Advertisement

ಫ‌ನ್‌ ವೀಕ್‌! ನಕ್ಕೂನಕ್ಕು ಸುಸ್ತಾಯ್ತು…

06:00 AM May 22, 2018 | Team Udayavani |

ಜೀನ್ಸ್‌ ಪ್ಯಾಂಟು, ಟಿ ಶರ್ಟು, ಚೂಡಿದಾರ್‌ನ ಚಮಕ್‌ ಅಲ್ಲಿರಲಿಲ್ಲ. ಯಾವುದೋ ಹಳ್ಳಿಗೆ ಹೊಕ್ಕಂತೆ ಕ್ಯಾಂಪಸ್‌ ರಂಗು ಪಡೆದಿತ್ತು. ಪಂಚೆ, ಶಲ್ಯ, ಸೀರೆ, ಧೋತಿ ಮತ್ತು ಜುಬ್ಟಾದಲ್ಲಿ ಮಿನುಗುತ್ತಿದ್ದರು ಅವರೆಲ್ಲ. ಫ‌ನ್‌ ವೀಕ್‌ ಎನ್ನುವುದು ಕಾಲೇಜು ಮುಗಿಸಿ ಹೊರಡುವ ಸೀನಿಯರ್‌ಗಳಿಗೆ ಜೂನಿಯರ್‌ಗಳು ನೀಡುವ ವಿಶಿಷ್ಟ ಬೀಳ್ಕೊಡುಗೆ. 

Advertisement

ಬರಲಿಲ್ಲ… ನಿದ್ದೆ ಬರಲಿಲ್ಲ. ಕಣ್ಣಲ್ಲಿ ನೀನೇ ಕುಣಿದಿರುವಾಗ, ಕಿವಿಯಲಿ ಗೆಜ್ಜೆಯ ಸದ್ದಿರುವಾಗ, ಚಂದ್ರನು ಚಂದ್ರಿಕೆ ಚಲ್ಲಿರುವಾಗ, ಬರಲಿಲ್ಲ… ನಿದ್ದೆ ಬರಲಿಲ್ಲ- ಹೀಗೊಂದು ಹಾಡು ಕ್ಯಾಂಪಸ್ಸಿನ ಗಾಳಿಯಲ್ಲಿ ಬೆರೆತು ಗಂಧವಾಗಿತ್ತು. ಕ್ಯಾಂಪಸ್‌ನಲ್ಲಿ ಎಲ್ಲಿ ನೋಡಿದರೂ ಬಣ್ಣಬಣ್ಣದ ಬಟ್ಟೆ ತೊಟ್ಟ ಯುವಕ- ಯುವತಿಯರ ರೂಪ ಲಾವಣ್ಯದ ಗಜಲ್ಲು. ಅಂದಹಾಗೆ, ಇವರೆಲ್ಲ ಹೀಗೆ ಸಿಂಗಾರಗೊಂಡಿದ್ದಕ್ಕೆ ಕಾರಣ, ಕಾಲೇಜು ಪಯಣ ಮುಗಿಸಿ ಹೊರಡುವ ಮುನ್ನ “ಫ‌ನ್‌ ವೀಕ್‌’ಗೆ ಸಾಕ್ಷಿಯಾಗಲು. ಅಲ್ಲಿ ಖುಷಿ, ತಮಾಷೆಯದ್ದೇ ಹಿಮ್ಮೇಳ.


  ಎಂದಿನ ಜೀನ್ಸ್‌ ಪ್ಯಾಂಟು, ಟಿ ಶರ್ಟು, ಚೂಡಿದಾರ್‌ನ ಚಮಕ್‌ ಅಲ್ಲಿರಲಿಲ್ಲ. ಯಾವುದೋ ಹಳ್ಳಿಗೆ ಹೊಕ್ಕಂತೆ ಕ್ಯಾಂಪಸ್‌ ರಂಗು ಪಡೆದಿತ್ತು. ಪಂಚೆ, ಶಲ್ಯ, ಸೀರೆ, ಧೋತಿ ಮತ್ತು ಜುಬ್ಟಾದಲ್ಲಿ ಮಿನುಗುತ್ತಿದ್ದರು ಅವರೆಲ್ಲ. ಫ‌ನ್‌ ವೀಕ್‌ ಎನ್ನುವುದು ಸಾಂಸ್ಕೃತಿಕ ಹಬ್ಬ. ಕಾಲೇಜು ಮುಗಿಸಿ ಹೊರಡುವ ಸೀನಿಯರ್‌ಗಳಿಗೆ ಜೂನಿಯರ್‌ಗಳು ನೀಡುವ ವಿಶಿಷ್ಟ ಬೀಳ್ಕೊಡುಗೆ. 

  ಏಪ್ರಿಲ್‌- ಮೇ ಬಂತಂದ್ರೆ, ಪ್ರತಿ ಕಾಲೇಜಿನಲ್ಲೂ ಫ‌ನ್‌ ವೀಕ್‌ ಸದ್ದು ಮಾಡುತ್ತದೆ. ಅದೊಂದು ವಾರ ಪೂರ್ತಿ ವಿಲೇಜ್‌ ಡೇ, ಸ್ಕೂಲ್‌ ಡೇ, ರೌಡಿ ಡೇ, ಜರ್ನಲಿಸ್ಟ್‌ ಡೇ, ಟ್ವಿನ್ಸ್‌ ಡೇ, ಟ್ರಡಿಶನಲ್‌ ಡೇ… ಹೀಗೆ ಪ್ರತಿ ದಿನವೂ ಒಂದು ಟಾಪಿಕ್‌ ಮೇಲೆ ರೆಡಿಯಾಗಿ ಬರಬೇಕು. ಅಂದಿನ ವಿಷಯಕ್ಕೆ ತಕ್ಕಂತೆ ರೆಡಿಯಾಗಿ ಬರೋದು ಅಷ್ಟೇ ಅಲ್ಲ, ಅದರಂತೆಯೇ ಇರಲು ಯತ್ನಿಸಬೇಕು. ಅಲ್ಲೇ ಇರೋದು ಮಜಾ.

ಫ‌ನ್‌ ವೀಕ್‌ನಲ್ಲಿ ಏನಿರುತ್ತೆ?
ಹಾಡು, ಡ್ಯಾನ್ಸು ಇದ್ದೇ ಇರುತ್ತೆ. ಪ್ರತೀ ದಿನವೂ ಜೂನಿಯರ್ ಸೀನಿಯರ್ಗಳಿಗಾಗಿ ಒಂದೊಂದು ವಿಶೇಷ ಕ್ರೀಡೆಯನ್ನು ಆಯೋಜಿಸಿರುತ್ತಾರೆ. ಫ್ಯಾಶನ್‌ ಶೋ, ಟ್ರಜರ್‌ ಹಂಟ್‌, ಕ್ರಿಕೆಟ್‌ ಮಾತ್ರವಲ್ಲದೇ, ಅನೇಕ ಟಾಸ್ಕ್ಗಳೂ ಇಲ್ಲಿರುತ್ತವೆ. ಆ ಟಾಸ್ಕ್ಗಳನ್ನು ಪೂರೈಸುವ ಸಂದರ್ಭದಲ್ಲಿ ಸಿಗುವ ಮನರಂಜನೆಗೆ ಪಾರವೇ ಇರುವುದಿಲ್ಲ.

ಎಂಥ ಎಂಥ ವೇಷಾನೋ…
ಸಾಂಪ್ರದಾಯಿಕ ದಿನವವಂತೂ ನಕ್ಕು ನಲಿಸುವ ಸಂಭ್ರಮ. ಪ್ರತಿಯೊಬ್ಬರೂ ತಮ್ಮ ಗ್ರಾಮದ ಹಾಗೂ ಮನೆತನದ ರೀತಿಯಲ್ಲಿ ಕೊಡವರು, ಗಾಣಿಗರು, ಬ್ರಾಹ್ಮಣರು, ಪಕ್ಕಾ ಹಳ್ಳಿಗಾಡು ಹಾಗೂ ಆದಿವಾಸಿಗಳ ಜನಾಂಗದವರ ಮೂಲ ವಸ್ತ್ರಗಳನ್ನು ಧರಿಸುವ ಮೂಲಕ ನಾಡಿನ ನಾನಾ ಸಂಸ್ಕೃತಿಗಳನ್ನು ಕಾಲೇಜಿನಲ್ಲಿ ಪರಿಚಯಿಸಲಾಯಿತು. ಅವರ ವೇಷಭೂಷಣಗಳಿಗೆ ಕಾಮೆಂಟು ಹೊಡೆಯುವ ಕೆಲಸವನ್ನು ತರಲೆ ಹುಡುಗರು ಮಾಡುತ್ತಿದ್ದರು.

Advertisement

ಟ್ವಿನ್ಸ್‌ ಡೇ ಗೊತ್ತಾ?
ಈ ದಿನ ಕ್ಯಾಂಪಸ್ಸಿನಲ್ಲಿ ಎಲ್ಲೆಲ್ಲೂ ಬ್ರೇಕಿಂಗ್‌ ನ್ಯೂಸು. ಒಂಥರಾ ಯಡಿಯೂರಪ್ಪ- ಸಿದ್ದರಾಮಯ್ಯನವರು ಒಂದಾದಂತೆ! ಹೌದು… ಯಾವತ್ತೂ ಪರಸ್ಪರ ಮಾತಾಡದೇ ಇರೋ ಫ್ರೆಂಡ್ಸ್, ಅವತ್ತು ಮಾತ್ರ ಪಕ್ಕಾ ಅಣ್ಣ- ತಮ್ಮನ ರೀತಿ ವರ್ತಿಸುತ್ತಾ ಇರುತ್ತಾರೆ. ಎಲ್ಲರಿಗೂ ಹಾಯ್‌ ಹೇಳುತ್ತಾ, ಇತರರ ಕಾಲೆಳೆಯುತ್ತಿರುತ್ತಾರೆ. ಅವರನ್ನು ನೋಡಿದರೆ, ಇವರಿಗೆ ಆಗೋಲ್ಲ, ಇವರನ್ನು ನೋಡಿದ್ರೆ, ಅವರಿಗೆ ಆಗೋಲ್ಲ ಎಂಬ ಮನಸ್ಸುಗಳನ್ನು “ಟ್ವಿನ್ಸ್‌ ಡೇ’ ತಿಳಿನೀರಿನಂತೆ ಪರಿಶುದ್ಧ ಮಾಡಿತು.

ಕಡಿಮೆ ಬಜೆಟ್ಟು- ಸಿಕ್ಕಾಪಟ್ಟೆ ಪ್ರಾಫಿಟ್ಟು…
ಹೌದು, ಫ‌ನ್‌ವೀಕ್‌ನಲ್ಲಿ ಆಯೋಜಿಸಿದ್ದ “ಬ್ಯಾಕ್‌-ಟು-ವಿಲೇಜ್‌’ ದಿನವಂತೂ ಬಹಳ ಸುದ್ದಿಮಾಡಿತು. ಏಕೆಂದರೆ, ಅಂದು ಸೀನಿಯರ್ ಗುಂಪನ್ನು ನಾಲ್ಕು ತಂಡವಾಗಿ ವರ್ಗೀಕರಿಸಿ ಪ್ರತಿಯೊಬ್ಬರಿಗೂ ಕೆಲವು ವಸ್ತುಗಳನ್ನು ನೀಡಲಾಗಿತ್ತು. ಅದರಲ್ಲಿ ಚಿಪುÕ, ಲಕ್ಸು, ಕಡಲೆಬೀಜ, ಬಟಾಣಿ ಹಾಗೂ ಮೆಹಂದಿಯನ್ನು ನೀಡಲಾಗಿತ್ತು. ಆದರೆ, ಅದಕ್ಕೆಲ್ಲ ಇನ್‌ವೆಸ್ಟ್‌ ಆಗಿದ್ದು ಮಾತ್ರ 250 ರೂಪಾಯಿ. ಆದರೆ, ಬಂದ ಲಾಭ 10150 ರೂ.! ಹೌದು… 5 ರೂ., 3 ರು. ವಸ್ತುಗಳನ್ನೆಲ್ಲಾ ನಾವು 20 ರೂ.ಗೆ ಮಾರಾಟ ಮಾಡಿದ್ದೆವು. ಅಂಗಡಿಯಲ್ಲಿ ಕೋಲ್ಡ್‌ ಕಾಫಿ ಕುಡಿಯುತ್ತಾ ಪಿಜ್ಜಾ- ಬರ್ಗರ್‌ ಮೆಲ್ಲುತ್ತಿದ್ದ ನಾಲಿಗೆಗಳಿಗೆ, ಅಂದು ಲೋಕಲ್‌ ತಿಂಡಿ ಸವಿಯುವ ಭಾಗ್ಯ. 

ಬರೆಯೋಕೂ ಸೈ, ಬಡಿಯೋಕೂ ಸೈ!
ಫ‌ನ್‌ವೀಕ್‌ನ “ರೌಡಿ ಡೇ’ಗೆ ಇದೇ ಟ್ಯಾಗ್‌ಲೈನ್‌ ಇದು. ಬೆಂಗಳೂರ‌ನ್ನು ಆಳಿದ ಕೊತ್ವಾಲ್‌, ಬ್ಲಾಕ್‌ ಟೈಗರ್‌ ಉಳಿದ ಗಲ್ಲಿ ಗಲ್ಲಿ ರೌಡಿಗಳೆಲ್ಲಾ ಅವತ್ತು ಕಾಲೇಜ್‌ನಲ್ಲೂ ಬಂದು ಇಳಿದಿದ್ದರು! ಅಂದರೆ, ಅವರ ಗೆಟಪ್‌ನಲ್ಲಿ ವಿದ್ಯಾರ್ಥಿಗಳು ಕಾಣಿಸಿಕೊಂಡರು. ಅಂದು ನಾವ್‌ ಮಾಡಿದ್ದೇ ಸೌಂಡು, ರ್ಯಾಗಿಂಗ್‌, ಟಾಕಿಂಗ್‌, ಇಷ್ಟ ಬಂದವರ ಜತೆ ವಾಕಿಂಗ್‌… ಇವೆಲ್ಲವೂ ಒಂದು ಮಿತಿಯೊಳಗೆ ಮನರಂಜನೆ ನೀಡಿದವು.

 ಮೋಹನ ಬಿ.ಎಂ., ಮಾನಸಗಂಗೋತ್ರಿ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next