Advertisement

ಜಾತ್ರೆ ಹಿಂದೂ ಧರ್ಮ-ಸಂಸ್ಕಾರದ ಪ್ರತೀಕ

04:45 PM May 18, 2022 | Team Udayavani |

ಬಾಗಲಕೋಟೆ: ಧರ್ಮ, ಸಂಸ್ಕೃತಿ, ಮಾನವೀಯತೆ ಉಳಿಯಬೇಕಾದರೆ ದೇಗುಲಗಳು ಬೇಕು. ಹಿಂದೂ ಧರ್ಮದ ಶ್ರೇಯೋಭಿವೃದ್ಧಿಗೆ ಸಾವಿರಾರು ಮಹಾತ್ಮರು ಶ್ರಮಿಸಿದ್ದಾರೆ. ಆದ್ದರಿಂದ ಜಾತ್ರೆಗಳು ಹಿಂದೂ ಧರ್ಮದ ಮತ್ತು ಸಂಸ್ಕಾರದ ಪ್ರತೀಕವಾಗಿವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Advertisement

ಬೇವೂರ ಆದಿಶಕ್ತಿ ಜಗನ್ಮಾತೆ ದುಗ್ಗಮ್ಮದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದ ಸಮಸ್ತ ದೈವ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಟ್ರಾಕ್ಟರ್‌ ಜಗ್ಗುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಹಿಂದೂ ದೇಗುಲಗಳ ಜೀರ್ಣೋದ್ಧಾರ ಕೆಲಸ ನಡೆಯಬೇಕಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೂ ದೇಗುಲಗಳ ರಕ್ಷಣೆ ಮಾಡುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇವೆ. ಸುಮಾರು 3500 ದೇಗುಲಗಳ ಜೀರ್ಣೋದ್ಧಾರ ಕೆಲಸ ಮಾಡಿದ್ದು ಹೆಮ್ಮೆಯ ಕೆಲಸ. ಎಲ್ಲ ಸಮುದಾಯಕ್ಕೂ ನ್ಯಾಯ ಸಿಗುವಂತೆ ಸರ್ಕಾರ ಪ್ರಾಮಾಣಿಕ ಕೆಲಸ ಮಾಡುತ್ತಿದ್ದು ಅದರಲ್ಲೂ ದೇಶದ ಭದ್ರತೆ ಕಾಪಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ನಮ್ಮಂತ ಪ್ರಾಮಾಣಿಕ ರಾಜಕಾರಣಿಗಳಿಗೆ ಸರ್ಕಾರದಲ್ಲಿ ಬಾಗಿಲು ತೆರೆದಿಲ್ಲ. ಚರಂತಿಮಠರು ನಾವು ಒಂದೇ ವೇದಿಕೆಯಲ್ಲಿ ಸಾಗುತ್ತಿದ್ದೇವೆ. ನೇರವಾಗಿ ಮಾತನಾಡುವುದೇ ನಮ್ಮ ಕರ್ತವ್ಯ, ನಾನು ಭ್ರಷ್ಟನಲ್ಲ, ಚರಂತಿಮಠರು ಭ್ರಷ್ಟರಲ್ಲ. ಹೀಗಾಗಿ ನಾವು ಅವಕಾಶಗಳಿಂದ ವಂಚಿತರಾಗಿ ಶಾಸಕರಾಗಿ ಮುಂದುವರಿಯುತ್ತಿದ್ದೇವೆ ಎಂದರು.

ಶಾಸಕ ಡಾ|ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂ ದೇಗುಲಗಳನ್ನು ರಕ್ಷಣೆ ಮಾಡಿ ಜೀರ್ಣೋದ್ಧಾರ ಮಾಡಿದರೆ ಸೋನಿಯಾಗಾಂಧಿ ಮತ್ತು ರಾಹುಲಗಾಂಧಿಗೆ ಏಕೆ ತೊಂದರೆಯಾಗುತ್ತಿದೆ. ಹಿಂದೂ ದೇಗುಲಗಳನ್ನು ರಕ್ಷಣೆ ಮಾಡುವುದು ಮೋದಿ ಸರ್ಕಾರದ ಧ್ಯೇಯ, ಈ ನಿಟ್ಟಿನಲ್ಲಿ ಸರ್ಕಾರ ಸಾಗುತ್ತಿದೆ. ಕೋವಿಡ್‌ ಮಹಾಮಾರಿಯಿಂದ ಕಷ್ಟ ಅನುಭವಿಸಿ ಮತ್ತೇ ದೇಗುಲಗಳ ಪೂಜೆ ಸಾಗುತ್ತಿವೆ ಎಂದು ಹೇಳಿದರು.

Advertisement

ಶ್ರೀ ಗ್ಯಾನಪ್ಪಜ್ಜನವರು ಸಾನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ತುಕಾರಾಮ ಮಾಗಿ, ಮುಖಂಡ ಮುತ್ತು ಬೈರಮಟ್ಟಿ, ಪ್ರಭುಸ್ವಾಮಿ ಸರಗಣಾಚಾರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಜು ಮುದೇನೂರ, ಸುರೇಶ ಕೊಣ್ಣೂರ, ನಿಂಗಪ್ಪ ಮಾಗನೂರ, ಎಂ ಎಸ್‌. ವೈಜಾಪುರ, ಪಿ.ಎಸ್‌. ಗುನ್ನಿ, ಉಮೇಶ ಜುಮನಾಳ, ಕಲ್ಲಪ್ಪ ಭಗವತಿ, ಶೇಖಪ್ಪ ಹೆರಕಲ್‌, ಜಿ.ವೈ. ಹೆರಕಲ್‌, ಕೃಷ್ಣಾ ಲಮಾಣಿ, ವೆಂಕನಗೌಡ ಮಾಗನೂರ, ಬಸವರಾಜ ಪಾಟೀಲ ಉಪಸ್ಥಿತರಿದ್ದರು.

ಕಳೆದ ಮೂರು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಗ್ರಾಮೀಣ ರಸ್ತೆ, ಭಗವತಿ, ಶಿರೂರ ಗ್ರಾಮಗಳ ನೀರಾವರಿ ಯೋಜನೆಗಳ ಮಂಜೂರಾತಿಗೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಜನರಲ್‌ ಜಿ.ಜಿ. ಬೇವೂರ ಸ್ಮಾರಕ ಭವನ, ದ್ವಾರಬಾಗಿಲು
ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಡಾ| ವೀರಣ್ಣ ಚರಂತಿಮಠ, ಶಾಸಕ

ಭಾರತೀಯ ಸಂಸ್ಕೃತಿ ಅವಸಾನಕ್ಕೆ ಅವಕಾಶ ಕೊಡದೇ ಎಲ್ಲರೂ ಉಳಿಸಲು ಶ್ರಮಿಸಬೇಕಿದೆ. ಇಂದು ಹಿಂದೂ ಸಂಸ್ಕೃತಿ ಉಳಿವಿಗೆ ಉತ್ತಮ ರಾಜಕಾರಣದ ಅವಶ್ಯಕತೆ ಇದೆ. ತಲೆ ಹಿಡಿಯುವ ರಾಜಕಾರಣಿಗಳು ಬೇಕಾಗಿಲ್ಲ. ದೇಶ ಮತ್ತು ಧರ್ಮವನ್ನು ಕಾಪಾಡುವ ವ್ಯಕ್ತಿಗಳು ನಮಗೆ ಬೇಕು. ಅಂತಹವರಿಗೆ ಮಾತ್ರ ಅವಕಾಶ ದೊರೆಯಬೇಕು.
ಬಸನಗೌಡ ಪಾಟೀಲ ಯತ್ನಾಳ, ಶಾಸಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next