Advertisement

90ರ ದಶಕದಲ್ಲೇ “ಉತ್ತಮ ಸಂಘ’ಪ್ರಶಸ್ತಿಯ ಗರಿಮೆ

10:13 PM Feb 18, 2020 | Team Udayavani |

ಗುಣಮಟ್ಟದ ಹಾಲು, ಗರಿಷ್ಠ ಕೃತಕ ಗರ್ಭಧಾರಣೆ, ಹೆಚ್ಚು ಹಾಲು ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿ, ಅವಿಭಜಿತ ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮಂಗಳೂರಿನಿಂದ ಉತ್ತಮ ಸಂಘವೆಂದು 99ರಲ್ಲಿಯೇ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕೋಣಿಯ ಹಾಲು ಉತ್ಪಾದಕರ ಸಹಕಾರಿ ಸಂಘದ್ದು.

Advertisement

ಕೋಣಿ: ಕೋಣಿ ಹಾಲು ಉತ್ಪಾದಕರ ಸಹಕಾರಿ ಸಂಘವು ಕೋಣಿ ಯಲ್ಲಿರುವ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದಲ್ಲಿ 1987 ರ ಮಾ. 6 ರಂದು ಆರಂಭಗೊಂಡಿತು. ಶ್ರೀನಿವಾಸ ಐತಾಳ್‌ ಸ್ಥಾಪಕಾಧ್ಯಕ್ಷರಾಗಿದ್ದು, ಮಾಲಿಂಗ, ಅಕ್ಕಮ್ಮ ಪೂಜಾರ್ತಿ, ಆನಂದ ಪೂಜಾರಿ, ಶೇಷಗಿರಿ ನಾಯಕ್‌, ಕೆ. ಸಿದ್ಧಯ್ಯ ಶೆಟ್ಟಿ, ಕೆ. ಅನಂತ ಪದ್ಮನಾಭ ಹೆಬ್ಟಾರ್‌, ಬಿ. ರಮಾನಾಥ್‌ ಹೊಳ್ಳ ಸ್ಥಾಪಕ ನಿರ್ದೇಶಕರಾಗಿದ್ದರು.

15 ಲೀ. ಹಾಲು
ಈ ಸಂಘವು ಕೇವಲ 15 ಲೀಟರ್‌ ಹಾಲು ಸಂಗ್ರಹದಿಂದ ಆರಂಭಗೊಂಡಿದದ್ದು, ಆಗ 110 ಮಂದಿ ಸದಸ್ಯರಿದ್ದರು. 15 ಲೀ.ನಿಂದ ಶುರುವಾದ ಸಂಘವು ಈಗ ಸರಾಸರಿ 750 ಲೀಟರ್‌ ಹಾಲು ಸಂಗ್ರಹವಾಗುವಷ್ಟರ ಮಟ್ಟಿಗೆ ಬೆಳೆದಿದೆ. ಆಗ ಕೋಣಿ, ಮೂರೂರು, ಕೆಳಕೇರಿ ಮಾತ್ರವಲ್ಲದೆ ಮೂಡ್ಲಕಟ್ಟೆ, ಕಂದಾವರ, ಕಟೆರಿ, ನೇರಂಬಳ್ಳಿ ಮತ್ತಿತರ ಕಡೆಗಳಿಂದ ಇಲ್ಲಿಗೆ ಹಾಲು ತರಲಾಗುತ್ತಿತ್ತು. ಆದರೆ ಈಗ ಕಂದಾವರ, ಮತ್ತಿತರೆಡೆಗಳಲ್ಲಿ ಪ್ರತ್ಯೇಕ ಸಂಘ ಸ್ಥಾಪನೆಯಾಗಿದೆ.

ಸ್ವಂತ ಕಟ್ಟಡ
ಬಾಡಿಗೆ ಕಟ್ಟಡದಲ್ಲಿದ್ದ ಈ ಕೋಣಿಯ ಹಾಲು ಉತ್ಪಾದಕರ ಸಹಕಾರಿ ಸಂಘವು 1999ರ ಫೆ. 6ರಂದು ಸ್ವಂತ ಜಾಗ ಖರೀದಿ ಮಾಡಿ, ಅಲ್ಲಿ ಹೊಸದಾಗಿ ಕಟ್ಟಡವೊಂದನ್ನು ನಿರ್ಮಿಸಿ ಅಲ್ಲಿಗೆ ಸ್ಥಳಾಂತರಗೊಂಡಿತು. ಹೊಸ ಕಚೇರಿಯನ್ನು ಆಗ ವಿಧಾನಪರಿಷತ್‌ ಸದಸ್ಯರಾಗಿದ್ದ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಉದ್ಘಾಟಿಸಿದ್ದು, ಮಾಜಿ ಶಾಸಕ, ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಆರಂಭಗೊಂಡ ಉದ್ದೇಶ
80-90ರ ದಶಕದಲ್ಲಿ ಇಲ್ಲಿ ಹೈನುಗಾ ರರಿದ್ದು, ಆದರೆ ಇಲ್ಲಿ ಆಗ ಹೋಟೆಲ್‌ಗೆ ಹಾಲು ನೀಡುತ್ತಿದ್ದರು. ಆದರೆ ಆಗ ಹೊಟೇಲ್‌ನವರು ಹಾಲು ಸರಿ ಇಲ್ಲ, ಉತ್ತಮ ಗುಣಮಟ್ಟದ ಹಾಲು ಕೊಡುತ್ತಿಲ್ಲ ಎಂದು ಆರೋಪಿಸುವುದು ಸಾಮಾನ್ಯವಾಗಿತ್ತು. ದರವೂ ಅವರಿಗೆ ಇಷ್ಟ ಬಂದಂತೆ ನೀಡುತ್ತಿದ್ದರು. ಇದನ್ನು ಮನಗಂಡ ಇಲ್ಲಿನ ಹೈನುಗಾರರು ಕೆ. ಶ್ರೀನಿವಾಸ್‌ ಐತಾಳ್‌ ನೇತೃತ್ವದಲ್ಲಿ ಹಾಲು ಉತ್ಪಾದಕರ ಸಂಘವನ್ನು ಸ್ಥಾಪನೆ ಮಾಡಲಾಗಿತ್ತು. ಈ ಭಾಗದ ಅನೇಕ ಮಂದಿ ಹೈನುಗಾರರು ಈ ಸಂಘಕ್ಕೆ ಹಾಲು ಹಾಕಿ ತಮ್ಮ ಬದುಕನ್ನು ಕಟ್ಟಿಕೊಂಡು, ಈಗಲೂ ಇದರಿಂದಲೇ ಜೀವನ ಸಾಗಿಸುತ್ತಿರುವ ಜನರು ಇದ್ದಾರೆ. ಈ ಭಾಗದ ಸ್ಥಳೀಯ ಆರ್ಥಿಕಾಭಿವೃದ್ಧಿಯಲ್ಲಿ ಈ ಸಂಘದ ಪಾತ್ರ ಮಹತ್ತರವಾಗಿದೆ ಎನ್ನಲಡ್ಡಿಯಿಲ್ಲ.

Advertisement

ಗರಿಷ್ಠ ಸಾಧಕರು
ಕಳೆದ 4-5 ವರ್ಷಗಳ ಸರಾಸರಿ ಲೆಕ್ಕಾಚಾರ ನೋಡಿದರೆ ಗರಿಷ್ಠ ಸಾಧಕರ ಪಟ್ಟಿಯಲ್ಲಿ ದಿನಕ್ಕೆ 30-35 ಲೀ. ಹಾಕುವ ಸುನಂದಾ ಶೆಟ್ಟಿಯವರಿಗೆ ಅಗ್ರಸ್ಥಾನ. ಮಾಲತಿ, ದಯಾನಂದ ಕೂಡ ಹೆಚ್ಚಿನ ಪ್ರಮಾಣದ ಹಾಲು ನೀಡುವವರ ಪಟ್ಟಿಯಲ್ಲಿದ್ದಾರೆ.

ಪ್ರಸ್ತುತ ಈ ಸಂಘದಲ್ಲಿ 259 ಮಂದಿ ಸದಸ್ಯರಿದ್ದು, ಇದರಲ್ಲಿ ಸರಾಸರಿ 120 ಮಂದಿ ಹಾಲು ಹಾಕುವವರಿದ್ದಾರೆ. ಈಗ 727 ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, ಸರಾಸರಿ 750 – 800 ಲೀ. ಹಾಲು ಸಿಗುತ್ತಿದೆ. ಕೆ. ಕೃಷ್ಣ ಪೂಜಾರಿ ಅಧ್ಯಕ್ಷರಾಗಿದ್ದು, ಆನಂದ ಕೆ. ಕಾರ್ಯದರ್ಶಿಯಾಗಿದ್ದಾರೆ. ಕೆ. ಸಿದ್ಧಯ್ಯ ಶೆಟ್ಟಿ ಉಪಾಧ್ಯಕ್ಷರಾಗಿದ್ದು, ಕೆ. ಗುಣಕರ ಶೆಟ್ಟಿ, ಕೆ. ರಾಜೇಶ್‌ ಮಯ್ಯ, ಕೆ. ದಯಾನಂದ ಪೂಜಾರಿ, ಉದಯ ಸಿ.ಕೆ., ಸುನಂದ ಶೆಟ್ಟಿ, ಜಲಜಾ ಪೂಜಾರ್ತಿ, ಜಯ ಪೂಜಾರಿ, ಜ್ಯೋತಿ, ಗಿರಿಜಾ ಮೊಗವೀರ ಪ್ರಸ್ತುತ ಸಂಘದ ನಿರ್ದೇಶಕರಾಗಿದ್ದಾರೆ.

ಉತ್ತಮ ಸಂಘ ಪ್ರಶಸ್ತಿ
ಈ ಕೋಣಿಯ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 1999ರಲ್ಲಿ ಅವಿಭಜಿತ ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಮಂಗಳೂರು ಕೊಡಮಾಡುವ ಕುಂದಾಪುರ ತಾಲೂಕಿನ ಉತ್ತಮ ಸಂಘವೆಂದು ಪ್ರಶಸ್ತಿ ಪಡೆದಿತ್ತು. ಗುಣಮಟ್ಟದ ಹಾಲು ಸಂಗ್ರಹ, ಗರಿಷ್ಠ ಕೃತಕ ಗರ್ಭಧಾರಣೆಯನ್ನೆಲ್ಲ ಪರಿಗಣಿಸಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.

1987ರಲ್ಲಿ ಆರಂಭಗೊಂಡ ಈ ನಮ್ಮ ಕೋಣಿಯ ಹಾಲು ಉತ್ಪಾದಕರ ಸಹಕಾರಿ ಸಂಘವು ಹೈನುಗಾರರ ಪಾಲಿಗೆ ಕಾಮಧೇನುವಾಗಿದೆ. ಹಾಲು ಉತ್ಪಾದನೆ, ಸಂಗ್ರಹದಿಂದ ಸಿಗುವ ಲಾಭದಲ್ಲಿ ಹೈನುಗಾರರಿಗೆ ಹೆಚ್ಚಿನ ಪ್ರಯೋಜನವಾಗುವಂತೆ ನೋಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಈಗಿರುವ ಕಟ್ಟಡದೊಂದಿಗೆ ಮೇಲಿನ ಮಹಡಿ ನಿರ್ಮಿಸುವ ಯೋಜನೆಯಿದೆ.
– ಕೆ. ಕೃಷ್ಣ ಪೂಜಾರಿ, ಅಧ್ಯಕ್ಷರು

ಅಧ್ಯಕ್ಷರು:
ಕೆ. ಶ್ರೀನಿವಾಸ ಐತಾಳ್‌, ಕೆ. ಸುಬ್ರಾಯ ಕಾರಂತ, ಕೆ. ಆನಂದ ಭಂಡಾರಿ, ಕೆ. ರೇಮಂಡ್‌ ಡಿ’ಸೋಜಾ, ಗುಣಕರ ಶೆಟ್ಟಿ, ಕೆ. ಕೃಷ್ಣ ಪೂಜಾರಿ
ಕಾರ್ಯದರ್ಶಿಗಳು:
ರಾಜೇಶ್‌, ಕೆ. ಶೇಖರ ಶೆಟ್ಟಿ, ಆನಂದ ಕೆ.

ಹೈನುಗಾರಿಕೆ
ಬಗ್ಗೆ ಹೇಳುವು ದೆಂದರೆ ಗ್ರಾಮೀಣ ಆರ್ಥಿಕತೆಯ ಪ್ರಮುಖ ಚಕ್ರ. ಈ ದಿಸೆಯಲ್ಲೇ ನಮ್ಮ ಕ್ಷೀರಕಥನ.

 ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next