ಮಾಗಡಿ: ಕಳೆದ 40 ವರ್ಷಗಳಿಂದಲೂ ಪುರಸಭೆ ಮಳಿಗೆಗಳನ್ನು ಹರಾಜು ಮಾಡಿಲ್ಲ. ಶಿಥಿಲಗೊಂಡಿರುವ ಮಳಿಗೆಗಳನ್ನು ನೆಲಕ್ಕು ರುಳಿಸಿ ನೂತನ ಮಳಿಗೆ ನಿರ್ಮಿಸುವ ಪ್ರಕ್ರಿಯೆ ಆರಂಭಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ, ಆದೇಶಕ್ಕೆ ಕಿಮ್ಮತ್ತಿಲ್ಲದಂತಾ ಗಿದೆ ಎಂದು ಪುರಸಭೆ ಸದಸ್ಯ ರಂಗ ಹನುಮಯ್ಯ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾñ ನಾಡಿ, ಪಟ್ಟಣದಲ್ಲಿ ಸುಮಾರು ಪುರಸಭೆಗೆ ಸೇರಿದ 130 ಅಂಗಡಿ ಮಳಿಗೆಗಳಿದ್ದು, 100 ಐಡಿಎಸ್‌ಎಂಟಿ ನಿರ್ಮಿಸಿದೆ. ಬಹುತೇಕ ಅಂಗಡಿಗೆ ಮಳಿಗೆಗಳು 10ನೇ ಹಣಕಾಸು ಯೋಜನೆಯಡಿ ನಿರ್ಮಿಸಲಿರುವ ಮಳಿಗೆ ಗಳು ಶಿಥಿಲಗೊಂಡಿದ್ದು, ನೂತನ ಮಳಿಗೆ ನಿರ್ಮಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಹಾಗೂ ಲೋಕೋಪ ಯೋಗಿ ಇಲಾಖೆ ಕಟ್ಟಡ ಸುರಕ್ಷತೆ ಪರೀಕ್ಷೆ ಇಂಜಿನಿಯರ್ ಮಳಿಗೆ ಪರಿಶೀಲನೆ ಮಾಡಿ, ಮಳಿಗೆ ಕೆಡವಲು ಆದೇಶ ನೀಡಿದ್ದರು. ಆದರೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. 40 ವರ್ಷಗಳ ಹಿಂದೆ ಹರಾಜಿ ನಲ್ಲಿ, ಉದಾಹರಣೆಗೆ 500 ರೂ.ಗಳಿಗೆ ಮಳಿಗೆ ಪಡೆದಿರುವ ಮಾಲಿಕರು, ಬೇರೆಯವರಿಗೆ 2 ಸಾವಿರಕ್ಕೆ ಲೀಸ್ ಕೊಟ್ಟಿದ್ದಾರೆ.
ಲೀಸ್ ಪಡೆದ ವರು 10 ಸಾವಿರಕ್ಕೆ ಸಬ್ ಲೀಸ್ ಕೊಟ್ಟಿದ್ದಾರೆ. ಅಂಗಡಿ ಮಾಲಿಕರಿಂದ ಹಗಲು ದರೋಡೆ ನಡೆದಿದೆ. ಪುರಸಭೆ ಕಟ್ಟುನಿಟ್ಟಿನ ಕ್ರಮ ಜರುಗಿ ಸಿದ್ದರೆ ಅದಾಯ ಹೆಚ್ಚಾಗುತ್ತಿತ್ತು. ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಪುರಸಭೆ ಜಾಣ ಕುರುಡು ಪ್ರದರ್ಶಿಸಿದೆ. ಪುರ ಸಭೆಗೆ ಆದಾಯದಲ್ಲೂ ಖೋತಾ ಆಗಿದೆ. ಪೌರ ಕಾರ್ಮಿಕರಿಗೆ ಸಂಬಳ ನೀಡಲಾಗುತ್ತಿಲ್ಲ. ನೂತನ ಮಳಿಗೆ ನಿರ್ಮಿಸಿ ಹರಾಜು ಪ್ರಕ್ರಿಯೆ ನಡೆಸಿದ್ದರೆ ಕನಿಷ್ಠ ಪುರಸಭೆಗೆ 15 ರಿಂದ 20 ಲಕ್ಷ ರೂ. ತಿಂಗಳಿಗೆ ಆದಾಯ ನಿರೀಕ್ಷಿಸ ಬಹುದಿತ್ತು ಎಂದು ರಂಗಹನುಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪುರಸಭೆ ದಿವಾಳಿ: ಪುರಸಭೆ ನೂತನ ಅಂಗಡಿ ಮಳಿಗೆ ನಿರ್ಮಿಸಿ, ಹರಾಜು ಪ್ರಕ್ರಿಯೆ ನಡೆ ಸಿಲ್ಲ. ಹೀಗಾಗಿ ಪುರಸಭೆ ದಿವಾಳಿಯಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪುರಸಭೆಗೆ ಬರಬೇಕಾದ ಹಣ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ನೂತನ ಮಳಿಗೆ ನಿರ್ಮಾಣಕ್ಕೆಕ 85 ಲಕ್ಷ ರೂ. ಮೀಸಲಿಟ್ಟಿದ್ದಾರೆ. ಐಡಿಎಸ್‌ಎಂಟಿಯ 210 ನಿವೇಶನ ಗಳಿದ್ದು, ಹರಾಜು ಹಾಕಿದ್ದರೆ 50 ಕೋಟಿ ರೂ. ಹೆಚ್ಚು ಆದಾಯ ಬರುತ್ತಿತ್ತು. ಇನ್ನಾದರೂ ಪುರಸಭೆ ಎಚ್ಚೆತ್ತುಕೊಂಡು ಶಿಥಿಲಗೊಂಡಿರುವ ಮಳಿಗೆಗಳ ಮರು ನಿರ್ಮಿಸಿ, ಹರಾಜ ಪ್ರಕ್ರಿಯೆ ನಡೆಸುವಂತೆ ಸದಸ್ಯ ರಂಗಹನುಮಯ್ಯ ಆಗ್ರಹಿಸಿದ್ದಾರೆ.