Advertisement

Bangalore: ಕೆಲಸಕ್ಕಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಕದ್ದ ನೌಕರರು

09:37 AM Mar 13, 2024 | Team Udayavani |

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಲ್ಯಾಪ್‌ಟಾಪ್‌ ಹಾಗೂ ಕ್ರೋಮ್‌ ಬಾಕ್ಸ್‌ಗಳನ್ನು ಕಳವು ಮಾಡಿದ್ದ ಸಂಸ್ಥೆಯ ಇಬ್ಬರು ನೌಕರರು ಸೇರಿ ಐವರನ್ನು ಕುಮಾರಸ್ವಾಮಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ‌

Advertisement

ದರ್ಶನ್‌, ಸುಜಯ್, ಕಾರ್ತಿಕ್‌, ಶಶಿಕುಮಾರ್‌ ಅಲಿಯಾಸ್‌ ಶಶಿ, ನಿಲೇಶ್‌ ಬಂಧಿತರು. ಆರೋಪಿಗಳಿಂದ 16 ಲಕ್ಷ ರೂ. ಮೌಲ್ಯದ 29 ವಿವಿಧ ಕಂಪನಿಯ ಲ್ಯಾಪ್‌ಟಾಪ್‌, 59 ಕ್ರೋಮ್‌ ಬಾಕ್ಸ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಮಾರಸ್ವಾಮಿ ಲೇಔಟ್‌ನ ನ್ಯೂ ಜೈಸಾ ಟೆಕ್ನಾಲಜಿಸ್‌ ಕಂಪನಿಯಲ್ಲಿ ಹಲವಾರು ದಿನಗಳಿಂದ ಲ್ಯಾಪ್‌ಟಾಪ್‌ ಹಾಗೂ ಕ್ರೋಮ್‌ ಬಾಕ್ಸಗಳು ಕಳ್ಳತನವಾಗುತ್ತಿತ್ತು. ಕಂಪನಿಯ ಮ್ಯಾನೇಜರ್‌ ಈ ಬಗ್ಗೆ ಕೆಎಸ್‌ ಲೇಔಟ್‌ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಲ್ಯಾಪ್‌ ಟಾಪ್‌ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ ಆರೋಪಿ ಕಾರ್ತಿಕ್‌ ಹಾಗೂ ಸುಜಯ್‌ ಲ್ಯಾಪ್‌ಟಾಪ್‌ ತೆಗೆದುಕೊಂಡು ಕಾರ್ತಿಕ್‌ಗೆ ಕೊಟ್ಟಿದ್ದರು. ಕದ್ದ ಲ್ಯಾಪ್‌ ಟಾಪ್‌ ಅನ್ನು ಐವರು ಸೇರಿ ಮಾರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next