ಹೊಸದಿಲ್ಲಿ: ಭಾರತದ ಆರ್ಥಿಕತೆ ಕುಸಿಯುತ್ತಿಲ್ಲ. ಹಾಗೆಂದು ತೀರಾ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಗೊಳ್ಳುತ್ತಲೂ ಇಲ್ಲ. ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರ ಗಳು ಎದುರಿಸುತ್ತಿರುವ ಸವಾಲುಗಳ ನಡು ವೆಯೂ ಆರ್ಥಿಕತೆ ಸುಸ್ಥಿರವಾಗಿದೆ. ಆರ್ಥಿ ಕತೆಯ ಬೆಳವಣಿಗೆಗೆ ಎಲ್ಲರ ಸಹಕಾರ ಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಖ್ಯಸ್ಥ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ದಿಲ್ಲಿಯಲ್ಲಿ ಸೋಮವಾರ ಸಂಜೆ ನಡೆದ ಎಫ್ಐಸಿಸಿಐ ಸಮಾರಂಭದಲ್ಲಿ ಮಾತನಾಡಿದ ಅವರು, “”ಭಾರತದ ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ನಿರಾಶಾವಾದಿಗಳಾಗಿರುವುದರಿಂದ ಅಥವಾ ಔದ್ಯಮಿಕ ರಂಗಗಳಲ್ಲಿನ ಸಣ್ಣಪುಟ್ಟ ಕುಸಿತಗಳನ್ನು ಟೀಕಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಆಶಾವಾದಿಗಳಂತೆ ಆಲೋಚಿಸುವುದು ಹಾಗೂ ಅಭಿವೃದ್ಧಿಗಾಗಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಪ್ರಯತ್ನಶೀಲರಾಗುವುದೇ ಆರ್ಥಿಕಾಭಿವೃದ್ಧಿಗೆ ಸೋಪಾನ” ಎಂದು ತಿಳಿಸಿದರು.
ಭಾರತದ ಆರ್ಥಿಕತೆ ಕುಸಿಯುತ್ತಾ ಸಾಗಿದೆ. ಆಟೋಮೊಬೈಲ್ ಕ್ಷೇತ್ರ ಸಹಿತ ಅನೇಕ ರಂಗಗಳು ನಷ್ಟದಲ್ಲಿವೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಗಳಿಗೆ ಈ ರೀತಿಯಾಗಿ ಪ್ರತಿಕ್ರಿಯಿ ಸಿದ್ದಾರೆ.
ಕೆಲವು ದಿನಗಳಿಂದ ಆರ್ಥಿಕತೆ ಕುಸಿಯುತ್ತಿದ್ದು, ಸರಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ದಾಸ್ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಷೇರು ಮಾರುಕಟ್ಟೆ ಕೂಡ ಕುಸಿತ ಕಂಡಿತ್ತು. 5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವವರ ಮೇಲೆ ಕೇಂದ್ರ ಸರಕಾರ ತೆರಿಗೆ ಹೆಚ್ಚಳ ಮಾಡಿದ್ದರಿಂದ ವಿದೇಶಿ ಹೂಡಿಕೆ ದಾರರು ಹೂಡಿಕೆ ಹಿಂಪಡೆದಿದ್ದರು.
ಆರ್ಥಿಕ ಕುಸಿತ ಆತಂಕಕಾರಿ. ಸರಕಾರದಿಂದ ತುರ್ತಾಗಿ ಕೆಲವು ಸುಧಾರಣೆಗಳು ಘೋಷಣೆಯಾಗಬೇಕಿದೆ.
ರಘುರಾಮ್ ರಾಜನ್, ಆರ್‌ಬಿಐ ಮಾಜಿ ಗವರ್ನರ್