Advertisement

ಉತ್ತರ ಪ್ರದೇಶ ಮೊದಲ ಹಂತ: ಶೇ. 64 ಮತದಾನ

03:45 AM Feb 12, 2017 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಶೇ.64ರಷ್ಟು ಮತದಾನವಾಗಿದೆ. 2012ರ ಚುನಾವಣೆಯಲ್ಲಿ ಶೇ.59ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ.5ರಷ್ಟು ಹೆಚ್ಚಳ ಕಂಡಿದೆ. 73 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದ್ದು, ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿದ್ದು ವಿಶೇಷ. ಶೇ.60.28ರಷ್ಟು ಮಹಿಳೆಯರು ಮತ ಚಲಾಯಿಸಿದ್ದು, ಪುರುಷ ಮತದಾರ ಪ್ರಮಾಣ 

Advertisement

ಶೇ. 58.68 ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಉ.ಪ್ರ. ದಲ್ಲಿ ಇನ್ನೂ 6 ಹಂತಗಳ ಮತದಾನ ನಡೆಯಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next