Advertisement
ಶೇಖಡವಾರು ಮತದಾನವು ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಇರುವುದು ಕಂಡುಬರುತ್ತದೆ. ಮತದಾನದ ದಿನ ರಜೆ ಇರುವ ಹಿನ್ನೆಲೆ ನಗರ ಪ್ರದೇಶದ ವಿದ್ಯಾವಂತ ಜನರು ಪ್ರವಾಸ ಕೈಗೊಳ್ಳುವುದು ಅಥವಾ ಮತದಾನದಿಂದ ದೂರು ಉಳಿದು ಬಿಡುತ್ತಾರೆ. ಗ್ರಾಮೀಣ ಭಾಗದ ಜನರಂತೆ ತಮ್ಮ ಹಕ್ಕುಗಳನ್ನು ಚಲಾಯಿಸಿ ಶೇಕಡವಾರು ಮತದಾನವನ್ನು ನೂರಕ್ಕೆ ಏರಿಸುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
Related Articles
Advertisement
ಕಾರ್ಯಕ್ರಮದಲ್ಲಿ 18 ವರ್ಷ ತುಂಬಿದ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಇದೇ ಸಂದರ್ಭ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮತದಾನ ಅರಿವು ಕುರಿತು ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಒಂದು ಮತದಿಂದ ಏನಾಗಬಹುದು?: ರಾಜ್ಯದಲ್ಲಿ ಯಾವುದೇ ಒಂದು ಸರ್ಕಾರ ಆಡಳಿತ ನಡೆಸಲು ಪ್ರತಿಯೊಬ್ಬರು ಮಾಡಿದ ಮತದಾನದಿಂದ ನಿರ್ಧಾರವಾಗಲಿದೆ. ಆದ್ದರಿಂದ ನಮ್ಮ ಒಂದೇ ಮತದಿಂದ ಏನಾಗಬಹುದು, ಒಂದೊಂದು ಬಾರಿ ಒಂದು ಮತದಿಂದ ಸೋಲನ್ನು ಅನುಭವಿಸಿರುವುದು ನಾವು ನೋಡಿದ್ದೇವೆ. ಸರ್ಕಾರ ರಚನೆಗೆ ಬಹುಮತ ದೊರೆಯದೇ ಇರಲು ಮತದಾನದಿಂದ ಆಗುತ್ತದೆ.
ಇದನ್ನೆಲ್ಲಾ ತಿಳಿದು ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ನ್ಯಾಯಾಧೀಶ ಎಸ್.ಕೆ. ಒಂಟಿಗೂಡಿ ತಿಳಿಸಿದರು. ಮತದಾನದ ಮಹತ್ವ ತಿಳಿದು ದೇಶದ ಯುವಕರು ಮತದಾನ ಮಾಡಲು ಮುಂದಾಗಬೇಕು. ಸೂಕ್ತ ವ್ಯಕ್ತಿಗೆ ಹಕ್ಕು ಚಲಾಯಿಸಿ ಉತ್ತಮ ಆಡಳಿತಕ್ಕೆ ಬುನಾದಿ ಹಾಕುವಂತೆ ಹೊಸದಾಗಿ ಮತ ಚಲಾಯಿಸಲಿರುವ ವಿದ್ಯಾರ್ಥಿಗಳಿಗೆೆ ಸಲಹೆ ನೀಡಿದರು.