ನವ ದೆಹಲಿ : ಕಾಶ್ಮೀರದಲ್ಲಿನ ಪರಿಸ್ಥಿತಿಯ ಬಗ್ಗೆ ಕೇಂದ್ರದ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕಿಡಿ ಕಾರಿದ್ದಾರೆ.
ಆರ್ಟಿಕಲ್ 370 ರದ್ಧತಿ ಆದ ನಂತರ ಜಮ್ಮು ಕಾಶ್ಮೀರದ ಬಗ್ಗೆ ನೀವು ಹೇಳಿದ ಭರವಸೆಗಳು ಭರವಸೆಯಾಗಿಯೇ ಉಳಿದಿವೆ ಎಂದು ಅವರು ಲೋಕಸಭೆಯಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಓದಿ : ಕೇಂದ್ರ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ: ವಿ.ಸೋಮಣ್ಣ
ನಿಮಗೆ ಚುನಾವಣೆ ಮುಗಿದ ಮೇಲೆ ಕೊಟ್ಟ ಭರವಸೆಗಳು ಮರೆತು ಹೋಯಿತೆ..? 200 ರಿಂದ 300 ಹೆಕ್ಟರ್ ಪ್ರದೇಶಗಳನ್ನು ಕಳೆದುಕೊಂಡಿರುವ ಕಾಶ್ಮೀರಿ ಪಂಡಿತರಿಗೆ ಅದನ್ನು ಮರಳಿ ಕೊಡಿಸಲು ನಿಮ್ಮಿಂದ ಆಗುತ್ತಿಲ್ಲ. ಚುನಾವಣೆ ಪ್ರಣಾಳಿಕೆಯ ಪ್ರಕಾರ ಮತ್ತೆ ಕಾಶ್ಮೀರಿ ಪಂಡಿತರನ್ನು ಕಣಿವೆ ರಾಜ್ಯಕ್ಕೆ ಕರೆತರಲು ನಿಮ್ಮಿಂದ ಆಗಿಲ್ಲ. ಭರವಸೆಗಳು ಚುನಾವಣೆ ಮುಗಿಯುವ ತನಕ ಮಾತ್ರವಾ..? ಎಂದು ಚೌಧರಿ, ಕೇಂದ್ರ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಓದಿ : ನಿಮ್ಮಲ್ಲಿರುವ 50, 200 ರೂ. ನೋಟುಗಳು ನಕಲಿ ಇರಬಹುದು ಪರಿಶೀಲಿಸಿಕೊಳ್ಳಿ : ಆರ್ ಬಿ ಐ