Advertisement

ಟಿಪ್ಪು ಜಯಂತಿ ವಿರುದ್ಧ ಹೋರಾಟ ನಿಲ್ಲದು

07:53 AM Oct 26, 2017 | |

ಬೆಂಗಳೂರು: “ಟಿಪ್ಪು ಸುಲ್ತಾನ್‌ ಕುರಿತು ರಾಷ್ಟ್ರಪತಿಗಳು ವಜ್ರಮಹೋತ್ಸವ ಭಾಷಣದಲ್ಲಿ ಗುಣಗಾನ ಮಾಡಿರುವುದಕ್ಕೆ
ಹೆಚ್ಚಿನ ಮಹತ್ವ ನೀಡಬೇಕಾಗಿಲ್ಲ. ಅದು ರಾಷ್ಟ್ರಪತಿಯವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅವರ ಭಾಷಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ.
 
ರಾಷ್ಟ್ರಪತಿಗಳು ಟಿಪ್ಪು ಸುಲ್ತಾನ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ “ಉದಯ ವಾಣಿ”ಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್‌, “ರಾಷ್ಟ್ರಪತಿ ಭಾಷಣ ವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಮೊದಲೇ ನಿರ್ಧರಿಸಿದ್ದಂತೆ ಟಿಪ್ಪು ವಿರೋಧಿ ಹೋರಾಟವನ್ನು ರಾಜ್ಯಾದ್ಯಂತ ನಡೆಸಲಾಗುವುದು’ ಎಂದಿದ್ದಾರೆ.

Advertisement

ಪರಿಣಾಮ ಬೀರದು: ಪಕ್ಷದ ವ್ಯಕ್ತಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರೆ ನಮಗೆ ಮುಜುಗರವಾಗುತ್ತಿತ್ತು. ಪಕ್ಷಾತೀತ ಹುದ್ದೆಯಲ್ಲಿರುವ ರಾಷ್ಟ್ರಪತಿಗಳು ಆಡಿದ ಮಾತು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. ನೀವೇ ಟಿಪ್ಪುವಿನ ವೇಷ ಹಾಕಿದ್ದೀರಂತಲ್ಲ? ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಶೆಟ್ಟರ್‌, ಈ  ಕುರಿತು ಸಾಕ್ಷ್ಯಾಧಾರಗಳನ್ನು ಮುಖ್ಯ ಮಂತ್ರಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next