Advertisement
ಕೊಳ್ತಿಗೆ ಗ್ರಾಮದ ರಬ್ಬರ್ ತೋಟದಲ್ಲಿ ಗದ್ದಲ ಎಬ್ಬಿಸಿದ ಕಾಡಾನೆಯನ್ನು ಅರಣ್ಯ ಇಲಾಖೆಅಲ್ಲಿಂದ ಅಟ್ಟುವಲ್ಲಿ ಯಶಸ್ವಿಯಾ ಗಿತ್ತು. ಬಳಿಕ ಸವಣೂರು ಗ್ರಾಮದ ಪಾಲ್ತಾಡಿ, ಕುಮಾರಮಂಗಲ, ಪುಣcಪ್ಪಾಡಿ ಪ್ರದೇಶದಲ್ಲಿ ಕಾಣಿಸಿ ಕೊಂಡು ತೋಟದ ಬೆಳೆಗಳನ್ನು ಹಾನಿ ಮಾಡಿತ್ತು. ಬಳಿಕ ಕೆಯ್ಯೂರು ಗ್ರಾಮದ ತೆಗ್ಗು, ಓಲೆಮುಂಡೋವು ಪರಿಸರದಲ್ಲಿ ಕೃಷಿ ಹಾನಿ ಮಾಡಿತ್ತು. ಅರಣ್ಯ ಇಲಾಖೆ ಸಿಬಂದಿ ಅಲ್ಲಿಂದಲೂ ಅಟ್ಟಿದ್ದರು. ಅನಂತರ ಸವಣೂರು ಗ್ರಾಮದ ಪುಣcಪ್ಪಾಡಿಯಲ್ಲಿ , ನರಿಮೊಗರು ಗ್ರಾಮದ ವೀರಮಂಗಲ, ಶಾಂತಿಗೋಡಿನ ಗೇರು ಅಭಿವೃದ್ಧಿ ಮತ್ತು ಸಂಶೋಧನ ಕೇಂದ್ರದ ಗೇರು ತೋಪಿನೊಳಗೆ ಒಂದು ರಾತ್ರಿ ಕಳೆದಿದೆ.
ಜೂ. 11ರ ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿಯ ತೋಟದಲ್ಲಿ 2 ಆನೆಗಳು ಕಂಡು ಬಂದಿವೆ. ಇನ್ನೊಂದು ಆನೆ ಯಾವ ಭಾಗದಿಂದ ಸೇರಿಕೊಂಡಿದೆ ಅನ್ನುವ ಬಗ್ಗೆ ಇಲಾಖೆ ಪರಿಶೀಲನೆ ನಡೆಸುತ್ತಿದೆ.