Advertisement

ಶಾಲಾ, ಕಾಲೇಜುಗಳ ವಿದ್ಯುತ್‌, ನೀರಿನ ಬಿಲ್‌ ಮಾಹಿತಿ ಕೇಳಿದ ಶಿಕ್ಷಣ ಇಲಾಖೆ

09:33 PM Mar 21, 2024 | Team Udayavani |

ಬೆಂಗಳೂರು: 2024-25ನೇ ಸಾಲಿನ ಸರಕಾರಿ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ವಿದ್ಯುತ್‌, ನೀರಿನ ಬಿಲ್‌ ಪೂರೈಕೆಗೆ ಅನುದಾನ ನೀಡುವ ಉದ್ದೇಶದಿಂದ  ಮಾಸಿಕವಾಗಿ ಅವಶ್ಯವಿರುವ ಅನುದಾನದ ಮಾಹಿತಿ ನೀಡುವಂತೆ ರಾಜ್ಯದ ಎಲ್ಲ ಸರಕಾರಿ ಶಾಲಾ, ಕಾಲೇಜುಗಳಿಗೆ ಶಾಲಾ ಶಿಕ್ಷಣ ಇಲಾಖೆಯು ಸೂಚಿಸಿದೆ.

Advertisement

ರಾಜ್ಯದಲ್ಲಿ 46,821 ಶಾಲೆ ಹಾಗೂ 1,2340 ಪಿಯು ಕಾಲೇಜುಗಳಿಗೆ ನೀರು ಮತ್ತು ವಿದ್ಯುತ್‌ ಬಿಲ್‌ಗಾಗಿ ವಾರ್ಷಿಕವಾಗಿ ಸುಮಾರು 25 ಕೋಟಿ ರೂ. ಅಗತ್ಯ ಇದೆ. ಈ ಅನುದಾನವನ್ನು ಒದಗಿಸಿ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next