ-ಕಲ್ಕುಡ ದೈವಗಳಿಗೆ ಆದೂರು ಏಳ್ನಾದೈವದೆ„ವಗಳು ಮನೆ ಮನೆಗಳಿಗೆ ಭೇಟಿ ನೀಡುತ್ತವೆ. ಕಳೆಂಜ, ಬೇಡ, ಮರ್ದ, ಕನ್ನಿಯಾಪು ಇಂತಹ ದೈವಗಳಲ್ಲಿ ಕೆಲವು. ಆದರೆ ನಮ್ಮೂರಿನ ಗ್ರಾಮೀಣ ಜನರಿಗೆ ಸುಪರಿಚಿತ ಆಟಿ ಕಳೆಂಜ.

ನಲಿಕೆ ಸಮುದಾಯದವರು ಆಯಾ ಊರಿನಲ್ಲಿ ಕಟ್ಟಿ ಆಡುತ್ತಾರೆ. ತೆಂಬರೆಯ ನಾದಕ್ಕೆ, ಓಲೆಕೊಡೆಯನ್ನು ಕೈಯಲ್ಲಿ ಹಿಡಿದು ಮನೆಮನೆಗಳಿಗೆ ಹೋಗಿ ಕುಣಿದರೆ ಈ ತಿಂಗಳಲ್ಲಿ ಬರುವ ಎಲ್ಲಾ ದುರಿತಗಳು ಮಾಯವಾಗುತ್ತವೆ ಎಂಬುದು ಒಂದು ನಂಬಿಕೆ. ಹೀಗೆ ಮನೆಗೆ ಬರುವ ದೆ„ವಗಳಿಗೆ ಕಾಣಿಕೆ ನೀಡುತ್ತಾರೆ. ಇಲ್ಲದಿದ್ದರೆ ಅನಾಹುತಗಳು ಉಂಟಾಗುತ್ತವೆ ಎಂಬ ನಂಬಿಕೆಯೂ ಇದೆ.

ಆದರೆ ಇಂದು ಅವತರಿಸುವ ಕಳೆಂಜನಿಗೆ ಸಾಂಪ್ರದಾಯಿಕ ವಾದ ವೇಷ ಭೂಷಣಗಳು ಕಡಿಮೆಯಾಗುತ್ತಿವೆ. ಓಲೆ ಕೊಡೆಯ ಬದಲು ಸಾದಾ ಕೊಡೆ ಹಿಡಿಯಲು ಕಲಿತಿದ್ದಾನೆ. ಪಾಡªನವೂ ಕೇವಲವಾಗುತ್ತಿದೆ. ಆಷಾಢ ಮಾಸದ ಇಂತಹ ದೈವಗಳು, ನಂಬಿಕೆಗಳ ಬಗ್ಗೆ ಕೀಳರಿಮೆ ಮೂಡುತ್ತಿದ್ದರೂ ತನ್ನ ವೈಶಿಷ್ಟ éವನ್ನು ಉಳಿಸಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next