ಬಾಗಲಕೋಟೆ: ವೃದ್ಧನೊಬ್ಬ ನುಂಗಿದ್ದ 187 ನಾಣ್ಯಗಳನ್ನು ನಗರದ ಶ್ರೀ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.
Advertisement
ಲಿಂಗಸುಗೂರು ತಾಲೂಕಿನ ದ್ಯಾಮಪ್ಪ ಹರಿಜನ (58) ಎಂಬವರು 5 ರೂ. ಮುಖಬೆಲೆಯ 56 ನಾಣ್ಯ, 2 ರೂ. ಮುಖಬೆಲೆಯ 51, 1 ರೂ. ಮುಖಬೆಲೆಯ 80 ನಾಣ್ಯಗಳು ಸಹಿತ ಒಟ್ಟು 187 ನಾಣ್ಯಗಳನ್ನು ನುಂಗಿದ್ದರು. ಅಸ್ವಸ್ಥಗೊಂಡಿದ್ದ ಅವರನ್ನು ಕುಟುಂಬದ ಸದಸ್ಯರು ಈಚೆಗೆ ಬಿವಿವಿ ಸಂಘದ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಕರೆ ತಂದಿದ್ದರು.
ವೈದ್ಯರು ಎಕ್ಸರೇ ಮಾಡಿ ಪರಿಶೀಲಿಸಿದಾಗ ಹೊಟ್ಟೆಯಲ್ಲಿ ನಾಣ್ಯಗಳಿರುವುದು ಕಂಡು ಬಂದಿತ್ತು. ಬಳಿಕ ತಜ್ಞ ವೈದ್ಯರ ತಂಡ ಎಂಡೋಸ್ಕೋಪಿ ಮೂಲಕ ಎಲ್ಲ ನಾಣ್ಯಗಳನ್ನೂ ಹೊರ ತೆಗೆದಿದೆ.