Advertisement

ಕಾನನದ ಉಳಿವಲ್ಲಿದೆ ಮಾನವನ ಭವಿಷ್ಯ

06:00 AM Jun 07, 2018 | |

ಜಾಗತಿಕ ಮಟ್ಟದಲ್ಲಿ ನೋಡುವುದೇ ಆದರೆ ಜಗತ್ತಿನ ಹಲವು ದೇಶಗಳಲ್ಲಿ ಕಳೆದ ಒಂದು ದಶಕದಲ್ಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಳ ವಾಗುತ್ತಿಲ್ಲ. ಬದಲಾಗಿ ಕಡಿಮೆಯಾಗುತ್ತಿದೆ. ಆದರೆ ಭಾರತದ ಸ್ಥಿತಿ ಈ ರಾಷ್ಟ್ರಗಳಿಗಿಂತ ಭಿನ್ನ. ಕಾಡು ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ 10 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎನ್ನುವುದೇ ಸಂತಸದ ವಿಷಯ. 

Advertisement

ಮತ್ತೂಂದು ವಿಶ್ವ ಪರಿಸರ ದಿನಾಚರಣೆ ಮುಗಿದಿದೆ. ಈ ಸಂದರ್ಭದಲ್ಲಿ ಪ್ರತಿವರ್ಷ ಒಂದು ಹಾಸ್ಯವಂತೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಅದೇನೆಂದರೆ “ಮಂತ್ರಿ ಬಂದ ಗಿಡ ನೆಟ್ಟ. ಕುರಿ ಬಂತು ಗಿಡ ತಿಂತು. ಸಂಜೆ ಮಂತ್ರಿ ಹೋದ ಕುರಿ ತಿಂದ. ಅಲ್ಲಿಗೆ ಪರಿಸರ ದಿನಾಚರಣೆ ಲೆಕ್ಕಾಚಾರ ಮುಗಿಯಿತು.’ ತಮಾಷೆಯೆನಿಸಿದರೂ ಈ ಮಾತು ವಾಸ್ತವವೂ ಹೌದು. 

ಪ್ರಸ್ತುತ ನಮ್ಮ ಜಗತ್ತು ಅಳಿವಿನಂಚಿನಲ್ಲಿದೆ. ಕಾರಣ ಪರಿಸರ ನಾಶ. ಹದಗೆಟ್ಟ ಪರಿಸರವು ಜೀವ ಸಂಕುಲವನ್ನೇ ನಾಶ ಮಾಡುವ ಹಂತದಲ್ಲಿದೆ. ಹೇಗಾದರೂ ಮಾಡಿ ಪರಿಸರ ಸಂರಕ್ಷಣೆ ಮಾಡಲೇ ಬೇಕು ಎಂಬ ಕಾರಣಕ್ಕಾಗಿ ವಿಶ್ವಸಂಸ್ಥೆಯ ಮಾನವ ಪರಿಸರದ (Human Environment) ಮೇಲಿನ ಸಭೆ 1972 ಜೂನ್‌ 5 ರಿಂದ 16ವರೆಗೆ ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿ ನಡೆಯಿತು. ಅಲ್ಲಿನ ಸುದೀರ್ಘ‌ ಚಿಂತನೆಗಳ ಪರಿಣಾಮ ಯುನೆಫ್-ಯುಎನ್‌.ಪಿ. ಈ (United Nations Environment Programme) ಅಂಗ ಸಂಸ್ಥೆ ಹುಟ್ಟಿಕೊಂಡಿತು. ಆದರೆ ಅಂದಿನಿಂದ ಪರಿಸರದ ಬಗ್ಗೆ ಎಷ್ಟೇ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಇಂದು ಮಾನವನ ಅತಿ ಆಸೆಗೆ ಕಾನನ ಖಾಲಿಯಾಗುತ್ತಿದೆ.

ವಿಧಾನ ಸಭಾ ಚುನಾವಣೆಯ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಪ್ರಣಾಳಿಕೆಯಲ್ಲಿ ಪರಿಸರ ಅಭಿವೃದ್ಧಿಗೆ ಪ್ರತಿ ಗ್ರಾಮದಲ್ಲೂ ಯುವಕರನ್ನು ನೇಮಿಸಿ, ಅವರಿಗೆ ಪ್ರತಿ ತಿಂಗಳೂ ವೇತನ ನೀಡುವ ಮೂಲಕ ಪರಿಸರ ಸಂರಕ್ಷಣೆಯ ಹೊಸ ಆಲೋಚನೆಯ ಬಗ್ಗೆ ಪ್ರಕಟಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ನಿಜಕ್ಕೂ ಜನರಿಗೆ ಕೊಟ್ಟ ಆಶ್ವಾಸನೆಯನ್ನು ಜಾರಿಗೆ ತರುತ್ತಾರೆಯೇ? 

ಒಂದು ಸಂತಸದ ಸುದ್ದಿ
ಜಾಗತಿಕ ಮಟ್ಟದಲ್ಲಿ ನೋಡುವುದಾದರೆ ಜಗತ್ತಿನ ಹಲವು ದೇಶಗಳಲ್ಲಿ ಕಳೆದ ಒಂದು ದಶಕದಲ್ಲಿ ಅರಣ್ಯ ಪ್ರದೇಶ ಹೆಚ್ಚಳ ವಾಗುತ್ತಿಲ್ಲ. ಆದರೆ ಭಾರತದ ಸ್ಥಿತಿ ಭಿನ್ನ. ಕಾಡು ಅತಿ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ 10 ರಾಷ್ಟ್ರಗಳಲ್ಲಿ ಭಾರತವೂ ಸೇರಿದೆ ಎನ್ನುವುದೇ ಸಂತಸದ ವಿಷಯ. ಕರ್ನಾಟಕದಲ್ಲಿ ಈಗ ಇರುವ ಅರಣ್ಯ ಪ್ರಮಾಣ 37,550 ಚದರ ಕಿ.ಮೀ. ಅರಣ್ಯ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳವಾದ ಐದು ರಾಜ್ಯಗಳಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದು ಈ ಅವಧಿಯಲ್ಲಿ 1,101 ಚದರ ಕಿ.ಮೀ. ಹೆಚ್ಚಳ ವಾಗಿದೆ. ಮೊದಲನೇ ಸ್ಥಾನದಲ್ಲಿ ಆಂಧ್ರಪ್ರದೇಶ ರಾಜ್ಯವಿದ್ದು 2,141 ಚದರ ಕಿ.ಮೀ ಅರಣ್ಯ ಪ್ರಮಾಣ ಹೆಚ್ಚಾಗಿದೆ. ಅಷ್ಟೇ ಅಲ್ಲ ಭಾರತದಲ್ಲಿ ಅರಣ್ಯ ಮತ್ತು ಮರಗಳಿಂದ ಆವೃತವಾದ ಪ್ರದೇಶಗಳಲ್ಲಿ ಶೇ.1 ರಷ್ಟು ಏರಿಕೆಯಾಗಿದೆ ಎಂದು ಭಾರತದ ಅರಣ್ಯ ಸ್ಥಿತಿಗತಿ ವರದಿ 2017ರಲ್ಲಿ (ಐಖಊR) ಹೇಳಿದೆ. 2015ಕ್ಕೆ ಹೋಲಿಕೆ ಮಾಡಿದರೆ ಅರಣ್ಯ ಪ್ರಮಾಣ ಶೇ.3 ರಷ್ಟು ಏರಿಕೆಯಾಗಿರುವುದು ಹೆಮ್ಮೆ ಪಡಬೇಕಾದ ಸಂಗತಿ. 

Advertisement

ಅರಣ್ಯ ಪ್ರದೇಶ ಕುಗ್ಗಿದ ರಾಜ್ಯಗಳು
ಅರಣ್ಯ ಪ್ರದೇಶ ಕುಗ್ಗಿದ ರಾಜ್ಯಗಳಲ್ಲಿ ಮಿಜೋರಾಂ, ನಾಗಾ ಲ್ಯಾಂಡ್‌, ಅರುಣಾಚಲ ಪ್ರದೇಶ, ತ್ರಿಪುರಾ ಹಾಗೂ ಮೇಘಾಲ ಯಗಳಿವೆ! ಈ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದ ಅರಣ್ಯ ನಾಶವಾಗಿದೆ. ಹೀಗಾಗಿ ಈ ವಿದ್ಯಮಾನವು ಅಲ್ಲಿನ ಜನರ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುವಂತಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಅರಣ್ಯ ಪ್ರದೇಶಗಳ ಬಳಕೆ, ಅರಣ್ಯ ಪ್ರದೇಶಗಳ ಮುಳುಗಡೆ, ಕೃಷಿ ವಿಸ್ತರಣೆ ಹಾಗೂ ನೈಸರ್ಗಿಕ ವಿಕೋಪಗಳೇ ಇದಕ್ಕೆ ಮೂಲ ಕಾರಣ. ಆದರೆ ನೈಸರ್ಗಿಕ ಕಾರಣಗಳಿಗಿಂತಲೂ ಮಾನವನಿಂದಲೇ ಅರಣ್ಯ ನಾಶ ಹೆಚ್ಚಾಗುತ್ತಿದೆ. ಪ್ರಕೃತಿಯ ಮೇಲೆ ನಾವು ದಾಳಿ ನಡೆಸಿದರೆ ಪ್ರಕೃತಿ ನಮ್ಮ ಮೇಲೆ ದಾಳಿ ನಡೆಸುತ್ತದೆ! ಹೀಗಾಗಿ ಅತ್ಯಂತ ಹೆಚ್ಚು ವಾಯುಮಾಲಿನ್ಯದಿಂದ ನಲುಗುತ್ತಿರುವ ವಿಶ್ವದ 20 ನಗರಗಳ ಪಟ್ಟಿಯಲ್ಲಿ ಭಾರತದ 14 ನಗರಗಳು ಸ್ಥಾನ ಪಡೆದಿವೆ ಎನ್ನುವುದಕ್ಕೆ ಬೇರೇನು ಕಾರಣ ಕೊಡಲು ಸಾಧ್ಯ? ಈ ಎಲ್ಲಾ ನಗರಗಳು ಉತ್ತರ ಭಾರತದ ನಗರಗಳೇ ಆಗಿವೆ.

ದಕ್ಷಿಣ ಭಾರತದ ಯಾವ ನಗರಗಳೂ ಈ ಪಟ್ಟಿ ಯಲ್ಲಿ ಇಲ್ಲ ಎಂಬುದು ಸಮಾಧಾನದ ವಿಷಯ. ಆದರೆ ಬೆಂಗಳೂರಿ ನಲ್ಲಿ 10 ಮೈಕ್ರಾನ್‌ ಗಾತ್ರದ ಮಾಲಿನ್ಯ ಕಣಗಳ ಪ್ರಮಾಣ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಬಿಡುಗೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ. ಇದಕ್ಕೆ ಕಾರಣ ಅಭಿವೃದ್ಧಿ ದೃಷ್ಟಿಯಿಂದ ಮರಗಳ ಕಡಿತ, ಹೆಚ್ಚುತ್ತಿರುವ ವಾಯುಮಾಲಿನ್ಯ ಎನ್ನುವುದು ತಿಳಿದಿರುವಂಥದ್ದೆ. ಇನ್ನು ಮರಗಳ ಬುಡಕ್ಕೆ ಟಾರ್‌ ಹಾಕುವುದರಿಂದ ಬಿರುಸಿನ ಮಳೆ ಬಂದಾಗ ದುರ್ಬಲವಾದ ಬೇರುಗಳು ಕಿತ್ತುಬಂದು ಮರಗಳು ಬಿದ್ದು ಅದೆಷ್ಟು ಜನರನ್ನು ಬಲಿ ತೆಗೆದುಕೊಂಡಿವೆಯೋ ನೋಡಿ. ಅಷ್ಟೇ ಅಲ್ಲ ನಮ್ಮ ಮೆಟ್ರೋ ನಿರ್ಮಾಣ, ಟ್ರಾಫಿಕ್‌ ನಿಯಂತ್ರಣಕ್ಕೆ, ರಸ್ತೆಗಳ ವಿಸ್ತರಣೆಗಾಗಿ ಮರಗಳ ಮಾರಣಹೋಮ ಮಾಡ ಲಾಗುತ್ತಿದೆ. ಜಾಹೀರಾತು ಫ‌ಲಕಗಳಿಗೆ ಮರಗಳು ಅಡ್ಡಿಯಾಗುತ್ತವೆ ಎಂದು ರಾತ್ರೋ ರಾತ್ರಿ ಮರದ ಬುಡಕ್ಕೆ ಕೊಡಲಿ ಏಟು ಬೀಳುತ್ತಿವೆ. 

ರಾಸಾಯನಿಕ ಗಳನ್ನು ಸುರಿಯುತ್ತಿರುವುದರಿಂದ ಮರಗಳು ಒಣಗಿ ನಿಂತಿವೆ. ಒಂದು ಕಾಲದಲ್ಲಿ ಗಾರ್ಡನ್‌ ನಗರಿ ಯಾಗಿದ್ದ ಬೆಂಗಳೂರು ಈಗ ಗಾಬೇìಜ್‌ ಸಿಟಿಯಾಗುತ್ತಿರುವುದು, ಇಲ್ಲಿನ ವಾತಾವರಣದಲ್ಲಿ ಕಾವು ಹೆಚ್ಚಾಗುತ್ತಿರುವುದಕ್ಕೆ ಮರ ನಾಶವೂ ಕಾರಣವಲ್ಲವೇ? ಕಳೆದ ವರ್ಷ ದೆಹಲಿಯಲ್ಲಿ ಆದ ವಾಯುಮಾಲಿನ್ಯ ಜನರನ್ನು ನಲುಗಿಸಿತ್ತು. ಇನ್ನು ಗುರುಗ್ರಾಮ, ಲಖನೌ, ವಾರಾಣಸಿ, ಪಟಿ ಯಾಲಾ, ಫ‌ರಿದಾಬಾದ್‌, ಜೋಧಪುರ, ಜೈಪುರ, ಆಗ್ರಾ, ಕಾನ್ಪುರ, ಗಯಾ, ಪಾಟ್ನಾ ಸೇರಿದಂತೆ ಅನೇಕ ಭಾಗಗಳಲ್ಲಿ ಪ್ರತಿ ಘನ ಮೀಟರ್‌ ಗಾಳಿಯಲ್ಲಿರುವ ಪಿಎಂ 2.5 ಮೈಕ್ರಾನ್‌ ಕಣಗಳ ಸರಾ ಸರಿ ಸಂಖ್ಯೆ ಹೆಚ್ಚಾಗಿತ್ತು. ಅಲ್ಲಿನ ಸರ್ಕಾರಗಳು ಆಕಾಶಕ್ಕೆ ನೀರು ಸಿಂಪಡಣೆ ಮಾಡುವ ಮೂಲಕ ವಾಯು ಮಾಲಿನ್ಯ ನಿಯಂತ್ರಣಕ್ಕೆ ಹರಸಾಹಸಪಟ್ಟದ್ದನ್ನು ನಾವೆಲ್ಲಾ ನೋಡಿದ್ದೇವೆ. ಅದೇ ಅರಣ್ಯ ಪ್ರಮಾಣ ಹೆಚ್ಚಾಗಿದ್ದರೆ, ನಗರಗಳಲ್ಲಿ ಮರಗಳ ಸಂಖ್ಯೆ ಹೆಚ್ಚಿದ್ದರೆ ಇಂತಹ ದುರ್ಗತಿ ಬರುತ್ತಲೇ ಇರಲಿಲ್ಲ. ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವ ಗಾದೆ ಮಾತಿದೆ. ನಮ್ಮನ್ನಾಳುವ ಸರ್ಕಾರಗಳು ಪರಿಸರವನ್ನು ಸಂರಕ್ಷಣೆ ಮಾಡುವ ಮಾತನ್ನಾಡುತ್ತವೆ. ಮತ್ತೂಂದೆಡೆ ಪರಿಸರದ ಮೇಲೆ  ಕೆಟ್ಟ ಪರಿಣಾಮ ಬೀರುವ ಚಟುವಟಿಕೆಗಳಿಗೆ ರೆಡ್‌ ಕಾಪೆìಟ್‌ ಆಹ್ವಾನ ನೀಡುತ್ತವೆ. 

ಉತ್ತರ ಗುಜರಾತ್‌ನಿಂದ ದಕ್ಷಿಣದ ತುದಿಯ ಕೇರಳ ಸೇರಿದಂತೆ ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟದಲ್ಲಿರುವ ಅಪರೂಪದ ಜೀವ ವೈವಿಧ್ಯ, ನಶಿಸುತ್ತಿರುವ ಜೀವಿಗಳ ರಕ್ಷಣೆಗಾಗಿ ಸಿದ್ಧವಾದ ಕಸ್ತೂರಿ ರಂಗನ್‌ ವರದಿ ಹಾಗೂ ಹಿರಿಯ ವಿಜಾnನಿ ಮಾಧವ ಗಾಡ್ಗಿàಳ್‌ ನೇತೃತ್ವದ ಕೇಂದ್ರ ಸರ್ಕಾರದ ವರದಿಗಳು ಇಂದಿನ ರಾಜಕೀಯ ಮೇಲಾಟದಿಂದ ಧೂಳು ಹಿಡಿದಿವೆ. 

ಅರಣ್ಯ ನಾಶ ನಿಯಂತ್ರಣಕ್ಕೆ ನೂತನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಸೂಕ್ತ ಕ್ರಮ ಕೈಗೊಳ್ಳಲೇಬೇಕು. ಅಷ್ಟೇ ಅಲ್ಲ ಮಧ್ಯ ಕರ್ನಾಟಕ, ಬಯಲು ಸೀಮೆಗಳಲ್ಲಿ ಅರಣ್ಯ ಪ್ರಮಾಣ ವೃದ್ಧಿಯಾಗಲು ಪರಿಸರ ಕಾಳಿಜಿ ಯುಳ್ಳ ಎನ್‌ಜಿಒಗಳ ಸಲಹೆ ಪಡೆಯುವ ಮೂಲಕ ಅರಣ್ಯ ಸಂರಕ್ಷಣೆಗೆ ಸಮಿತಿಗಳನ್ನು ರಚಿಸಬೇಕು. ಮರಕಡಿದು ಸಾಗಿಸುವ ವ್ಯಕ್ತಿಗಳಿಗೆ ಇನ್ನಷ್ಟು ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಮನುಕುಲದ ಜೊತೆಗೆ ಇತರೆ ಜೀವವೈವಿಧ್ಯಗಳೂ ಕಮರಿಹೋಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಕಳೆದ ನಾಲ್ಕು ವರ್ಷಗಳಿಂದ ಬರದಿಂದ ಬಸವಳಿದಿ ದ್ದಾರೆ ರಾಜ್ಯದ ರೈತರು. ಹೀಗಾಗಿ ಭವಿಷ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗುವಂತೆ ಮಾಡಲು ಅರಣ್ಯಾಭಿವೃದ್ಧಿಗೆ ಈಗಿನಿಂದಲೇ ಸರ್ಕಾರ ಒತ್ತು ನೀಡಬೇಕು. ಇಲ್ಲದಿದ್ದರೆ ಭವಿಷ್ಯ ಊಹಿಸಿಕೊಳ್ಳ ಲಾಗದಷ್ಟು ಭೀಕರವಾಗಿರುತ್ತದೆ.

– ಎಸ್‌ಎಂ ಸೋಮನಗೌಡ

Advertisement

Udayavani is now on Telegram. Click here to join our channel and stay updated with the latest news.

Next