Advertisement
ಲೀಗ್ ಹಂತದ ಕೊನೆಯ ದಿನದ ಎರಡು ಪಂದ್ಯಗಳನ್ನು ಒಂದೇ ಸಮಯದಲ್ಲಿ ನಡೆಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ ಅ. 8ರಂದು ಹೈದರಾಬಾದ್-ಮುಂಬೈ ನಡುವಿನ ಅಬುಧಾಬಿ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಬೇಕಿತ್ತು. ಬಳಿಕ ಆರ್‌ಸಿಬಿ-ಡೆಲ್ಲಿ ಮುಖಾಮುಖೀ ರಾತ್ರಿ 7.30ಕ್ಕೆ ನಡೆಯಬೇಕಿತ್ತು. ಆದರೆ ಈ ಎರಡೂ ಪಂದ್ಯಗಳನ್ನು 7.30ಕ್ಕೆ ಆರಂಭಿಸಲು ತೀರ್ಮಾನಿಸಲಾಗಿದೆ!
ಈ ಬಗ್ಗೆ ಬಿಸಿಸಿಐ ಮಾಧ್ಯಮ ಪ್ರಕಟನೆಯನ್ನು ಹೊರಡಿಸಿದೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಪ್ಲೇ ಆಫ್‌ಗೂ ಮುನ್ನ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದೆ. ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಹೆಚ್ಚಿನ ಪಂದ್ಯಗಳು “ಡಬಲ್ ಹೆಡ್ಡರ್’ ಆಗಿರುವ ಹಿನ್ನೆಲೆಯಲ್ಲಿ ಪ್ರಯೋಗಾರ್ಥವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
Related Articles
ಇಲ್ಲಿ ಇನ್ನೊಂದು ಮುಂದಾಲೋಚನೆಯೂ ಇದೆ. ಪ್ಲೇ ಆಫ್ ಪ್ರವೇಶಕ್ಕೆ ಅಂತಿಮ ಲೀಗ್ ಪಂದ್ಯ ನಿರ್ಣಾಯಕವಾಗಿರುತ್ತದೆ. ಅಂದಿನ ಮುಂಬೈ-ಹೈದರಾಬಾದ್ ಪಂದ್ಯದ ಫಲಿತಾಂಶವನ್ನು ಗಮನಿಸಿ, ಡೆಲ್ಲಿ-ಆರ್‌ಸಿಬಿ ರನ್‌ರೇಟ್ ಲೆಕ್ಕಾಚಾರದಂತೆ ಆಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂಬುದೊಂದು ಲೆಕ್ಕಾಚಾರ!
Advertisement