Advertisement

ಪ್ರಥಮ ಏಕದಿನ ಪಂದ್ಯದ ಅಂಪಾಯರ್‌ ಲೂ ರೋವನ್‌ ನಿಧನ

03:45 AM Feb 04, 2017 | Team Udayavani |

ಗೋಲ್ಡ್‌ ಕೋಸ್ಟ್‌ (ಆಸ್ಟ್ರೇಲಿಯ): ಕ್ರಿಕೆಟ್‌ ಇತಿಹಾಸದ ಪ್ರಪ್ರಥಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಾರ್ಯ ನಿಭಾಯಿಸಿದ್ದ ಆಸ್ಟ್ರೇಲಿಯದ ಅಂಪಾಯರ್‌ ಲೂ ರೋವನ್‌ ಶುಕ್ರವಾರ ಕ್ವೀನ್ಸ್‌ಲ್ಯಾಂಡಿನ ಗೋಲ್ಡ್‌ ಕೋಸ್ಟ್‌ನಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಜೀವಂತವಿದ್ದ ಅತ್ಯಂತ ಹಿರಿಯ ಅಂಪಾಯರ್‌ ಎಂಬ ಹೆಗ್ಗಳಿಕೆ ರೋವನ್‌ ಅವರದಾಗಿತ್ತು.

Advertisement

ಲೂ ರೋವನ್‌ 25 ಟೆಸ್ಟ್‌ ಪಂದ್ಯಗಳಲ್ಲೂ ಅಂಪಾಯರ್‌ ಆಗಿ ಕಾಣಿಸಿಕೊಂಡಿದ್ದರು. ಆದರೆ ಏಕದಿನದಲ್ಲಿ ಮಾತ್ರ ಅವರ ಸೇವೆ ಒಂದು ಪಂದ್ಯಕ್ಕಷ್ಟೇ ಸೀಮಿತವಾಗಿತ್ತು. ಆಸ್ಟ್ರೇಲಿಯ ಮತ್ತು ಪ್ರವಾಸಿ ಇಂಗ್ಲೆಂಡ್‌ ನಡುವಿನ 1971ರ ಮೆಲ್ಬರ್ನ್ ಟೆಸ್ಟ್‌ ಪಂದ್ಯದಲ್ಲಿ ಮಳೆಯೇ ಆಟವಾಡಿದಾಗ ಕೊನೆಗೆ, ಜ. 5ರಂದು 40 ಓವರ್‌ಗಳ ಏಕದಿನ ಪಂದ್ಯ ವನ್ನು ಆಡಿಸಿದ್ದು, ಇದು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ರಾಂತಿಯನ್ನೆಬ್ಬಿಸಿದ್ದು ಈಗ ಇತಿಹಾಸ.  

ಸಿಡ್ನಿ ಟೆಸ್ಟ್‌ ವಿವಾದ: 60ರ ದಶಕದ ಖ್ಯಾತ ಅಂಪಾಯರ್‌ ಎಂಬ ಹೆಗ್ಗಳಿಕೆಯ ಲೂ ರೋವನ್‌ 1971ರ ವಿವಾದಾತ್ಮಕ ಸಿಡ್ನಿ ಟೆಸ್ಟ್‌ ಪಂದ್ಯದಿಂದ ವಿಶ್ವ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿದ್ದರು. 

ಅಂದು ಆಸ್ಟ್ರೇಲಿಯದ ಟೆರ್ರಿ ಜೆನ್ನರ್‌ ಅವರಿಗೆ ಭಯಾನಕ ಬೌಲಿಂಗ್‌ ಮಾಡಿದ ಇಂಗ್ಲೆಂಡಿನ ಜಾನ್‌ ಸ್ನೋ ಅವರಿಗೆ ರೋವನ್‌ ಎಚ್ಚರಿಕೆ ನೀಡಿ ದ್ದರು. ಬಳಿಕ ಸ್ನೋ ಬೌಂಡರಿ ಲೈನ್‌ನಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದಾಗ ಆಸೀಸ್‌ ವೀಕ್ಷಕನೊಬ್ಬ ಅವರ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದ. ಇದನ್ನು ಪ್ರತಿಭಟಿಸಿದ ಇಂಗ್ಲೆಂಡ್‌ ನಾಯಕ ರೇ ಇಲ್ಲಿಂಗ್‌ವರ್ತ್‌ ತಂಡವನ್ನೇ ಮೈದಾನದಿಂದ ಹೊರಕ್ಕೆ ಕೊಂಡೊಯ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next