Advertisement
ಮುಂದೆ ರಾಘವೇಂದ್ರ ಬಿ. ಶೆಟ್ಟಿಗಾರ್‌ರವರು ಜಿ. ಎಸ್. ಶಿವರುದ್ರಪ್ಪ ಅವರ ರಚನೆಯಾದ “ಕಾಣದ ಕಡಲಿಗೇ….’ ಹಾಡನ್ನು ಹಾಡಿದರೆ, ರಂಗಕರ್ಮಿ ವಿನಾಯಕ ಎಸ್. ಎಂ. ಅವರು ಹಯವದನ ನಾಟಕದ “ಬಂದಾನೋ ಬಂದಾ ಸವಾರ….'(ರಚನೆ: ಗಿರೀಶ್ ಕಾರ್ನಾಡ್) ಎನ್ನುವ ಸೊಗಸಾದ ರಂಗಗೀತೆಯನ್ನು ಹಾಡಿ ಮನ ರಂಜಿಸಿದರು. ನಂತರ ಸುಮಾ ಅವರು “ಲೋಕದ ಕಣ್ಣಿಗೆ ರಾಧೆಯು ಕೂಡಾ…’ (ರಚನೆ: ಎಚ್. ಎಸ್. ವೆಂಕಟೇಶಮೂರ್ತಿ) ಹಾಡನ್ನು ಹಾಗೂ ರûಾ ಅವರು ಕವಿ ಗೋಪಾಲಕೃಷ್ಣ ಆಡಿಗರ ” ಆಗು ನೀನು ಇಬ್ಬನಿ ನೆಲೆಸುವ ಹೂವು….’ ಹಾಡಿ ಮುದ ನೀಡಿದರು. ಹಾಗೆಯೇ ರಾಘವೇಂದ್ರ ಅವರು ಸುಬ್ರಾಯ ಚೊಕ್ಕಾಡಿಯವರ ” ಮುನಿಸು ತರವೇ….’ ಮತ್ತು ಕುವೆಂಪು ಅವರ ” ಓ ನನ್ನ ಚೇತನಾ….’ ಹಾಡುಗಳನ್ನು ಭಾವಪೂರ್ಣವಾಗಿ ಹಾಡಿದರೆ, ವಿನಾಯಕ ಅವರು ಮೈಸೂರು ರಾಜ್ಯದ ದೊರೆ ರಣಧೀರ ಕಂಠೀರವ ಇವರ ಸಾಹಸ ಮತ್ತು ಶೌರ್ಯವನ್ನು ಹೊಗಳುವ ” ಮೈಸೂರು ರಾಜ್ಯದ ದೊರೆಯೇ….’ ಮತ್ತು ಬಿ. ವಿ. ಕಾರಂತರು ಮೈಸೂರಿನಲ್ಲಿ ರಂಗಾಯಣ ಕಟ್ಟುವ ಆರಂಭದಲ್ಲಿ ರಚಿಸಿದ ” ಗೋವಿಂದ ಮುರ ಹರ ಗೋವಿಂದಾ…’ ಹಾಡನ್ನು ಹಾಡಿ ಪ್ರೇಕ್ಷಕರೂ ದನಿಗೂಡಿಸುವಂತೆ ಪ್ರೇರಣೆ ನೀಡಿದರು. ಕೊನೆಯಲ್ಲಿ ಸುಮಾ ಮತ್ತು ರûಾ ಜೊತೆಯಾಗಿ ನಮ್ಮ ಹಿರಿಯರು ನಮ್ಮ ಒಳಿತಿಗಾಗಿ ಮಾಡಿದಂತಹ ವ್ಯವಸ್ಥೆಗಳ ಕುರಿತಾದ ಒಂದು ಬಗೆಯ ಜನಪದ ಶೈಲಿಯ “ಶರಣಯ್ಯ ಶರಣು ಶರಣಯ್ಯ…’ ಹಾಡನ್ನು ಹಾಡಿದ್ದು, ವಿನಾಯಕ ಅವರು ಹಾಡಿದ ಕೆ.ವಿ. ತಿರುಮಲೇಶ್ವರರ ” ದಾರಿ ತಪ್ಪಿದನೊಬ್ಬ ಬ್ರಾಹ್ಮಣ…’ (ರಾಗ ಸಂಯೋಜನೆ: ಗುರುರಾಜ ಮಾರ್ಪಳ್ಳಿ) ಹಾಡು ಮಾರ್ಮಿಕವಾಗಿತ್ತು. ಅಂತಿಮವಾಗಿ ಭೂಮಿಕಾ (ರಿ.), ಹಾರಾಡಿ ರಂಗ ತಂಡದ ವಿಕ್ರಂ, ರೋಷನ್ ಮತ್ತು ರೋಹಿತ್ ಇವರುಗಳ ಅಲ್ಲಾವುದ್ದೀನನ ಮಾಯಾದೀಪ ನಾಟಕದ ” ಹುಯ್ಯಹೋ.. ಹುಯ್ಯಹೋ…’ ಹಾಡಿಗೆ ಎಲ್ಲರೂ ದನಿಗೂಡಿಸಿದರು. ತಬಲಾದಲ್ಲಿ ಪ್ರಶಾಂತ್ ಬಿರ್ತಿ ಮತ್ತು ಜಂಬೆಯಲ್ಲಿ ರೋಷನ್ ಬೈಕಾಡಿ ಸಹಕರಿಸಿದ್ದರು. ಪ್ರತಿ ಹಾಡಿನ ಕೊನೆಯಲ್ಲಿ ರಂಗಕರ್ಮಿ ರೋಹಿತ್ ಬೈಕಾಡಿಯವರು ಗಾಂಧೀಜಿಯವರ ವಿಚಾರಧಾರೆೆಗಳೊಂದಿಗೆ ಜೀವನದ ಕೆಲವು ಘಟನೆಗಳ ನಿರೂಪಣೆ ಮಾಡುತ್ತಿದ್ದುದು ಸಮಯೋಚಿತವಾಗಿತ್ತು.
Advertisement
ಶಾಂತಿದೂತನ ನೆನಪಲ್ಲಿ ಹಾಡಿನ ಸಂಜೆ
06:00 AM Nov 09, 2018 | |
Advertisement
Udayavani is now on Telegram. Click here to join our channel and stay updated with the latest news.