Advertisement

ಆತಂಕ ಸೃಷ್ಟಿಸಿದ ಕಾಡಾನೆ ಮತ್ತೆ ಕಾಡಿಗೆ

01:38 PM Jun 08, 2018 | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಅಹಾರವನ್ನರಸಿ ಹೊರ ಬಂದಿದ್ದ ಕಾಡಾನೆಯೊಂದು ಕಾಡಂಚಿನಲ್ಲಿ ನಿರ್ಮಿಸಿದ್ದ ತಡೆಗೋಡೆಯಿಂದಾಗಿ ಕಾಡು ಸೇರಲು ಪರಿಪಾಟಿಲು ನಡೆಸಿ, ಕಾಡಂಚಿನ ಗ್ರಾಮಗಳಲ್ಲಿ ಅವಘಡ ಸೃಷ್ಟಿಸಿ ಆತಂಕ ಉಂಟು ಮಾಡಿದ್ದ ಆನೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸಪಟ್ಟು ಕೊನೆಗೂ ಕಾಡು ಸೇರಿಸಿದ್ದಾರೆ. 

Advertisement

ನಾಗರಹೊಳೆ ಉದ್ಯಾನವನದಂಚಿನ‌ ವೀರನಹೊಸಳ್ಳಿವಲಯ ವ್ಯಾಪ್ತಿಯ  ಹನಗೋಡು ಹೋಬಳಿಯ ಕೊಳುವಿಗೆ, ಮುದುಗನೂರು ಮಾರ್ಗವಾಗಿ ಹಾದುಹೋಗಿ  ಚಿಕ್ಕಹೆಜ್ಜೂರು ಹಾಡಿಗೆ ನುಗ್ಗಿ ಬೆ„ಕೊಂದನ್ನು ಜಖಂಗೊಳಿಸಿದೆ, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಎಚ್ಚೆತ್ತುಕೊಂಡಿದ್ದರಿಂದ ಬಚಾವಾಗಿದ್ದಾರೆ. 

ಲಕ್ಷ್ಮಣತೀರ್ಥ ನದಿ ಬಳಿಯಿಂದ ದಾಟಿ ಹೊರ ಬಂದಿರುವ ಹೆಣ್ಣಾನೆಯು ಬುಧವಾರ ರಾತ್ರಿ ಅಡ್ಡಾಡಿ ದಾರಿಯುದ್ದಕ್ಕೂ ಸಿಕ್ಕ ಬೆಳೆಯನ್ನು ತಿಂದು ಹಾಕಿ ರೈಲ್ವೆ ಹಳಿ ಬೇಲಿ ದಾಟಲಾಗದೆ ಪರಿತಪಿಸಿದೆ. ಅಷ್ಟರಲ್ಲಿ ಬೆಳಗಾಗಿದ್ದರಿಂದ ಕಾಡಿನೊಳಗೆ ಹೋಗಲು ಕೊಳುವಿಗೆ-ಮುದುಗನೂರು  ಬಳಿ ಅಡ್ಡಾಡುತ್ತಿದ್ದುದನ್ನು ಕಂಡು ಸಾಕಷ್ಟು ಮಂದಿ ಗ್ರಾಮಸ್ಥರು ಜಮಾಯಿಸಿದ್ದರಿಂದ

ಗಾಬರಿಗೊಂಡ ಆನೆಯು ಚಿಕ್ಕಹೆಜ್ಜೂರು ಹಾಡಿಯೊಳಗೆ ನುಗ್ಗಿ ರಮೇಶ್‌ ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನು ಜಖಂಗೊಳಿಸಿದೆ. ಹಾಡಿ ಮಂದಿ ಗಾಬರಿಗೊಂಡು ಮನೆ ಸೇರಿ ಕೊಂಡು ಕೂಗಿ ಕೊಂಡಿದ್ದರಿಂದ  ಆನೆಯು ಕಾಡಂಚಿನ ಕಡೆಗೆ ದೌಡಾಯಿಸಿತಾದರೂ ತಡೆಗೋಡೆ ದಾಟಲಾಗದೆ ಸುತ್ತಮುತ್ತಲಿನಲ್ಲಿ ಓಡಾಡಿ ಬೀತಿ ಹುಟ್ಟಿಸಿದೆ. 

ವಿಷಯ ತಿಳಿದ ವೀರನಹೊಸಳ್ಳಿ ವಲಯ ಅರಣ್ಯಾಧಿಕಾರಿ ಮಧುಸೂಧನ್‌ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ  ಅನೆಯನ್ನು ಕಾಡಿಗಟ್ಟಲು ಕೊಳುವಿಗೆಯ ಶ್ರೀರಾಮಲಿಂಗೇಶ್ವರ ದೇವಾಲಯದ ಬಳಿ ಇರುವ ಗೇಟ್‌ ತೆರೆದು ಪ್ರಯತ್ನಪಟ್ಟರೂ ಆನೆ ಕಾಡು ಸೇರಲು ನಿರಾಕರಿಸಿತು.

Advertisement

ಕೊನೆಗೆ ಹತ್ತಿರದ ಮತ್ತೂಂದು ಕಡೆ ತಡೆಗೋಡೆಯ ಕಂಬಿಗಳನ್ನು ತೆಗೆದು ಜನರ ಸಹಾಯದೊಂದಿಗೆ ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ಈ ಭಾಗದ ಎಲ್ಲೆಡೆ ರೈಲ್ವೆ ಕಂಬಿ ತಡೆ ಗೋಡೆ ನಿರ್ಮಿಸಿದ್ದರೂ ಆನೆ ಹೊರ ಬಂದಿದ್ದಾರೂ ಹೇಗೆಂಬ ಪ್ರಶ್ನೆ ಇದೀಗ ಎದುರಾಗಿದ್ದು, ಲಕ್ಷ್ಮಣತೀರ್ಥ ನದಿಯ ಅಂಚಿನಿಂದ ಹೊರ ಬಂದಿರಬಹುದೆಂದು ಶಂಕಿಸಲಾಗಿದೆ

ಸೆರೆಸಿಕ್ಕ ಸಿರತೆ
ಮೈಸೂರು: ಕಳೆದ ಹಲವು ದಿನಗಳಿಂದ ಕೆಂಪಯ್ಯನಹುಂಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆಸಿಕ್ಕಿದ್ದು, ಇದರಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಗ್ರಾಮದ ಬೀದಿನಾಯಿಗಳು, ಹಸುಗಳ ಮೇಲೆ ದಾಳಿ ನಡೆಸುತ್ತಿತ್ತು.

ಇದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆ ಹಿಡಿಯಲು ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಪೈಪ್‌ ಕಾರ್ಖಾನೆ ಸಮೀಪದಲ್ಲಿ ಬೋನನ್ನು ಇರಿಸಿದ್ದರು.

ಅದರಂತೆ ಕಳೆದ ರಾತ್ರಿ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿದ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆರೆ ಸಿಕ್ಕಿರುವ ಚಿರತೆಯನ್ನು ಎಚ್‌.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next