Advertisement

ಹಸ್ತಲಾಘವಕ್ಕೆ ಮಾಜಿ ಸಚಿವ ಸೋಮಣ್ಣ ಸಿದ್ಧ

03:45 AM Jan 21, 2017 | Team Udayavani |

ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಅವರನ್ನು ದೆಹಲಿಯಲ್ಲಿ ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Advertisement

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಗೆಲುವು ಪಡೆಯುವುದು ಅನಿವಾರ್ಯವಾಗಿರುವುದರಿಂದ ಸೋಮಣ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್‌ ಕೂಡ ತುದಿಗಾಲ ಮೇಲೆ ನಿಂತಿದೆ. ಕಾಂಗ್ರೆಸ್‌ ಸೇರಲು ಸೋಮಣ್ಣ ಅವರಿಗೆ ಕೆಲವು ಆಫ‌ರ್‌ಗಳನ್ನು ನೀಡಲಾಗಿದ್ದು, ಸಚಿವ ಸ್ಥಾನ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರದ ಹನೂರು ಅಥವಾ ತುಮಕೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಭರವಸೆ ಕೂಡ ನೀಡಲಾಗಿದೆ. ಶಾಸಕ ಪ್ರಿಯಾ ಕೃಷ್ಣ
ಒಪ್ಪಿದರೆ, ಗೋವಿಂದರಾಜನಗರ ಕ್ಷೇತ್ರದಲ್ಲಿಯೇ ಸ್ಪರ್ಧೆಗೆ ಅವಕಾಶ ನೀಡುವ ಕುರಿತಂತೆಯೂ ಚರ್ಚೆ ನಡೆಸಲಾಗಿದೆ.

ಗುರುವಾರ ದೆಹಲಿಯಿಂದ ವಾಪಸ್ಸಾದ ವಿ.ಸೋಮಣ್ಣ, ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. “ಕಾಂಗ್ರೆಸ್‌ನಿಂದ ಆಹ್ವಾನ ಇರುವುದನ್ನು ನಾನು ಅಲ್ಲಗಳೆಯುವುದಿಲ್ಲ. ನಾನು ಯಾರ ಜೊತೆಯೂ ಮಾತನಾಡಿಲ್ಲ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ಸೇರುವುದನ್ನು ಒಪ್ಪಿಕೊಂಡಿದ್ದಾರೆ. ಇನ್ನೊಂದೆಡೆ ಇದೆಲ್ಲ ಬೆಳವಣಿಗೆಗಳಿಂದ
ವಸತಿ ಸಚಿವ ಎಂ.ಕೃಷ್ಣಪ್ಪ ಬೇಸರಗೊಂಡಿದ್ದು, ಸೋಮಣ್ಣ ಪಕ್ಷಕ್ಕೆ ಬಂದರೆ, ಗೋವಿಂದರಾಜನಗರ ಹಾಗೂ ವಿಜಯನಗರ ಕ್ಷೇತ್ರಗಳನ್ನು ಬಿಟ್ಟು ರಾಜಾಜಿನಗರ ಅಥವಾ ಬೇರೆ ಎಲ್ಲಾದರೂ ರಾಜಕೀಯ ಜೀವನ ಕಂಡುಕೊಳ್ಳಲಿ ಎಂದು ಆಪ್ತರ ಬಳಿ
ಹೇಳಿಕೊಂಡಿದ್ದಾರೆ ಎನ್ನಲಾಗಿದೆ. 

ಆಪ್ತರ ಜತೆ ಸಭೆ: ಈ ಮಧ್ಯೆ, ದೆಹಲಿಯಿಂದ ವಾಪಸ್‌ ಆದ ನಂತರ ಸೋಮಣ್ಣ ಅವರು ಗುರುವಾರ ಸಂಜೆ ತಮ್ಮ ನಿವಾಸದಲ್ಲಿ ಆಪ್ತರ
ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿ, “38 ವರ್ಷದಿಂದ ನಾನು ರಾಜಕೀಯದಲ್ಲಿದ್ದೇನೆ. ನಾನು ಸ್ವಾಭಿಮಾನಿ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಸಿಡಿದು ನಿಲ್ಲುತ್ತೇನೆ. ಬಿಜೆಪಿಗೆ ಬಂದು ಹತ್ತು ವರ್ಷ ಆಯಿತು. ಈಗ ಗೊಂದಲ ಸೃಷ್ಠಿಸುವ ಪ್ರಯತ್ನ
ನಡೆಯುತ್ತಿದೆ. ನನ್ನ ಜೀವನ ತೆರೆದ ಪುಸ್ತಕ ಇದ್ದ ಹಾಗೆ. ಆ ತೆರೆದ ಪುಸ್ತಕಕ್ಕೆ ಸ್ವಲ್ಪ ಕೂಡ ತೊಂದರೆ ಆಗಬಾರದು. ರಾಜಕಾರಣ 
ಒಂದು ರೀತಿ ಅವಕಾಶ. ಜನವರಿ 22 ರಂದು ನಡೆಯುವ ಕಾರ್ಯಕಾರಿಣಿಗೆ ನಾನು ಸಾಧ್ಯವಾದರೆ ಹೋಗುತ್ತೇನೆ. ದುಡಿ 
ಯುವಎತ್ತಿಗೆಹುಲ್ಲುಕೊಡಿಅಂತಾಕೇಳ್ಳೋ ದು ನಮ್ಮ ಧರ್ಮ. ಅದನ್ನು ಮಾಡಬೇಕಾ ದವರು ಅರಿತುಕೊಳ್ಳಬೇಕು. ಅರಿತುಕೊಳ್ಳ
ಬೇಕಾದವರಿಗೆ ಕೆಲವರು ತುಪ್ಪ ಸುರಿಯುತ್ತಿ ದ್ದಾರೆ. ಪಕ್ಷದಲ್ಲಿ ಮೂರ್ನಾಲ್ಕು ಜನ ನಿರು ದ್ಯೋಗಿಗಳಿದ್ದಾರೆ’ ಎಂದು ಪರೋಕ್ಷವಾಗಿ
ಅಸಮಾಧಾನ ಹೊರಹಾಕಿದ್ದಾರೆ.

“ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಅನಂತಕುಮಾರ್‌, ಆರ್‌. ಅಶೋಕ್‌, ಜಗದೀಶ್‌ ಶೆಟ್ಟರ್‌, ಪ್ರಹ್ಲಾದ್‌ ಜೋಶಿ, ಸದಾನಂದ ಗೌಡ ಸೇರಿದಂತೆ ನಾವೆಲ್ಲರೂ ಸಾಮರಸ್ಯದಿಂದ ಇದ್ದೇವೆ. ಸರಿ ಮಾಡಿಕೊಳ್ಳೋರು ಮಾಡಿಕೊಳ್ಳಬೇಕು ಎಂದು ಯಡಿಯೂರಪ್ಪ ಹೆಸರು
ಹೇಳದೆ ಸಭೆಯಲ್ಲಿ ಮಾತನಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಹಾಲಿ ಕಾರ್ಪೊರೇಟರ್‌ಗಳಾದ ಮೋಹನ್‌ ರಾಜು, ಉಮೇಶ್‌ ಶೆಟ್ಟಿ ಹಾಗೂ ಮಾಜಿ ಕಾರ್ಪೊರೇಟರ್‌ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement

ಸೋಮಣ್ಣ ಜತೆ ಮಾತುಕತೆಯಾಗಿಲ್ಲ

ಮಂಗಳೂರು: ಸೋಮಣ್ಣ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬು ದು ಕೇವಲ ವದಂತಿಯಷ್ಟೇ ಎಂದು ಸಿಎಂ ಸಿದ್ದರಾಮಯ್ಯ
ಹೇಳಿದರು. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಜೊತೆ ಇಂತಹ ಯಾವುದೇ ಮಾತುಕತೆಗಳು ನಡೆದಿಲ್ಲ. ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು. ಎತ್ತಿನ ಹೊಳೆ ಯೋಜನೆ ವಿರುದ್ದ ಸರ್ಜಿಕಲ್‌
ಹೋರಾಟದ ಘೋಷಣೆ ರಾಜಕೀಯ ಪ್ರೇರಿತ ಕ್ರಮವಾಗಿದೆ. ಯೋಜನೆ ಬಗ್ಗೆ ಕರಾವಳಿ ಭಾಗದ ಜನಪ್ರತಿನಿಧಿಗಳು, ಹೋರಾಟಗಾರರ ಪ್ರತಿನಿಧಿಗಳೊಂದಿಗೆ ಈಗಾಗಲೇ ಬೆಂಗಳೂರಿನಲ್ಲಿ ಸಭೆನಡೆಸಿ ಚರ್ಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next