Advertisement
ಬನಶಂಕರಿ 6ನೇ ಹಂತದ ಬಿಡಿಎ ಬಡಾವಣೆ ವ್ಯಾಪ್ತಿಯಲ್ಲಿ ಲಿಂಗಧೀರನಹಳ್ಳಿ ಘಟಕ ಪ್ರಾರಂಭವಾಗಿರುವುದೇ ವಿರೋಧಕ್ಕೆ ಪ್ರಮುಖ ಕಾರಣ. ಸುತ್ತಮುತ್ತ ವಸತಿ ಬಡಾವಣೆಗಳು ಇರುವುದರಿಂದ ಇಲ್ಲಿ ಕಸ ಘಟಕ ಬೇಡ ಎಂಬುದು ಸ್ಥಳೀಯರ ಆಗ್ರಹ. ಇದರಿಂದಾಗಿ ಪ್ರತಿ ನಿತ್ಯ 200 ಟನ್ ಕಸ ಸಂಸ್ಕರಣೆ ಸಾಮರ್ಥ್ಯ ಹೊಂದಿರುವ ಘಟಕದಲ್ಲಿ ಸದ್ಯ ಶೇ.10ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕಸ ಸಂಸ್ಕರಣೆಯಾಗುತ್ತಿದೆ.
Related Articles
Advertisement
ಪಶ್ಚಿಮ ವಿಭಾಗದ ಕಸಲಿಂಗಧೀರನಹಳ್ಳಿ ಘಟಕದಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೆ ಅಗತ್ಯವಾದ ಯಂತ್ರಗಳಿದ್ದು, ನಿತ್ಯ ಗರಿಷ್ಠ 200 ಟನ್ ಕಸ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಸ್ಥಳೀಯರ ವಿರೋಧ ಮತ್ತು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಘಟಕ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಪಶ್ಚಿಮ ವಲಯದ ಮಲ್ಲೇಶ್ವರ, ರಾಜಾಜಿನಗರ, ಜಾಲಹಳ್ಳಿ, ಮತ್ತಿಕೆರೆ, ಯಶವಂತಪುರ, ನಂದಿನಿ ಲೇಔಟ್, ಆರ್.ಎಂ.ವಿ.ಲೇಔಟ್, ಮಾರಪ್ಪನಪಾಳ್ಯ, ಗಂಗಾನಗರ, ಹೆಬ್ಟಾಳ, ಎಚ್‌ಎಂಟಿ ಪ್ರದೇಶ, ವಿಜಯನಗರ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಂಗ್ರಹವಾಗುವ 18ರಿಂದ 21 ಟನ್ ಹಸಿ ಕಸವನ್ನಷ್ಟೇ ಸಂಸ್ಕರಿಸಲಾಗುತ್ತಿದೆ. ಸುಸಜ್ಜಿತ ಘಟಕವಿದ್ದರೂ ಗುಮಾನಿ!
ಸಂಪೂರ್ಣ ಮುಚ್ಚಲ್ಪಟ್ಟ ಲಾರಿಗಳಲ್ಲಿ ಈ ಘಟಕಕ್ಕೆ ತ್ಯಾಜ್ಯ ತರುತ್ತಿದ್ದು, ದುರ್ವಾಸನೆ ಬರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಜತೆಗೆ ಘಟಕ ಕೂಡ ಅತ್ಯಾಧುನಿಕವಾಗಿದ್ದು, ದುರ್ವಾಸನೆ ಬಾರದಂತೆ ಛಾವಣಿಸಹಿತ ಶೆಡ್‌ನಡಿ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಆಗಾಗ್ಗೆ ಘಟಕ ಸ್ಥಗಿತಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರ ಘಟಕ ಪ್ರವೇಶ ನಿರ್ಬಂಧಿಸಲಾಗಿದೆ. ತ್ಯಾಜ್ಯ ಸಾಗಣೆ ವಾಹನಗಳಿಗಷ್ಟೇ ಪ್ರವೇಶವಿದ್ದು, ಇತರ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಸಂಶಯ ಹೆಚ್ಚಿ, ಮತ್ತಷ್ಟು ವಿರೋಧ ವ್ಯಕ್ತವಾಗಲು ಕಾರಣವಾಗಿದೆ. ಹೈಕೋರ್ಟ್‌ನಲ್ಲಿದೆ ಪ್ರಕರಣ
ಘನತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣಗೊಂಡು ಉದ್ಘಾಟನೆಯಾಗುವಾಗ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ (ಎನ್‌ಜಿಟಿ) ದಾವೆ ಹೂಡಿದ ಪರಿಣಾಮ ಉದ್ಘಾಟನೆಗೂ ತಡೆಯಾಜ್ಞೆ ತರಲಾಗಿತ್ತು. ನಂತರ ಎನ್‌ಜಿಟಿಯಲ್ಲಿ ಅರ್ಜಿದಾರರಿಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ವಿಚಾರವನ್ನು ಸ್ಥಳೀಯ ಹೈಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣ ವಿಚಾರಣೆಯಲ್ಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥದ ನಂತರ ಮುಂದಿನ ಕ್ರಮ ಕೈಗೊಳ್ಳಲು ಪಾಲಿಕೆ ನಿರ್ಧರಿಸಿದೆ. ಬನಶಂಕರಿ 6ನೇ ಹಂತದ “ವಿ’ ಬ್ಲಾಕ್ ವಸತಿ ಬಡಾವಣೆಯ ಹೃದಯ ಭಾಗದಲ್ಲಿ ಘಟಕ ಸ್ಥಾಪಿಸುವಾಗ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿರಲಿಲ್ಲ. ಇದು ಪರಿಸರದ ಮೇಲಿನ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯ (ಎನ್ವಿರಾನ್‌ಮೆಂಟಲ್ ಇಂಪ್ಯಾಕ್ಟ್ ಅಸೆಸ್‌ಮೆಂಟ್ ನೋಟಿಫಿಕೇಷನ್ 2006- ಎಐಎ)’ ಸ್ಪಷ್ಟ ಉಲ್ಲಂಘನೆಯಾಗಿದೆ.
-ಜಯರಾಮೇಗೌಡ, ಸ್ಥಳೀಯ ನಿವಾಸಿ ಸಂಸ್ಕರಣೆ ವೇಳೆ ದುರ್ವಾಸನೆ ಬಾರದಂತೆ ಕ್ರಮಕೈಗೊಳ್ಳಲಾಗಿದೆ. ಪ್ರಸ್ತುತ ಘಟಕದ ಸುತ್ತ ಮುತ್ತ ಯಾವುದೇ ಮನೆಗಳು ಇಲ್ಲ. ಘಟಕ ನಡೆಯಲು ಯಾವ ಸಮಸ್ಯೆ ಇಲ್ಲದಿ ದ್ದರೂ, ಕಾಣದ ಕೈಗಳು ಘಟಕ ನಡೆಯದಂತೆ ವಿರೋಧಿಸುತ್ತಿವೆ. ಎಲ್ಲೆಡೆಯೂ ಘಟಕ ಬೇಡ ಎನ್ನುವುದಾದರೆ ತ್ಯಾಜ್ಯವನ್ನು ಸುರಿಯುವುದಾದರೂ ಎಲ್ಲಿ?
-ಸಫ್ರಾಜ್ ಖಾನ್, ಜಂಟಿ ಆಯುಕ್ತ, ಬಿಬಿಎಂಪಿ * ಸಂಪತ್ ತರೀಕೆರೆ