Advertisement
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಅವರು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತನಾಡಿದರೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಮುಖ್ಯಮಂತ್ರಿಯವರ ನಿವಾಸಕ್ಕೆ ಆಗಮಿಸಿ ಚರ್ಚಿಸಿದರು. ಈ ಮಧ್ಯೆ, ರಮೇಶ್ ಜಾರಕಿಹೊಳಿ ಅವರು ಯಡಿಯೂರಪ್ಪ ಅವರನ್ನು ಸಂಪರ್ಕಿಸಿ ಕೊಟ್ಟ ಮಾತಿನಂತೆ ಹನ್ನೊಂದು ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
Related Articles
Advertisement
ಪುನಾರಚನೆ ಆಗತ್ತಾ? ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಅವರಿಗೆ ಕೆಲವೊಂದು ಸಲಹೆ ನೀಡಿದ್ದಾರೆ. ಇದೇ ಕಾರಣಕ್ಕೆ ನಾನು ಕೆಲವು ನಾಯಕರ ಜತೆ ಚರ್ಚಿಸಿ ಮತ್ತೂಮ್ಮೆ ಅಮಿತ್ ಶಾ ಅವರೊಂದಿಗೂ ಮಾತನಾಡಿ ಅಂತಿಮಗೊಳಿಸುತ್ತೇನೆಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಅವರಿಗೆ ನೀಡಿರುವ ಸಲಹೆಯಾ ದರೂ ಏನು ಎಂಬುದೇ ಕುತೂಹಲ ಮೂಡಿಸಿದೆ. ಸಂಪುಟ ವಿಸ್ತರಣೆ ಜತೆಗೆ ಸಣ್ಣ ಪ್ರಮಾಣದ ಪುನಾರಚನೆಯೂ ನಡೆಯುವುದೇ ಎಂಬ ಅನುಮಾನವೂ ಉಂಟಾಗಿದೆ.
ಪುನಾರಚನೆ ಆಗಿದ್ದೇ ಆದರೆ ಯಾರನ್ನು ಕೈ ಬಿಡಲಾಗುವುದು ಎಂಬ ಆತಂಕವೂ ಸಚಿವರಿಗಿದೆ. ಸಿ.ಸಿ.ಪಾಟೀಲ್, ಪ್ರಭು ಚೌವ್ಹಾಣ್ ಸೇರಿ ಕೆಲವರನ್ನು ಕೈ ಬಿಡಲಾಗುವುದು ಎಂಬ ವದಂತಿಯೂ ಹಬ್ಬಿದೆ. ಇದರ ನಡುವೆಯೇ ಶನಿವಾರ ಸಚಿವ ಸಿ.ಸಿ.ಪಾಟೀಲ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಯಡಿಯೂರಪ್ಪ ಅವರು ಆಪ್ತರ ಬಳಿ ಹೇಳಿರುವ ಪ್ರಕಾರ ಬಹುತೇಕ ಸೋಮವಾರವೇ ಸಂಪುಟ ವಿಸ್ತರಣೆಯಾಗಬಹುದು ಎಂದು ಬಿಜೆಪಿಯ ನಾಯಕರು ಹೇಳುತ್ತಾರೆ.
ನನಗೆ ಪ್ರಬಲ ಖಾತೆ ದೊರೆ ಯುವ ನಿರೀಕ್ಷೆಯಿದೆ. ನಗರಾಭಿವೃದ್ಧಿ ಖಾತೆ ಸಿಕ್ಕರೆ ಸಂತೋಷ. ನಗರಾಭಿವೃದ್ಧಿ ಖಾತೆಯಲ್ಲಿ ಕೆಲಸ ಮಾಡಬೇಕೆಂಬ ಆಸೆಯಿದೆ. ಮುಖ್ಯಮಂತ್ರಿಯವರ ತೀರ್ಮಾನಕ್ಕೆ ಬಿಟ್ಟಿದ್ದು.-ಬೈರತಿ ಬಸವರಾಜ್, ಸಚಿವಾಕಾಂಕ್ಷಿ ಮುಖ್ಯಮಂತ್ರಿ ಯವರು ನನ್ನನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆಯಿದೆ. ಹೀಗಾಗಿ, ಸಂಪುಟ ವಿಸ್ತರಣೆ ಸಂಬಂಧ ಬೇರೆ ವಿಚಾರಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧ.
-ಮಹೇಶ್ ಕುಮಟಳ್ಳಿ, ಸಚಿವಾಕಾಂಕ್ಷಿ