Advertisement
ಜನಸಂಖ್ಯಾ ಸ್ಫೋಟ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ದೇಶದ ಅರಣ್ಯ ಸಂಪತ್ತು ಸಾಕಷ್ಟು ನಾಶವಾಗಿದೆ. ಕಾಡಿನ ಮಾರಣಹೋಮ ಪ್ರತ್ಯಕ್ಷ ಪರೋಕ್ಷವಾಗಿ ನಿರಂತರವಾಗಿ ನಡೆಯುತ್ತಲೇ ಇದೆ. ಬೇಸಿಗೆ ಪ್ರಾರಂಭವಾಯಿತೆಂದರೆ ಮೀಸಲು ಅರಣ್ಯ ಪ್ರದೇಶ ಮತ್ತು ಕಾಡಂಚಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗುತ್ತದೆ. ಏಕೆಂದರೆ, ಯಾವ ಆಗಂತುಕರು ಬಂದು ಕಾಡಿಗೆ ಬೆಂಕಿ ಹಚ್ಚುತ್ತಾರೋ ಎನ್ನುವ ಭಯ.
Related Articles
-ಅರಣ್ಯ ರಕ್ಷಕ- 240
-ಉಪವಲಯ ಅರಣ್ಯಾಧಿಕಾರಿ ಹಾಗೂ ಮೋಜಣಿದಾರ- 329
-ಅರಣ್ಯ ವೀಕ್ಷಕ- 94
-ವಲಯ ಅರಣ್ಯಾಧಿಕಾರಿ – 73
-ಬ್ಯಾಕ್‌ಲಾಗ್ ವಲಯ ಅರಣ್ಯಾಧಿಕಾರಿ-5
-ಒಟ್ಟು 736 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Advertisement
ವಯೋಮಿತಿ- ವಿದ್ಯಾರ್ಹತೆ: ಅರಣ್ಯ ರಕ್ಷಕ, ಉಪವಲಯ ಅರಣ್ಯಾಧಿಕಾರಿ, ಮೋಜಣಿದಾರ, ಅರಣ್ಯ ವೀಕ್ಷಕ ಹುದ್ದೆಗೆ ಹುದ್ದೆಗಳಿಗೆ 18ರಿಂದ 32ರವರೆಗೆ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಸಾಮಾನ್ಯ ವಿದ್ಯಾರ್ಹತೆ ಜೊತೆಗೆ ದೇಹದಾಡ್ಯ ಪರೀಕ್ಷೆ ಇರುತ್ತದೆ. ಕ್ರೀಡಾ ಕೋಟಾದ ಅವಕಾಶ ಬಳಸಿಕೊಳ್ಳಬಹುದು.
ಅರಣ್ಯ ವೀಕ್ಷಕ ಹುದ್ದೆಗಳಿಗೆ ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು, ಕಾರವಾರ, ಕೊಡಗು, ಮಂಗಳೂರು ವೃತ್ತಗಳಿಗೆ ಹುದ್ದೆಗಳನ್ನು ಭಾಗ ಮಾಡಲಾಗಿದೆ. ವಲಯ ಅರಣ್ಯಾಧಿಕಾರಿ ಮತ್ತು ಬ್ಯಾಕ್‌ಲಾಗ್ ವಲಯ ಅರಣ್ಯಾಧಿಕಾರಿ 56 ಹುದ್ದೆಗಳಿಗೆ ಬಿಎಸ್ಸಿ(ಅರಣ್ಯಶಾಸ್ತ್ರ) ಪದವಿ ಹಾಗೂ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವೀಧರರಿಗೆ 17 ಹುದ್ದೆಗಳನ್ನು ವಿಭಾಗಿಸಲಾಗಿದೆ. ಅರಣ್ಯಶಾಸ್ತ್ರ, ತೋಟಗಾರಿಕೆ, ಪಶುವಿಜ್ಞಾನದಲ್ಲಿ ಪದವಿ ಅಥವಾ ಎರಡಕ್ಕಿಂತ ಹೆಚ್ಚು ವಿಷಯದಲ್ಲಿ ಬಿಎಸ್ಸಿ ಪದವಿ ಹೊಂದಿರಬೇಕು.
ಆಯ್ಕೆ: ಅರಣ್ಯ ರಕ್ಷಕ, ಉಪವಲಯ ಅರಣ್ಯಾಧಿಕಾರಿ, ಮೋಜಣಿದಾರ, ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ, ದೂರದೃಷ್ಟಿ, ಸಮೀಪ ದೃಷ್ಟಿ, ಶ್ರವಣ ಪರೀಕ್ಷೆ, ದೈಹಿಕ ತಾಳ್ವಿಕೆ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ.
ವಲಯ ಮತ್ತು ಬ್ಯಾಕ್‌ಲಾಗ್ ವಲಯ ಅರಣ್ಯಾಧಿಕಾರಿ ಹುದ್ದೆಗೆ 200-200 ಅಂಕಗಳ ಪೂರ್ವ ಮತ್ತು ಮುಖ್ಯ ಪರೀಕ್ಷೆ ನಡೆಲಾಗುತ್ತದೆ. ಪೂರ್ವ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ(100) ಮತ್ತು ಆ್ಯಪ್ಟಿಟ್ಯೂಡ್(100 ಅಂಕ) ಲಿಖೀತ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಪೂರ್ವಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಮುಖ್ಯ ಪರೀಕ್ಷೆಗೆ ಅವಕಾಶ.
ಇಲ್ಲಿ ಕನ್ನಡ, ಇಂಗ್ಲಿಷ್ ಕಡ್ಡಾಯ ಮತ್ತು ಅರಣ್ಯ ವಿಷಯಗಳ ಪರೀಕ್ಷೆ, ಐಚ್ಛಿಕ ವಿಷಯಗಳ ಪರೀಕ್ಷೆಯನ್ನೂ ನಡೆಸಲಾಗುತ್ತದೆ. ಇಲ್ಲಿಯೂ ದೇಹದಾಡ್ಯ ಪರೀಕ್ಷೆ ಸಾಮಾನ್ಯವಾಗಿದ್ದು ಪುರುಷರಿಗೆ ಎತ್ತರ 163 ಸೆ.ಮೀ ಮತ್ತು ಎದೆ ಸುತ್ತಳತೆ ಗರಿಷ್ಠ 79 ಸೆ.ಮೀ, ಕನಿಷ್ಠ 74 ಸೆ.ಮೀ ಇರಬೇಕು. ಮಹಿಳೆಯರಿಗೆ ಎತ್ತರ 150 ಮೀಟರ್ ಇರಬೇಕು.
ಅರ್ಜಿ ಸಲ್ಲಿಕೆ: ಎಲ್ಲ ಹುದ್ದೆಗಳಿಗೂ ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗಿದ್ದು, ಅರಣ್ಯ ರಕ್ಷಕ, ರೇಂಜ್, ಡೆಪ್ಯುಟಿ ರೇಂಜ್ ಆಫೀಸರ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಮೇ 8 ಕಡೆಯ ದಿನವಾಗಿದ್ದು, ಫಾರೆಸ್ಟ್ ವಾಚರ್(ಅರಣ್ಯ ವೀಕ್ಷಕ) ಹುದ್ದೆಗೆ ಮೇ 15 ಕಡೆಯ ದಿನವಾಗಿದೆ ಹೆಚ್ಚಿನ ಮಾಹಿತಿಗೆ www.aranya.gov.in ಮತ್ತು www.karnatakaforest.gov.in ಜಾಲತಾಣವನ್ನು ಸಂಪರ್ಕಿಸಿ.