Advertisement

ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ: ಶಕುಂತಳಾ ಟಿ. ಶೆಟ್ಟಿ

03:05 PM Mar 16, 2017 | Team Udayavani |

ಕಾವು : ಕಿಂಡಿ ಅಣೆಕಟ್ಟು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಅಭಿವೃದ್ಧಿಗೆ ಜನ ಮುಕ್ತ ಮನಸ್ಸಿನಿಂದ ಸಹಕಾರ ನೀಡಬೇಕು. ರಾಜ್ಯ ಸರಕಾರದ ಯೋಜನೆಗಳು ಜನಪರವಾಗಿವೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ನುಡಿದರು.

Advertisement

ಅವರು ಮಾಟ್ನೂರು ಗ್ರಾಮದ ಸಸ್ಪೆಟ್ಟಿಯಲ್ಲಿ ಹಾದು ಹೋಗುವ ಸೀರೆ ಹೊಳೆಗೆ 50 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಪ್ರತಿ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸ್ಥಳೀಯರು ಮುತುವರ್ಜಿ ವಹಿಸಬೇಕು. ಯಾವುದೇ ಯೋಜನೆಗೆ ಅನುದಾನವನ್ನು ಜನಪ್ರತಿನಿಧಿಧಿಗಳು ತಂದರೆ ಅದರ ಸದುಪಯೋಗ ಆಗುವುದಕ್ಕೆ ಜನರು ಶ್ರಮಿಸಬೇಕು ಎಂದರು.

ಎಪಿಎಂಸಿ ಸದಸ್ಯ ಮಹೇಶ್‌ ರೈ ಅಂಕೋತ್ತಿಮಾರ್‌, ಅರಿಯಡ್ಕ ಗ್ರಾಮ ಪಂಚಾಯತ್‌  ಸದಸ್ಯ ರವೀಂದ್ರ ಪೂಜಾರಿ ಮಂಜಕೊಟ್ಯ, ಮಹಾಲಿಂಗ ನಾಯ್ಕ, ಲೋಹಿತ್‌ ಕೆರೆಮಾರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಫಝಾಲ್‌ ರಹಿಮಾನ್‌, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್‌ ಆಳ್ವ, ಸಾರ್ಥಕ್‌ ರೈ ಅರಿಯಡ್ಕ, ಪಂಚಾಯತ್‌ ಮಾಜಿ ಸದಸ್ಯರಾದ ಮಹಮ್ಮದ್‌ ಕುಂಞಿ, ಗೋಪಾಲ ಪಾಟಾಳಿ, ಪ್ರಮುಖರಾದ ಚಿದಾನಂದ ಆಚಾರ್ಯ, ರೋಷನ್‌ ರೈ ಬನ್ನೂರು, ಎಡಬ್ಲ್ಯುಇ ಸಹಾಯಕ ಕಾರ್ಯನಿರ್ವಣಾಧಿಶಧಿಕಾರಿ ಷಣ್ಮುಗಪ್ಪ, ಸಹಾಯಕ ಎಂಜಿನಿಯರ್‌ ಆನಂದ ಬಂಜನ್‌, ಅರಿಯಡ್ಕ ಗ್ರಾಮ ಪಂಚಾಯತ್‌ ಕಾರ್ಯದರ್ಶಿ ಕೃಷ್ಣರಾಜ್‌, ಕಾಂಟ್ರಾಕ್ಟರ್‌ ಕುಂಞಿ ಪೆರ್ಲಂಪಾಡಿ ಮೊದಲಾದ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next