ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಬದುಕಿನ ಪಯಣ ಮುಂದೆ.ಕೊರೊನಾ ಎಂಬ ಮಹಾಮಾರಿ ಸೋಂಕಿನಿಂದ ಜೀವ ಜೀವನ ಎಲ್ಲವು ನಿರ್ನಾಮವಾಯಿತೆಂದು ಅಂಜಿ ಅಳುಕಿ ಕುಳಿತರೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಜರ್ಜರಿತರಾಗುವುದು ಖಂಡಿತ ” ಧೈರ್ಯಂ ಸರ್ವತ್ರ ಸಾಧನಂ” ಎಂಬಂತೆ ಉಸಿರಿರುವರೆಗೂ ಧೈರ್ಯವೆಂಬ ಬಂದೂಕನ್ನು ಹಿಡಿದು ಮಾಸ್ಕ್, ಸ್ಯಾನಿಟೈಸರ್. ಸಾಮಾಜಿಕ ಅಂತರವೆಂಬ ಮದ್ದು ಗುಂಡುಗಳನ್ನು ಬಳಸಿ ಕೋವಿಡ್ ವೈರಸ್ ನ್ನು ಹೆಡೆಮುರಿಕಟ್ಟಿ ಬದಕುವ ಪ್ರಯತ್ನ ನಮ್ಮದಾಗಬೇಕು.
ಮಾರ್ಚ್ 14ರಂದು ಮುಚ್ಚಲ್ಪಟ್ಟ ಜ್ಙಾನ ದೇಗುಲ ಇಂದಿಗೂ ತೆರೆದೆ ಇಲ್ಲ. ನಿರಂತರ ನಿರಾತಂಕವಾಗಿ ಓದು ಬರಹ ಕಲಿಯಬೇಕಾದ ಮಕ್ಕಳು ಖಾಲಿ ಕೊಡಗಳಂತಾಗಿವೆ. ಕಲಿಕೆಯ ಕನಿಷ್ಠ ಮಟ್ಟವು ಮಾಯವಾಗಿದೆ.ಫೋಷಕರ ಭಯದ ನಡುವೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿವಿಧ ಆಯಾಮಗಳ ಮೂಲಕ ಶಿಕ್ಷಣ ಕೊಡುವುದಕ್ಕೆ ಪ್ರಯತ್ನಿಸುತ್ತಿದೆ.
ಆನ್ಲೈನ್ ಶಿಕ್ಷಣದಂತ ಶಿಕ್ಷಣ ಭೌಗೋಳಿಕವಾಗಿ ದುರ್ಗಮವಾಗಿರುವ ಪ್ರದೇಶದಲ್ಲಿ 1ರಿಂದ 5 ತರಗತಿಗಳಿಗೆ ಈ ಪ್ರಯತ್ನ ಕನಸಿನ ಮಾತೆ ಸರಿ. ಏಕೆಂದರೆ ಯಾವೂದೆ ನೆಟ್ ವರ್ಕ್ ಇಲ್ಲಿಗೆ ಸೂಟ್ ಆಗುವುದಿಲ್ಲ.ಕಾಲ್ಪನಿಕ ಕೊಠಡಿಗಳ ಮೂಲಕ ಮನೆ ಪಾಠ,ವಠಾರ ಪಾಠದ ಮೂಲಕ ಮಕ್ಕಳು ಶಾಲೆಯಲ್ಲಿ ಕಲಿತಹಾಗೆ ಸಹಪಾಠಿಗಳು, ಶಿಕ್ಷಕರ ಎದುರಿನಲ್ಲಿ ಆತ್ಮವಿಶ್ವಾಸದಿಂದ ಕಲಿಯುತ್ತಾರೆ. ಸದ್ಯದ ಸಂದಿಗ್ದ ಪರಿಸ್ತಿತಿಯಲ್ಲಿ ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮವು ಕಾಲ್ಪನಿಕ ಕೊಠಡಿಗಳ ಮೂಲಕ ನೇರ ಭೋದನೆಯೇ ಹೆಚ್ಚು ಪರಿಣಾಮಕಾರಿ ಎನ್ನುವುದು ನನ್ನ ಅಭಿಪ್ರಾಯ.
ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರು
ಸ.ಕಿ.ಪ್ರಾ ಶಾಲೆ ಕುಳ್ಳಂಬಳ್ಳಿ.