Advertisement
ಅವರು ಶ್ರೀ ಸುಬ್ರಹ್ಮಣ್ಯ ಮಠದಲ್ಲಿ “ತರಂಗ’ ವಾರಪತ್ರಿಕೆ ಹೊರತಂದಿರುವ “ಸುಪ್ರಸನ್ನ’ ಪುಸ್ತಕವನ್ನು ಸೋಮವಾರ ಮಠದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಅವರ ನೇತೃತ್ವದಲ್ಲಿ “ತರಂಗ’ ಬಳಗವು ಸಮಾಜಕ್ಕೆ ಉತ್ತಮ ಸೇವೆ ಹಾಗೂ ಕೊಡುಗೆಗಳನ್ನು ನೀಡುತ್ತ ಬಂದಿದೆ. ಅದರಂತೆ ಮಠದ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ “ಸುಪ್ರಸನ್ನ’ ಎಂಬ ಸುಂದರ ಸಂಚಿಕೆಯೊಂದರ ಮೂಲಕ ಓದುಗರಿಗೆ ನೀಡುತ್ತಿರುವುದು ತುಂಬ ಸಂತಸ ತಂದಿದೆ. ಮಠದ ಸೇವೆ, ಸಾಧನೆಗಳು ಸಮಾಜಕ್ಕೆ ಪರಿಚಯಿಸಿರುವುದು ಉನ್ನತ ಪ್ರಯತ್ನವಾಗಿದೆ. ಅದಕ್ಕಾಗಿ ಬಳಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕೊರೊನಾ ವೈರಸ್‌ನಿಂದ ಇಡೀ ಪ್ರಪಂಚ ತಲ್ಲಣ ಗೊಂಡಿದೆ. ಸಾಮೂಹಿಕ ಸಹಭಾಗಿತ್ವದ ಮೂಲಕ ಸೋಂಕನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು. ಇಂತಹ ಹೊತ್ತಿನಲ್ಲಿ ಸಾತ್ವಿಕ ಗುಣಗಳ ಜ್ಞಾನಕ್ಕೆ ಪೂರಕವಾದ ಮಠದ ಸಂಚಿಕೆಯೂ ಹೊರಬರುತ್ತಿದೆ. ಪುಸ್ತಕ ಓದುವುದರ ಮೂಲಕ ಧಾರ್ಮಿಕ ಪ್ರಜ್ಞೆ ವೃದ್ಧಿಯಾಗಲಿ, ದೇಶಕ್ಕೆ ಅಂಟಿದ ಸೋಂಕು ದೂರವಾಗಲಿ ಎಂದು ಶ್ರೀಪಾದರು ಆಶಯ ವ್ಯಕ್ತಪಡಿಸಿದರು. ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಷ, ಉದ್ಯಮಿ, ಕಲಾವಿದ ಯಜ್ಞೆಶ್ ಆಚಾರ್ ಉಪಸ್ಥಿತರಿದ್ದರು.