ಚಿಲಿಕಾ: ದೇಶದ ಮೊದಲ ಅಗ್ನಿವೀರರ ತಂಡದ ನಿರ್ಗಮನ ಪಥಸಂಚಲನ ಮಂಗಳವಾರ ಒಡಿಶಾದ ಐಎನ್‌ಎಸ್ ಚಿಲ್ಕಾದಲ್ಲಿ ನಡೆದಿದೆ.
Advertisement
272 ಮಹಿಳೆಯರೂ ಸಹಿತ ಒಟ್ಟು 2,585 ಅಗ್ನಿವೀರರು ತಮ್ಮ 4 ತಿಂಗಳ ಕಠಿನ ತರಬೇತಿಯನ್ನು ಪೂರ್ಣಗೊಳಿಸಿ, ನೌಕಾಪಡೆಗೆ ಸೇರಲು ಸಜ್ಜಾಗಿದ್ದಾರೆ.
ಇದೇ ಮೊದಲ ಬಾರಿಗೆ ಸೂರ್ಯಾಸ್ತದ ಬಳಿಕ ನಡೆದ ಪಾಸಿಂಗ್ ಔಟ್ ಪರೇಡ್‌ನಲ್ಲಿ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ, ಮಾಜಿ ಕ್ರಿಕೆಟರ್ ಮಿಥಾಲಿ ರಾಜ್ ಮತ್ತಿತರ ಗಣ್ಯರಿದ್ದರು.
Related Articles
Advertisement