Advertisement

ಪರಿಸರಕ್ಕೆ ಧಕ್ಕೆ ತರುವ ಅಭಿವೃದ್ಧಿ ಮಾರಕ

12:58 PM May 07, 2017 | Team Udayavani |

ದಾವಣಗೆರೆ: ಪರಿಸರಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯ ಮನುಷ್ಯನ ಅಭಿವೃದ್ಧಿಗೆ ಪೂರಕವಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಅಭಿಪ್ರಾಯಪಟ್ಟರು. 

Advertisement

ಶನಿವಾರ ಯುಬಿಡಿಟಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ತತ್ವ ತರ್ಕದಿಂದ ಹಮ್ಮಿಕೊಂಡಿದ್ದ ರೈತರ ಹೋರಾಟ ಮತ್ತು ವಾತಾವರಣ ಬದಲಾವಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರಕ್ಕೆ ಧಕ್ಕೆ ಮಾಡಿ ಬಹುಮಹಡಿ ಕಟ್ಟಡ ಕಟ್ಟುವುದು ಅಭಿವೃದ್ಧಿಯಲ್ಲ.

ಮನುಷ್ಯನಿಗೆ ಶುದ್ಧ ಆಹಾರ, ನೀರು, ಗಾಳಿ ಒದಗಿಸುವುದೇ ನಿಜವಾದ ಅಭಿವೃದ್ಧಿ ಎಂದರು. ನಾಗರಿಕತೆ ಹೆಸರಲ್ಲಿ ನಾವು ಮಾಡುತ್ತಿರುವ ನಗರೀಕರಣದಿಂದ ಪರಿಸರಕ್ಕೆ ಸಾಕಷ್ಟು ಧಕ್ಕೆಯಾಗುತ್ತಿದೆ. ಮರ ಕಡಿದು ಕಾಂಕೀÅಟ್‌ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ, ಅಲ್ಲಿ ಮತ್ತೆ ಸಸಿ ನೆಡುವ ಕೆಲಸ ಮಾಡುತ್ತಿಲ್ಲ.

ಇದರಿಂದ ಕುಡಿಯುವ ನೀರಿನ ಸಮಸ್ಯೆ, ತಾಪಮಾನ ಏರಿಕೆ ಕಂಡು ಬರುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿಮನುಷ್ಯ ಬದುಕುವುದು ಕಷ್ಟವಾಗಲಿದೆ.  ಈ ಹಂತದಲ್ಲೇ ನಾವು ಪರಿಸರ ಬೆಳೆಸಲುಮುಂದಾಗಬೇಕು ಎಂದು ಅವರು ಹೇಳಿದರು. 

ಬರುವ ಮಳೆಗಾಲದಿಂದಲೇ ಪ್ರತಿಯೊಬ್ಬರೂ ಗಿಡ ನೆಡುವ ಕೆಲಸ ಆರಂಭಿಸಬೇಕು. ಶಾಲಾ-ಕಾಲೇಜು ಹಾಗೂ ಮನೆಗಳ ಸುತ್ತಮುತ್ತ ಗಿಡ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು. ಪಾರಂಪರಿಕ ಕೃಷಿ ಮಾಡಿಕೊಂಡಿದ್ದ ರೈತರು ಸಾಲಬಾಧೆಯಿಂದ ಮುಕ್ತರಾಗಬೇಕು. 

Advertisement

ಆದರೆ, ಆಹಾರ ಉತ್ಪಾದನೆ ಹೆಚ್ಚಿಸಬೇಕೆಂಬ ಹಠಕ್ಕೆ ಬಿದ್ದ ಸರ್ಕಾರಗಳು ರೈತರಿಗೆ ಆಮಿಷ ಒಡ್ಡಿ ಹಸಿರು ಕ್ರಾಂತಿ ಎಂದು ರಾಸಾಯನಿಕ ಕೀಟನಾಶಕ, ರಸಗೊಬ್ಬರ ಬಳಕೆ ಹೆಚ್ಚಿಸಲು ಕಾರಣರಾದವು. ಇದರಿಂದ ಕೃಷಿಭೂಮಿ ಫಲವತ್ತತೆ ಕಳೆದುಕೊಂಡಿತು. ರೈತರು ಇಂದು ಸಾಲಗಾರರಾಗಲು ಸರ್ಕಾರಗಳೇ ನೇರ ಹೊಣೆಯಾಗಿವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ಡಿ.ಎಸ್‌. ಪ್ರಕಾಶ್‌, ಮಂಡ್ಯದ ರೈತಪರ ಹೋರಾಟಗಾರ್ತಿ ಸುನಂದಾ ಜಯರಾಂ, ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ| ಕೆ. ಕೃಷ್ಣೇಗೌಡ, ತತ್ವ ತರ್ಕ ಸಂಸ್ಥೆಯ ಸಂಸ್ಥಾಪಕ ಸಂಘಟನಾ ಕಾರ್ಯದರ್ಶಿ ಎ.ಎಚ್‌. ಸಾಗರ್‌, ಕೆ.ಬೋರಯ್ಯ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next