Advertisement

ಗುಡಿಸಲಿಗೆ ಬೆಂಕಿ ತಗುಲಿ ಹಸುಳೆ ಸಜೀವ ದಹನ

03:45 AM Feb 11, 2017 | Team Udayavani |

ಹನೂರು: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಆಲಂಬಾಡಿ ಗಿರಿಜನರ ಹಾಡಿಯಲ್ಲಿ ಆನೆ ಓಡಿಸಲು ಹಾಕಿದ್ದ
ಬೆಂಕಿಯ ಕಿಡಿ ಗುಡಿಸಲಿಗೆ ತಗುಲಿ 9 ತಿಂಗಳ ಹಸುಳೆಯೊಂದು ಸಜೀವ ದಹನವಾಗಿದೆ. 

Advertisement

ಆಲಂಬಾಡಿಯ ಸುರೇಶ್‌ ಮತ್ತು ಮುತ್ತುಲಕ್ಷ್ಮೀ ದಂಪತಿಯ ಮಗು ಮೃತಪಟ್ಟಿರುವ ದುರ್ದೈವಿ. ವರ್ಷದ ಹಿಂದೆ ಇವರಿಬ್ಬರಿಗೆ ವಿವಾಹವಾಗಿದ್ದು, ದಂಪತಿಗೆ 9 ತಿಂಗಳ ಮಗುವಿತ್ತು. ಗ್ರಾಮದ ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಜಮೀನು ನೀಡಲಾಗಿದ್ದು, ಇಲ್ಲಿಯೇ ಗುಡಿಸಲು ಕಟ್ಟಿಕೊಂಡು ಅವರು ಜೀವನ ಸಾಗಿಸುತ್ತಿದ್ದರು. ಜಮೀನಿಗೆ ಆನೆಗಳು ಆಗಾಗ್ಗೆ ಲಗ್ಗೆ ಇಡುತ್ತಿದ್ದು, ಆನೆಗಳನ್ನು ಓಡಿಸಲು ನಿತ್ಯ ಬೆಂಕಿ ಹಾಕುತ್ತಿದ್ದರು.

ಎಂದಿನಂತೆ ಬುಧವಾರ ರಾತ್ರಿಯೂ ಬೆಂಕಿ ಹಾಕಿದ್ದರು. ಗುರುವಾರ ಬೆಳಗಿನವರೆಗೂ ಅದರ ಕಿಡಿಗಳು ಉಳಿದಿದ್ದವು. ಗುರುವಾರ 
ಬೆಳಗ್ಗೆ ಗಾಳಿಗೆ ಬೆಂಕಿಯ ಕಿಡಿಗಳು ಹಾರಿ ಬಂದು ಗುಡಿಸಲಿಗೆ ಬೆಂಕಿ ತಗುಲಿತು. ಈ ವೇಳೆ, ಸುರೇಶ ಕೆಲಸ ನಿಮಿತ್ತ ಹೊರಗಡೆ
ತೆರಳಿದ್ದರು. ಮುತ್ತುಲಕ್ಷ್ಮೀ ನೀರು ತರಲು ನದಿ ಕಡೆಗೆ ತೆರಳಿದ್ದರು. ಹೀಗಾಗಿ ಗುಡಿಸಲಿಗೆ ಬೆಂಕಿ ಬಿದ್ದುದು ಯಾರಿಗೂ ತಿಳಿಯಲಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಗುಡಿಸಲು ಭಸ್ಮವಾಗಿದ್ದು, ಒಳಗಿದ್ದ ಮಗು ಜೀವಂತ ದಹನಗೊಂಡಿದೆ. ಗುಡಿಸಲೊಳಗಿದ್ದ ಧವಸ-ಧಾನ್ಯಗಳೂ
ಬೆಂಕಿಗಾಹುತಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next