Advertisement

ಮಸ್ಕಿ: ಪ್ರಥಮ ಸಾಹಿತ್ಯ ಸಂಮ್ಮೇಳನ ಸಡಗರ

12:31 PM Feb 14, 2021 | Team Udayavani |

ಮಸ್ಕಿ (ರಾಯಚೂರು): ನೂತನ ಮಸ್ಕಿ ತಾಲ್ಲೂಕಿನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಂಮ್ಮೇಳನಾಧ್ಯಕ್ಷರ ಮೆರವಣಿಗೆ ಭಾನುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.

Advertisement

ಗಚ್ಚಿನಮಠದಲ್ಲಿ ತಹಶೀಲ್ದಾರ ಬಲರಾಮ ಕಟ್ಟಿಮನಿ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ , ಕಾಡಾದ ಮಾಜಿ ಅದ್ಯಕ್ಷ ಆರ್. ಬಸನಗೌಡ ಸಂಮ್ಮೇಳನಾಧ್ಯಕ್ಷ ಶರಭಯ್ಯ ಸ್ವಾಮಿ ಗಣಚಾರಿ ಅವರಿಗೆ ಮಾಲಾರ್ಪಣೆ ಮಾಡಿ ರಥದಲ್ಲಿ ಕಳಿಸಿದರು.

ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಆಮಿದಿಹಾಳ ಲಂಕೆಪ್ಪ ಮತ್ತು ತಂಡದ ಕಣಿ ಹಲಿಗೆ, ಆಮರೇಶ ಹಸಮಕಲ್ ತಂಡದ ಹಗಲು ವೇಷಗಾರರ ತಂಡ ಸೇರಿದಂತೆ ವಿವಿಧ ಕಲಾ ತಂಡಗಳು ಗಮನ ಸೆಳೆದವು.

ಇದನ್ನೂ ಓದಿ:ಫ್ರಂ ಪುಲ್ವಾಮ, ವಿಷಾದನೀಯ ನೆನಪುಗಳು..!

ಮಹಿಳೆಯರು ಪೂರ್ಣಕುಂಭ ಹಾಗೂ ಕಳಸದೊಂದಿಗೆ ಮೆರವಣಿಗೆಯಲ್ಲಿ ಭಾಗವವಹಿಸಿದ್ದರು. ವಿವಿಧ ಮಕ್ಕಳ ವೇಷಭೂಷಣ ಗಮನ ಸೆಳೆದವು.

Advertisement

ಕಸಾಪ ತಾಲ್ಲೂಕು ಘಟಕದ ಅದ್ಯಕ್ಷ. ಘನಮಠದಯ್ಯ ಸಾಲಿಮಠ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಕಾಡಾ ಮಾಜಿ ಅಧ್ಯಕ್ಷ ಆರ್. ಬ‌ಸನಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಣ್ಣ ನಾಯಕ, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಪಾಟೀಲ್, ಉಪಾಧ್ಯಕ್ಷೆ ಕವಿತಾ ಎಂ‌ ಮಾಟೂರ,ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ಮಿ, ಬಸ‌ನಗೌಡ ಪೊಲೀಸ್ ಪಾಟೀಲ್, ಮಹಾಂತೇಶ ಮಸ್ಮಿ ಸೇರಿದಂತೆ ಮುಖಂಡರು ಮತ್ತು  ನೂರಾರು ಸಾಹಿತಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next