Advertisement
ಬಂಟ್ವಾಳ ತಾ| ವ್ಯಾಪ್ತಿಯ ಬಹು ಭಾಗ ನೇತ್ರಾವತಿ ನದಿ ತಟದಲ್ಲಿ ಹರಡಿ ಕೊಂಡಿರುವುದರಿಂದ ಆಗಾಗ ನದಿ ಯಲ್ಲಿ ಅಪರಿಚಿತ ಮೃತದೇಹ ಪತ್ತೆ ಯಾಗುತ್ತಿರುತ್ತವೆ. ಇಂತಹ ಸಂದರ್ಭ ದೂರದ ಊರಿನಿಂದ ಮಕ್ಕಳು ಅಥವಾ ಸಂಬಂಧಿಗಳು ಬರುವವರೆಗೆ ಶವವನ್ನು ಕೊಳೆಯದಂತೆ ಇಡಲು ಸರಕಾರಿ ಆಸ್ಪತ್ರೆ ಯಲ್ಲಿ ಶೈತ್ಯಾಗಾರದ ಅಗತ್ಯವಿದೆ.
ಪ್ರಸ್ತುತ ಬಂಟ್ವಾಳ ತಾ| ವ್ಯಾಪ್ತಿಯಲ್ಲಿ ಸಿಗುವ ಅಪರಿಚಿತ ಮೃತದೇಹಗಳನ್ನು ಮಂಗಳೂರಿಗೆ ಕೊಂಡೊಯ್ಯಬೇಕು. ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ವ್ಯಾಪ್ತಿ ಯಿಂದ ಸಾಕಷ್ಟು ಅಪರಿ ಚಿತ ಮೃತದೇಹಗಳು ಬರು ವುದರಿಂದ ಸ್ಥಳಾವಕಾಶ ಸಿಗದೆ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸ ಬೇಕಾದ ಅನಿವಾರ್ಯ ಇದೆ. ಅಲ್ಲಿ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಸಾಗಾಟ ವೆಚ್ಚ ಭರಿಸಬೇಕಾಗಿರುವುದರಿಂದ ಬಡವರಿಗೆ ತುಂಬ ಕಷ್ಟವಾಗುತ್ತಿದೆ. ಕೆಲವೊಮ್ಮೆ ಪೊಲೀಸರೇ ಈ ವೆಚ್ಚ ಭರಿಸಬೇಕಾಗುತ್ತದೆ.
Related Articles
ಕೆಲವು ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಪ್ರಾಯೋಜಕತ್ವ ದಲ್ಲಿ ಸಂಚಾರಿ ಶವ ಶೈತ್ಯಾಗಾರಗಳು (ಆ್ಯಂಬುಲೆನ್ಸ್) ಕಾರ್ಯನಿರ್ವಹಿಸುತ್ತಿವೆ. ಇದರಿಂದ ಅಪರಿಚಿತ ಮೃತದೇಹ ಮಾತ್ರ ವಲ್ಲದೆ ವಿದೇಶ, ದೂರದ ಊರುಗಳಿಂದ ಬಂಧುಗಳು ಬರುವವರೆಗೆ ಸಂರಕ್ಷಿಸಿಡಲು ಅನುಕೂಲವಾಗುತ್ತದೆ. ಬಡವರಿಗೆ ರಿಯಾಯಿತಿ ಬಾಡಿಗೆ ದರದಲ್ಲಿ ಲಭ್ಯವಿ ರುವು ದರಿಂದ ದುಬಾರಿ ಹಣ ಪಾವತಿ ಸುವ ಆವಶ್ಯಕತೆ ಇರುವುದಿಲ್ಲ. ಅಂತಹ ಸಂಚಾರಿ ಶೈತ್ಯಾಗಾರವನ್ನು ತಮ್ಮ ಮನೆ ಗಳಿಗೇ ತರಿಸಬಹುದಾಗಿದೆ.
Advertisement
ಆರೋಗ್ಯ ಕೇಂದ್ರಗಳಲ್ಲಿ ಸಿಬಂದಿ ಕೊರತೆಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಗಳಿಗೆ ಸಂಬಂಧಪಟ್ಟಂತಹ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ತರುವುದರಿಂದ ವೈದ್ಯರಿಗೆ ಹೊರೆಯಾಗುತ್ತದೆ. ಅದರ ಬದಲು ಪುಂಜಾಲಕಟ್ಟೆ ಅಥವಾ ವಾಮದಪದವು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾಗಿಸಿದರೆ ಉತ್ತಮ ಎಂದು ತಾಲೂಕು ಆಸ್ಪತ್ರೆಯು ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಆದರೆ, ಅಲ್ಲಿ ಸಿಬಂದಿ ಕೊರತೆಯಿಂದ ತಾಲೂಕು ಆಸ್ಪತ್ರೆಗೇ ತರಲಾಗುತ್ತಿದೆ. ಇಲಾಖೆಗೆ ಮನವಿ
ತಾ| ವ್ಯಾಪ್ತಿಯಲ್ಲಿ ಶವ ಶೈತ್ಯಾಗಾರ ಇಲ್ಲದಿರುವುದರಿಂದ ಅಪರಿಚಿತ ಮೃತದೇಹಗಳನ್ನು ಇಡಲು ಮಂಗಳೂರಿನ ವೆನಾÉಕ್ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಬೇಕಾಗು ತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 800 ರೂ. ಶುಲ್ಕ ಹಾಗೂ 3 ಸಾವಿರ ರೂ. ಸಾಗಾಟ ವೆಚ್ಚ ನೀಡಬೇಕಾಗಿರುವು ದರಿಂದ ಬಡವರಿಗೆ ಕಷ್ಟವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ.
- ಎಸ್. ಪ್ರಸನ್ನ ಕುಮಾರ್
ಎಸ್.ಐ.,ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಒದಗಿಸುವ ಭರವಸೆ
ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ಫಂಡ್‌ನಲ್ಲಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ
ಶವ ಶೈತ್ಯಾಗಾರ ಒದಗಿಸುವಂತೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಶಾಸಕರಿಗೂ ತಿಳಿಸಲಾಗಿದೆ. ಶಾಸಕರು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಶವ ಶೈತ್ಯಾಗಾರ ಒದಗಿಸುವ ಭರವಸೆ ನೀಡಿದ್ದಾರೆ. ಶೀಘ್ರ ನೀಡುವುದಾಗಿ ಎಂಆರ್‌ಪಿಎಲ್ ತಿಳಿಸಿದೆ.
-ಡಾ| ದೀಪಾ ಪ್ರಭು
ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ - ರತ್ನದೇವ್ ಪುಂಜಾಲಕಟ್ಟೆ