Advertisement

ಅನರ್ಹ ಶಾಸಕರ ಭವಿಷ್ಯ ಇಂದು? ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

12:55 AM Sep 23, 2019 | Sriram |

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಯಾಗಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದ ಅನರ್ಹ ಶಾಸಕರು ಸೇರಿ ಎಲ್ಲರ ಚಿತ್ತ ಈಗ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿದೆ. ಸೋಮವಾರ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರಲಿದ್ದು, ನಿರಾಳತೆ ಸಿಗಲಿದೆಯೇ ಎಂಬ ಬಗ್ಗೆ ಕುತೂಹಲ ಮೂಡಿದೆ.

Advertisement

ಅನರ್ಹ ಶಾಸಕರು ದಿಲ್ಲಿಯಲ್ಲಿಯೇ ಬೀಡುಬಿಟ್ಟು ತಮ್ಮ ವಕೀಲರು ಹಾಗೂ ಕಾನೂನು ತಜ್ಞರೊಂದಿಗೆ ಸಮಾ ಲೋಚನೆ ನಡೆಸಿ ತಮಗೆ ಸುಪ್ರೀಂ ನಿರಾಳತೆ ನೀಡಲಿದೆ ಎಂಬ ವಿಶ್ವಾಸ ದಲ್ಲಿದ್ದಾರೆ. ಜತೆಗೆ ಸೆ.30ರೊಳಗೆ ಸುಪ್ರೀಂ ಕೋರ್ಟ್‌ ಒಂದು ಅಂತಿಮ ತೀರ್ಮಾನಕ್ಕೆ ಬರಲಿದ್ದು, ಚುನಾ ವಣೆಗೆ ಸ್ಪರ್ಧಿಸುವ ತಮ್ಮ ಹಾದಿ ಸುಗಮ ವಾಗಲಿದೆ ಎಂದು ಅನರ್ಹ ಶಾಸಕರು ನಂಬಿದ್ದಾರೆ.

ಅನರ್ಹ ಶಾಸಕರ ಮುಂದಿರುವ ತತ್‌ಕ್ಷಣದ ಆಯ್ಕೆ ಗಳೆಂದರೆ ತಮ್ಮನ್ನು ಅನರ್ಹಗೊಳಿಸಿ ಸ್ಪೀಕರ್‌ ಹೊರಡಿ ಸಿರುವ ಆದೇಶಕ್ಕೆ ತಡೆ ಕೊಟ್ಟು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಬೇಕು ಅನ್ನುವುದನ್ನು ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿಕೊಳ್ಳಬಹುದು. ಇದಕ್ಕೆ ತಮಿಳುನಾಡಿನ ಎಐಎಡಿಎಂಕೆ 18 ಮಂದಿ ಅನರ್ಹ ಶಾಸಕರ ಪ್ರಕರಣದ ಉದಾಹರಣೆ ಕೊಡಬಹುದು. ಇಲ್ಲವೇ ತಮ್ಮ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಚುನಾವಣೆಗೆ ತಡೆ ನೀಡಬೇಕು ಎಂದು ಕೇಳಬಹುದು.

ಶಾ ಭೇಟಿ ಮಾಡಿದ ಬಿಎಸ್‌ವೈ
ಉಪ ಚುನಾವಣೆ ಘೋಷಣೆ ಯಾಗು ತ್ತಿದ್ದಂತೆ ಶನಿವಾರ ರಾತ್ರಿಯೇ ದಿಲ್ಲಿಗೆ ತೆರಳಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರವಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ , ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಅವರ ಸೂಚನೆ ಯಂತೆ ಉಪ ಚುನಾ ವಣೆ ಎದುರಿಸಲು ಸಜ್ಜಾಗಿದ್ದಾರೆ. ರವಿವಾರ ಬೆಳಗ್ಗೆ 8.30ರ ಹೊತ್ತಿಗೆ ಅಮಿತ್‌ ಶಾ ಅವರನ್ನು ಭೇಟಿಯಾದ ಯಡಿಯೂರಪ್ಪ ಕೆಲವು ಸಮಯ ಚರ್ಚೆ ನಡೆಸಿದರು.

ಯಡಿಯೂರಪ್ಪ ಅವರು ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ ಸಂದರ್ಭದಲ್ಲಿ ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಅವರ ಆಪ್ತ ಸಹಾಯಕ ಭರತ್‌ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.

Advertisement

2,000 ಕೋಟಿ ರೂ. ಪರಿಹಾರಕ್ಕೆ ಮನವಿ
ಶಾ ಜತೆಗಿನ ಚರ್ಚೆಯಲ್ಲಿ ರಾಜ್ಯಕ್ಕೆ ಈವರೆಗೆ ಮೊದಲ ಕಂತಿನ ಪರಿಹಾರ ಬಿಡುಗಡೆ ಯಾಗ ದಿರುವ ಬಗ್ಗೆ ಪ್ರಸ್ತಾವ ವಾಯಿತು. ತತ್‌ಕ್ಷಣ 2,000 ಕೋಟಿ ರೂ. ಪರಿಹಾರ ಧನ ಬಿಡು ಗಡೆ ಮಾಡುವಂತೆ ಯಡಿಯೂರಪ್ಪ ಮನವಿ ಮಾಡಿ ದರು. ಪ್ರಧಾನಿ ಯವರು ದೇಶಕ್ಕೆ ಹಿಂದಿರುಗಿದ ಬಳಿಕ ಚರ್ಚಿಸಿ 2-3 ದಿನಗಳಲ್ಲಿ ಪರಿಹಾರ ಮೊತ್ತ ಬಿಡುಗಡೆ ಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next