Advertisement

ರೈತ ವಿರೋಧಿ ನೀತಿ ವಿರುದ ಹೋರಾಟ

03:40 PM Nov 23, 2018 | |

ಶಿಕಾರಿಪುರ: ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಮತ್ತು ರೈತರ ಸಂಕಷ್ಟ ಪರಿಹರಿಸಬೇಕಾದ ಮುಖ್ಯಮಂತ್ರಿಗಳು
ಆಡಳಿತ ದೇಗುಲವಾದ ವಿಧಾನ ಸೌಧದಲ್ಲಿ ಜನಪರವಾದ ಕೆಲಸ ಮಾಡುವುದನ್ನು ಬಿಟ್ಟು ತಾಜ್‌ವೆಸ್ಟಂಡ್‌ ಹೊಟೇಲ್‌ನಲ್ಲಿ ಕುಳಿತು ಆಡಳಿತ ನಡೆಸುತ್ತಿದ್ದಾರೆ. ಕೇವಲ ಅಧಿಕಾರಿಗಳ ವರ್ಗಾವಣೆ ದಂಧೆ ಮಾಡುತ್ತಿರುವ ಇವರಿಗೆ ರೈತರ ಸಂಕಷ್ಟದ ಅರಿವಾಗುತ್ತಿಲ್ಲವೇ ಎಂದು ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಪಟ್ಟಣದ ಮಂಗಳ ಭವನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಕೃತಜ್ಞತಾ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನೀವು ಮುಖ್ಯಮಂತ್ರಿಯಾಗಿ ಬಂದ ಮೇಲೆ ರಾಜ್ಯದ ಜನರ ಹಿತವನ್ನು ಕಡೆಗಣಿಸಿದ್ದೀರಿ. ರೈತರ ಜೊತೆಗೆ ಚೆಲ್ಲಾಟ ನಡೆಸುತ್ತಿದ್ದೀರಿ. ಕಬ್ಬು ಬೆಳೆಯುವ ಹೋರಾಟಗಾರರಿಗೆ ಅವಮಾನ ಮಾಡಿದ್ದೀರಿ. ರೈತ ಮಹಿಳೆಗೆ 4 ವರ್ಷ
ಎಲ್ಲಿ ಮಲಗಿದ್ದೆ ಎಂದು ಕೇಳುವ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಮುಖ್ಯಮಂತ್ರಿಯಾದ ನೀವು ಅಪಮಾನ ಮಾಡಿದ್ದೀರಿ. ನಿಮ್ಮ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಬಿಜೆಪಿ ಹೋರಾಟ ಆರಂಭಿಸಿದೆ. ಬೆಳಗಾವಿ ಅಧಿ ವೇಶನದಲ್ಲಿ ಒಳಗೂ
ಮತ್ತು ಹೊರಗೂ ಬಿಜೆಪಿ ದೊಡ್ಡಮಟ್ಟದ ಹೋರಾಟ ಮಾಡಲಿದ್ದು ಲಕ್ಷಾಂತರ ಜನ ರೈತರು ಸೇರಲಿದ್ದಾರೆ ಎಂದರು.

ರೈತರ ಸಾಲ ಮನ್ನಾ ಬಗ್ಗೆ ನಿಮ್ಮದು ಸುಳ್ಳು ಭರವಸೆ ಹಾಗೂ ಪೊಳ್ಳು ಆಶ್ವಾಸನೆಯಾಗಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ರೈತರ ಸಾಲ ಮನ್ನಾ ಮಾಡಿದ ಬಾಕಿ ಹಾಗೂ ಅದರ ಬಡ್ಡಿ ಇನ್ನೂ ಕಟ್ಟಿಲ್ಲ. ಮುಖ್ಯಮಂತ್ರಿಗಳೇ, ನಿಮ್ಮ ಸಾಲಮನ್ನಾ ಆದೇಶ ಇನ್ನೂ ಹೊರಬಂದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲು ರಿಸರ್ವ್‌ ಬ್ಯಾಂಕ್‌ ಒಪ್ಪುತ್ತಿಲ್ಲ. ಆ ಹಣವನ್ನು ಸರ್ಕಾರ ಕೂಡಲೇ ಪಾವತಿ ಮಾಡಬೇಕು. ಹಾಲಿನ ಪ್ರೋತ್ಸಾಹ ಧನ 330 ಕೋಟಿ ರೂ. ಬಾಕಿ ಇದೆ. ಶಾಸಕರ ಅನುದಾನ ಇನ್ನೂ ಒಂದು ರೂ. ಬಿಡುಗಡೆ ಆಗಿಲ್ಲ. ಈ ಸರ್ಕಾರ ದಿವಾಳಿಯಾಗಿದೆ. ರಾಜಕೀಯ ದೊಂಬರಾಟ ಆಡುವ ಈ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಕುಮಾರಸ್ವಾಮಿ ಅತ್ಯಂತ ಬೇಜವಾಬ್ದಾರಿ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಾಲೂಕುಗಳು ಬರಗಾಲಪೀಡಿತವಾಗಿವೆ. ಸರ್ಕಾರ ಆ ತಾಲೂಕುಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಲ್ಲಿ ಯಾವ ಸಚಿವರು, ಸಂಸದರು ಹಾಗೂ ಶಾಸಕರು ಭೇಟಿ ನೀಡಿಲ್ಲ. ಬರಪೀಡಿತ ಜನರ ಸಮಸ್ಯೆಗಳನ್ನು ಆಲಿಸುವ ಪುರುಸೊತ್ತು ಈ ಸಚಿವರಿಗಿಲ್ಲ. ಉತ್ತರ ಕರ್ನಾಟಕದ ಜನ ನಿಮಗೆ ಮತ ನೀಡಿಲ್ಲ ಎಂದು ಪದೇ ಪದೇ ಹೇಳುತ್ತೀರಿ. ಹಾಗಾದರೆ ಕೇವಲ 37 ಜನ ಶಾಸಕರಿರುವ ನೀವು ಹೇಗೆ ಮುಖ್ಯಮಂತ್ರಿಯಾಗಿದ್ದೀರಿ ಎಂದು ಪ್ರಶ್ನಿಸಿದರು.

ನಿಮ್ಮ ರೈತ ವಿರೋಧಿ ನೀತಿಯಿಂದ ನಿಮಗೆ ಸರ್ಕಾರ ರಚಿಸಲು ಬೆಂಬಲ ನೀಡಿದ ಕಾಂಗ್ರೆಸ್‌ನಲ್ಲಿ ತಲ್ಲಣ ಉಂಟಾಗಿದೆ. ಈಗ ನಿಮಗೆ
ಬೆಂಬಲವಾಗಿ ನಿಂತಿರುವ ಸಿದ್ದರಾಮಯ್ಯನವರನ್ನು ಸೋಲಿಸಲು ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡರನ್ನು ಬಳಸಿಕೊಂಡಿರಿ. ಬಾದಾಮಿಯಲ್ಲಿ ಸಿದ್ದರಾಮಯ್ಯನವರು ಗೆಲ್ಲದಿದ್ದರೆ ಅವರ ಪರಿಸ್ಥತಿ ಏನಾಗುತ್ತಿತ್ತು. ನಿಮ್ಮ ಬೆಳವಣಿಗೆಗಾಗಿ ಸಮಯಕ್ಕೆ
ಸರಿಯಾಗಿ ಎಲ್ಲರನ್ನು ಬಳಸಿಕೊಳ್ಳುತ್ತೀರಿ ಎಂದು ಜೆಡಿಎಸ್‌ ಮುಖಂಡರ ವಿರುದ್ಧ ಹರಿಹಾಯ್ದರು.

Advertisement

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೊಸ ಆಯಾಮ ತಂದು ಕೊಟ್ಟವರು ಮೋದಿ. ಮುಂಬರುವ ಚುನಾವಣೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೂಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಕಟಿಬದ್ಧರಾಗಬೇಕು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡ, ಮುಖಂಡರಾದ ಪದ್ಮನಾಭ ಭಟ್‌, ಕೆ.ಎಸ್‌. ಗುರುಮೂರ್ತಿ, ಎಸ್‌. ದತ್ತಾತ್ರಿ. ತಾಪಂ ಅಧ್ಯಕ್ಷ ಕೌಲಿ ಸುಬ್ಬಣ್ಣ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next