ಹಳ್ಳಿಗಳಲ್ಲಿ ಕೆಲವು ನೋಡ ನೋಡುತ್ತಲೇ ಪುಟಾಣಿ ನಗರಗಳಾಗಿ ಬೆಳೆದ ಗಾಥೆಗಳನ್ನು ಫ್ಲ್ಯಾಶ್‌ಬ್ಯಾಕ್‌ನಲ್ಲಿ ನೋಡುವಾಗ ಒಂದಂಶ ಸೆಳೆಯುತ್ತದೆ. ಹಿಂದೆ ಯಾವ ಯಾವ ಹಳ್ಳಿಗಳಲ್ಲಿ ಅಕ್ಕಿಯ ಗಿರಣಿಗಳು ಕೆಲಸ ಮಾಡುತ್ತಿದ್ದವೋ ಅಲ್ಲೆಲ್ಲ ನಗರೀಕರಣದ ವಾತಾವರಣ ವೃದ್ಧಿಸಿದೆ. ಹತ್ತೆಂಟು ಹಳ್ಳಿಗೆ ಒಂದು ಗಿರಣಿ, ಅಕ್ಕಪಕ್ಕದಲ್ಲಿ ಒಂದು ಕಿರಾಣಿ ಅಂಗಡಿ, ಬಾಜುವಿನಲ್ಲಿ ಕ್ಯಾಂಟೀನ್, ತುಸು ದೂರದಲ್ಲಿ ಶರಾಬು ಅಂಗಡಿ. ರೈಸ್‌ಮಿಲ್‌ಗಳು ಒಂದು ರೀತಿಯ ಕ್ರಾಂತಿಗೆ ಆ ಕಾಲದಲ್ಲಿ ಕಾರಣವಾದವು ಎನ್ನುತ್ತಿರುವಾಗ ಇತಿಹಾಸ ಮರುಕಳಿಸಿದೆ. ಸಾಗರ ತಾಲೂಕಿನ ಸುಪ್ರೀಮ್ ರೈಸ್ ಮಿಲ್ ತನ್ನ ಮಾಳಿಗೆಗೆಲ್ಲ ಸೋಲಾರ್ ಪ್ಯಾನೆಲ್ ಅಳವಡಿಸಿಕೊಂಡು 400 ಕಿ.ವ್ಯಾ ವಿದ್ಯುತ್ ಉತ್ಪಾದನೆಗೆ ಮುಂದಾಗಿರುವುದು, ಈ ಕ್ಷೇತ್ರದ ಬದಲಾವಣೆಯ ಹರಿಕಾರ ಎನ್ನಬಹುದಾದ ಬೆಳವಣಿಗೆ.
ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ಕಿ ಗಿರಣಿಯೊಂದು ತನ್ನ ಛಾವಣಿಗೆ ಸೋಲಾರ್ ಪ್ಯಾನೆಲ್ ಅಳವಡಿಸಿದ ಮೊದಲ ಉದಾಹರಣೆ ಸಾಗರ ತಾಲ್ಲೂಕಿನ ಆನಹಳ್ಳಿ ರಸ್ತೆಯ ಚಿಪಿÛ ಆದಿಶಕ್ತಿ ನಗರದ ಸಮೀಪ ಕಾಣಸಿಗುತ್ತದೆ. ವಿವಿಧ ಕಟ್ಟಡಗಳಲ್ಲಿ ಹಂಚಿಹೋಗಿರುವ ರೈಸ್ ಮಿಲ್‌ನ ಐದು ಚಾವಣಿಗಳಲ್ಲಿ ಸೋಲಾರ್ ಪ್ಯಾನೆಲ್ ಹಂಚಿಹೋಗಿದ್ದು, ಬರೋಬ್ಬರಿ 2.75 ಲಕ್ಷ ರೂ. ವೆಚ್ಚದಲ್ಲಿ ಗೋವಿಂದರಾಯ ಪ್ರಭು ಹಾಗೂ ಗಿರೀಶ್ ಪ್ರಭು ಅವರ “ಡಬಲ್ ಆ್ಯಕ್ಟ್’ ಸಾಧನೆ ನಿಜಕ್ಕೂ ಗಮನಾರ್ಹ. ಒಂದೆಡೆ ಮಿಲ್‌ನಲ್ಲಿ ಭತ್ತದಿಂದ ಅಕ್ಕಿ ಉತ್ಪಾದನೆ, ಇತ್ತ ಸೂರ್ಯನ ಸಹಕಾರದಲ್ಲಿ ವಿದ್ಯುತ್ ಸಂಪಾದನೆ!
ಪ್ರಭುಗಳೊಂದಿಗೆ ಮೆಸ್ಕಾಂ ಒಪ್ಪಂದ ಆಗಿರುವುದು ಪ್ರತಿ ಯೂನಿಟ್‌ಗೆ 5.67 ರೂ.ಗಷ್ಟೇ. ಅವರ ಲೆಕ್ಕಾಚಾರದಲ್ಲಿ ಇದು ಕನಿಷ್ಠ ಏಳು ರೂ.ಗಳಿದ್ದರೆ ಲಾಭದಾಯಕ. ಸಧ್ಯ ಅವರ ಕಮರ್ಷಿಯಲ್ ಯೂನಿಟ್ ಬೆಲೆ 8 ರೂ. ಇರುವ ಹಿನ್ನೆಲೆಯಲ್ಲಿ ಯೂನಿಟ್ ಲೆಕ್ಕದಲ್ಲಿಯೇ ಸೋಲಾರ್ ಉತ್ಪಾದಿತ ಯೂನಿಟ್‌ಗಳನ್ನು ಕಳೆದು ಬಿಲ್ ಮಾಡುವುದರಿಂದ ಒಂದರ್ಥದಲ್ಲಿ ಯೂನಿಟ್‌ಗೆ 8 ರೂ. ಕೊಟ್ಟಂತೆಯೇ ಆಗುತ್ತದೆ. ಸದ್ಯಕ್ಕೆ ಈ ರೀತಿಯ ಲಾಭವೇ ಹೆಚ್ಚು ಗಣ್ಯ. ನವೆಂಬರ್‌ನಿಂದ ಸೋಲಾರ್ ವಿದ್ಯುತ್ ಉತ್ಪಾದನೆಗೊಳಗಾಗುತ್ತಿದ್ದು, ಈ ಮೂರು ತಿಂಗಳಲ್ಲಿ ಒಂದೂವರೆ ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿದೆ.
ಗಿರೀಶ್ ಹೇಳುವುದೇ ಬೇರೆ, ನಮ್ಮ ರೈಸ್‌ಮಿಲ್ ಉದ್ಯಮದಿಂದ ಅತ್ಯಂತ ದೊಡ್ಡ ಮೊತ್ತದಲ್ಲಿ ಇಂಗಾಲದ ಡೈ ಆಕ್ಸೆ„ಡ್ ಉತ್ಪಾದನೆಯಾಗುತ್ತದೆ. ಇದು ಪರಿಸರಕ್ಕೆ ಪೂರಕ ಅಲ್ಲ. ಆದರೆ ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆಯಿಂದ ರಾಯಚೂರಿನಲ್ಲಿ ಕಲ್ಲಿದ್ದಲು ಉರಿಸುವುದರಲ್ಲೋ, ಕೈಗಾದ ಅಣು ವಿದ್ಯುತ್‌ನ ಕಿರಣವನ್ನೋ, ಕೊನೆಗೆ ಲಿಂಗನಮಕ್ಕಿಯಲ್ಲಿ ನೀರನ್ನೋ ನಾವು ಉಳಿಸಿದಂತಾಗಿದೆ. ಆ ಸಂತೋಷ ತೂಕಕ್ಕೆ ಹಾಕಲಾಗದಂತದು. ರೈಸ್ ಮಿಲ್‌ಗಳಲ್ಲಿ ಅತಿ ಹೆಚ್ಚಿನ ರೂಫ್ ಟಾಪ್ ಸಿಗುತ್ತದೆ. ಇದೇ ವೇಳೆ ಮಿಲ್‌ನ ಧೂಳು ಪ್ಯಾನೆಲ್‌ಗಳ ಉತ್ಪಾದನಾ ಸಾಮರ್ಥ್ಯದ ಮೇಲೆ ಪೊರೆ ಎಳೆಯುತ್ತದೆ. ಈ ಕಾರಣ ಗಿರೀಶ್ ದಿನಕ್ಕೆ ಒಂದು ಬಾರಿ ಪ್ಯಾನೆಲ್ ಸ್ವತ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಪ್ಯಾನೆಲ್ ಸ್ವತ್ಛಗೊಳಿಸಲು ಯಂತ್ರಚಾಲಿತ ಗಾಳಿ ಊದುವ ತಂತ್ರಜಾnನ ಅಳವಡಿಸಿಕೊಳ್ಳುವ ಚಿಂತನೆಯಲ್ಲಿದ್ದಾರೆ.
ರಾಜ್ಯ ಸರ್ಕಾರ ರೈತರು, ಗ್ರಾಮೀಣ ಉದ್ಯಮಗಳು, ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಪರ ಇಲ್ಲ. ರಾಜಕಾರಣಿಗಳು ಬೇರೆ ಬೇರೆ ವೇಷದಲ್ಲಿ ಸೋಲಾರ್ ಪಾರ್ಕ್‌ನಲ್ಲಿ ಮುಂದಿನ 25 ವರ್ಷ 12 ರೂ. ಯೂನಿಟ್ ಬೆಲೆಯ ವಿದ್ಯುತ್ ಉತ್ಪಾದನೆಗೆ ಮುಂದಾಗುವಂತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗುಜರಾತ್‌ನಲ್ಲಿ ಎಕರೆಗೆ 2 ಲಕ್ಷ ರೂ. ನೀಡಿ ಒಂದೆಡೆ ವಿದ್ಯುತ್ ಉತ್ಪಾದನೆಗೆ ಖಾಸಗಿಯವರು ಮುಂದಾಗುವ ಮಾದರಿ ರೂಪಿಸಲಾಗಿದೆ. ಕರ್ನಾಟಕದಲ್ಲಿ ವಿದ್ಯುತ್ ಕೊರತೆಯನ್ನು ನೀಗಿಸಲು ಇಂತಹ ಕ್ರಮಕ್ಕೆ ಮುಂದಾಗಬೇಕು. ಈ ನಡುವೆ ಎಸ್ಕಾಂಗಳಲ್ಲಿ ವಿದ್ಯುತ್ ಒಪ್ಪಂದಗಳಿಗೆ ದೊಡ್ಡ ಮೊತ್ತದ ಲಂಚವನ್ನೇ ವಸೂಲಿ ಮಾಡಲಾಗುತ್ತಿದೆಯಂತೆ. ವಿದ್ಯುತ್ ಒಪ್ಪಂದದ ನಂತರ ಮೂರು ತಿಂಗಳಲ್ಲಿ ಉತ್ಪಾದನೆ ಚಾಲ್ತಿಯಾಗಿ ಗ್ರಿಡ್‌ಗೆ ಸಂಪರ್ಕಿಸುವ ಕೆಲಸ ಆಗದಿದ್ದರೆ ಒಪ್ಪಂದ ರದ್ದಾಗುತ್ತದೆ. ಈ ನಿಯಮವನ್ನು ಬಳಸಿಕೊಂಡೇ ವಿದ್ಯುತ್ ವಿತರಣ ಕಂಪನಿ ಲಂಚದ ಗಾಳ ಹಾಕುತ್ತದೆ.
ಸುಪ್ರೀಮ್ ರೈಸ್ ಮಿಲ್‌ನಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಆರಂಭವಾಗಿ ಮೂರು ತಿಂಗಳವರೆಗೆ ಗ್ರಿಡ್‌ಗೆ ಸೇರ್ಪಡೆ ಮಾಡುವ ವ್ಯವಸ್ಥೆ ವಿಳಂಬವಾದುದರಿಂದ ಆದ ನಷ್ಟ ಕನಿಷ್ಠ 10 ಲಕ್ಷ ರೂ. ಯಾರಿಗೇಳ್ಳೋಣ ನಮ್ ಪ್ರಾಬ್ಲಿಮ್ಮು?
ಸುಪ್ರೀಮ್‌ನ ಮಂಜೂರು ಪಡೆದ ವಿದ್ಯುತ್ ಲೋಡ್ ಸಾವಿರ ಕಿ.ವ್ಯಾ. ಇನ್ನೂ 600 ಕಿ.ವ್ಯಾ ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಅವಕಾಶವಿದೆ ಎಂದುಕೊಂಡರೆ ತಪ್ಪಾದೀತು. ಸ್ಥಳವಿದೆ, ರೂಫ್ ಟಾಪ್ ಇದೆ. ಅಷ್ಟೇಕೆ, ಹಾಕುವ ಉತ್ಸಾಹವೂ ಗಿರೀಶ್‌ರಲ್ಲಿದೆ. ಆದರೆ ಇಲ್ಲಿನ 11 ಕೆ ವಿದ್ಯುತ್ ಸಂಪರ್ಕ ಚಾಲದ ಟ್ರಾನ್ಸ್‌ಫಾರ¾ರ್ ತಾಕತ್ತೇ ಒಂದು ಮೆವ್ಯಾ. ಹೆಚ್ಚೆಂದರೆ ಇನ್ನೊಂದು ನೂರು ಕಿ.ವ್ಯಾ ಹೆಚ್ಚಿಸಿದರೆ ಅಮ್ಮಮ್ಮಾ! ವಿದ್ಯುತ್ ಕೊರತೆಗೆ ಅಸಲಿಯತ್ತಾದ ಉತ್ತರ ಕಂಡುಕೊಳ್ಳಲು ಸರ್ಕಾರ ಮುಂದಾದರೆ ಮಾತ್ರ ಬೆಳಕು….
ಮಾಹಿತಿಗೆ: 9845527457
– ಗುರು ಸಾಗರ