Advertisement

ಇಂಗ್ಲೆಂಡ್‌-ಕಿವೀಸ್‌’ಸೆಮಿ’ಹೋರಾಟ

01:52 AM Jul 03, 2019 | sudhir |

ಚೆಸ್ಟರ್‌ ಲೀ ಸ್ಟ್ರೀಟ್: ಭಾರತದ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ 31 ರನ್ನುಗಳ ಜಯ ಸಾಧಿಸಿ ಸೆಮಿಫೈನಲ್ ತಲುಪುವ ಆಸೆಯನ್ನು ಜೀವಂತವಿರಿಸಿಕೊಂಡಿರುವ ಆತಿಥೇಯ ಇಂಗ್ಲೆಂಡ್‌ ತಂಡವು ವಿಶ್ವಕಪ್‌ ಕ್ರಿಕೆಟ್ ಕೂಟದಲ್ಲಿ ಬುಧವಾರ ಲೀಗ್‌ ಹಂತದ ಕೊನೆಯ ಪಂದ್ಯವನ್ನು ನ್ಯೂಜಿಲ್ಯಾಂಡ್‌ ವಿರುದ್ಧ ಚೆಸ್ಟರ್‌ ಲೀ ಸ್ಟ್ರೀಟ್ ಅಂಗಳದಲ್ಲಿ ಆಡಲಿದೆ.

Advertisement

ಇತ್ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯ ವಾಗಿದೆ. ಸೆಮಿಫೈನಲ್ ಮೆಟ್ಟಿಲೇರಬೇಕಾದರೆ ಈ ಪಂದ್ಯವನ್ನು ಇಂಗ್ಲೆಂಡ್‌ ಗೆಲ್ಲಲೇಬೆ ಕಾದ ಸ್ಥಿತಿ ಎದುರಾಗಿದೆ. ಇಷ್ಟರವರೆಗೆ ಆಡಿದ 8 ಪಂದ್ಯಗಳಲ್ಲಿ ಇಂಗ್ಲೆಂಡ್‌ 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್‌ ಸ್ಥಿತಿಯೂ ಇದೇ ರೀತಿಯಲ್ಲಿದೆ. ಆಡಿದ 8 ಪಂದ್ಯಗಳಲ್ಲಿ 11 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲಿಗೇರಲಿದೆ. ಯಾರು ಗೆಲ್ಲುವುದು ಅತೀಮುಖ್ಯವಾಗಿದೆ.

ಇಂಗ್ಲೆಂಡ್‌ ಸೋತರೆ ಕಷ್ಟ

ಒಂದು ವೇಳೆ ಇಂಗ್ಲೆಂಡ್‌ ಗೆದ್ದರೆ ನ್ಯೂಜಿಲ್ಯಾಂಡ್‌ 11 ಅಂಕದೊಂದಿಗೆ ಸ್ಪರ್ಧೆ ಮುಗಿಸಲಿದೆ. ಶುಕ್ರವಾರದ ಪಂದ್ಯದಲ್ಲಿ ಒಂದು ವೇಳೆ ಪಾಕಿಸ್ಥಾನವು ಬಾಂಗ್ಲಾವನ್ನು ಉರುಳಿಸಿದರೆ ಅದು ಕೂಡ 11 ಅಂಕ ಪಡೆಯಲಿದೆ. ಆಗ ಉತ್ತಮ ರನ್‌ಧಾರಣೆಯ ಆಧಾರದಲ್ಲಿ ಸದ್ಯದ ಸ್ಥಿತಿಯಲ್ಲಿ ನ್ಯೂಜಿಲ್ಯಾಂಡ್‌ ಸೆಮಿಫೈನಲ್ಗೆ ತೇರ್ಗಡೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ನ್ಯೂಜಿಲ್ಯಾಂಡ್‌ ಗೆದ್ದರೆ ಇಂಗ್ಲೆಂಡ್‌ ಹೊರ ಬೀಳುವುದು ಬಹುತೇಕ ಖಚಿತ. ಆದರೆ ಬಾಂಗ್ಲಾ ವಿರುದ್ಧ ಪಾಕಿಸ್ಥಾನ ಸೋತರೆ ಮಾತ್ರ ಇಂಗ್ಲೆಂಡಿಗೆ ಮುನ್ನಡೆಯುವ ಅವಕಾಶವಿದೆ.

ಇಂಗ್ಲೆಂಡ್‌ ಬಲಿಷ್ಠ

Advertisement

ಪ್ರಚಂಡ ಬ್ಯಾಟಿಂಗ್‌ ಹೊಂದಿರುವ ಇಂಗ್ಲೆಂಡ್‌ ಹೆಚ್ಚು ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಆದರೆ ಕೆಲವು ಪಂದ್ಯಗಳಲ್ಲಿನ ತಪ್ಪಿನಿಂದ ಇಂಗ್ಲೆಂಡ್‌ ಸಣ್ಣ ಅಂತರದ ಸೋಲನುಭವಿಸಿ ಇಕ್ಕಟ್ಟಿಗೆ ಸಿಲುಕಿರುವುದು ದುರದೃಷ್ಟಕರ ಎನ್ನಬಹುದು. ವಿಶ್ವಕಪ್‌ ಟೂರ್ನಿಯ ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿದ್ದ ಇಂಗ್ಲೆಂಡ್‌ಗೆ ಬ್ಯಾಟಿಂಗ್‌ ಮೇಲೆ ಹೆಚ್ಚಿನ ನಂಬಿಕೆ.

ಪ್ರಚಂಡ ಬ್ಯಾಟ್ಸ್‌ಮನ್‌ಗಳಾದ ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ ಬೃಹತ್‌ ಮೊತ್ತದ ಆರಂಭಿಕ ಜತೆಯಾಟ ಇಂಗ್ಲೆಂಡ್‌ ತಂಡಕ್ಕೆ ವರದಾನವಾಗಲಿದೆ. ಇದಕ್ಕೆ ಭಾರತದ ಎದುರಿನ ಪಂದ್ಯವೇ ಸಾಕ್ಷಿ. ಇನ್ನು ಜೋ ರೂಟ್, ನಾಯಕ ಇಯಾನ್‌ ಮಾರ್ಗನ್‌ ಉತ್ತಮ ಫಾರ್ಮ್ನಲ್ಲಿರುವುದು ತಂಡಕ್ಕೆ ಪ್ಲಸ್‌ ಪಾಯಿಂಟ್. ಆಲ್ರೌಂಡರ್‌ ಪ್ರದರ್ಶನ ನೀಡುತ್ತಿರುವ ಬೆನ್‌ ಸ್ಟೋಕ್ಸ್‌ ತಂಡದ ನಂಬಿಕೆಯ ಆಟಗಾರರಾಗಿದ್ದಾರೆ. ಪ್ರತಿ ಪಂದ್ಯದಲ್ಲೂ ತಂಡ ಸಂಕಷ್ಟಕ್ಕೆ ಸಿಲುಕಿದ ವೇಳೆ ಸ್ಟೋಕ್ಸ್‌ ತಮ್ಮ ಏಕಾಂಗಿ ಹೋರಾಟದ ಮೂಲಕ ತಂಡಕ್ಕೆ ನೆರವಾಗಿದ್ದಾರೆ. ಸ್ಫೋಟಕ ಆಟಕ್ಕೆ ಹೆಸರಾದ ಜಾಸ್‌ ಬಟ್ಲರ್‌ ಎದುರಾಳಿ ತಂಡಕ್ಕೆ ತುಂಬಾ ಅಪಾಯಕಾರಿಯಾಗಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜೋಫ‌್ರ ಆರ್ಚರ್‌, ಕ್ರಿಸ್‌ ವೋಕ್ಸ್‌, ಲಿಯಮ್‌ ಪ್ಲಂಕೆಟ್, ಅದಿಲ್ ರಶೀದ್‌ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.

ಕಿವೀಸ್‌ಗೆ ಆರಂಭಿಕರ ಸಮಸ್ಯೆ

ಆರಂಭಿಕ ಆಟಗಾರರಾದ ಮಾರ್ಟಿನ್‌ ಗಪ್ಟಿಲ್ ಮತ್ತು ಕಾಲಿನ್‌ ಮುನ್ರೊ ಪ್ರತಿ ಪಂದ್ಯದಲ್ಲೂ ವಿಫ‌ಲರಾಗುತ್ತಿರುವುದು ನ್ಯೂಜಿಲ್ಯಾಂಡ್‌ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಮುನ್ರೊ ಸ್ಥಾನಕ್ಕೆ ಹೆನ್ರಿ ನಿಕೋಲ್ಸ್ ಅವರನ್ನು ಕಣಕ್ಕಿಳಿಸಿದರೂ ಕೂಡ ಅವರಿಂದ ನಿರೀಕ್ಷಿತ ಪ್ರದರ್ಶನ ತೋರಿಬರಲಿಲ್ಲ. ಇದರಿಂದ ತಂಡದ ಎಲ್ಲ ಹೊಣೆ ಮಧ್ಯಮ ಕ್ರಮಾಂಕದ ಆಟಗಾರರ ಮೇಲೆ ಬೀಳಲಿದೆ. ನಾಯಕ ಕೇನ್‌ ವಿಲಿಯಮ್ಸನ್‌, ರಾಸ್‌ ಟೇಲರ್‌, ಟಾಮ್‌ ಲ್ಯಾಥಮ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಮೇಲೆ ಹೆಚ್ಚಿನ ಭರವಸೆ ಇಡಲಾಗಿದೆ. ಕಿವೀಸ್‌ ತಂಡದ ಬೌಲಿಂಗ್‌ ಆಂಗ್ಲರ ಬೌಲಿಂಗ್‌ಗಿಂತ ಹೆಚ್ಚು ಬಲಿಷ್ಠವಾಗಿದೆ. ಲ್ಯಾಕಿ ಫ‌ರ್ಗ್ಯುಸನ್‌, ಟ್ರೆಂಟ್ ಬೌಲ್r, ಐಶ್‌ ಸೋಧಿ, ಮಿಚೆಲ್ ಸ್ಯಾಂಟ್ನರ್‌ ಅವರ ಬೌಲಿಂಗ್‌ ಘಾತಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next