ಧಾರವಾಡ: “ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಪಕ್ಷದಿಂದ ಪ್ರಯತ್ನ ನಡೆದಿದೆ. ಅದನ್ನು ಜಮೀರ್ ಅಹ್ಮದ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
“ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೆ ರುಂಡ ಕತ್ತರಿಸಿಕೊಳ್ಳುತ್ತೇನೆ’ ಎಂಬ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿ, “ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆಲ್ಲುವುದು, ಬಿಡುವುದು ಮತದಾರರ ಕೈಯಲ್ಲಿದೆ. ಸೋಲು- ಗೆಲುವು ಮುಖ್ಯವೇ ಹೊರತು ರುಂಡ ಕತ್ತರಿಸಿಕೊಳ್ಳುವುದು ಮುಖ್ಯವಲ್ಲ.
ಆದರೆ, ಆ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ಬಲಿಷ್ಠವಾಗಿ ಬೆಳೆಸುವ ಪ್ರಯತ್ನವನ್ನಂತೂ ಮಾಡುತ್ತೇವೆ’ ಎಂದರು. ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಬಿಜೆಪಿಯ ಎರಡನೇ ಹಂತದ ನಾಯಕರು ಜೆಡಿಎಸ್ ಸೇರಲು ಒಲವು ತೋರಿದ್ದು, ಅವರನ್ನು ಪಕ್ಷಕ್ಕೆ ಸೇರಿಸಿಕೊ ಳ್ಳುವ ಚಿಂತನೆ ಕೂಡ ನಡೆದಿದೆ ಎಂದರು.
ಫಸಲ್ ಬಿಮಾ ವಿರುದ್ಧ ಹೋರಾಟ: ಬರಗಾಲ ಘೋಷಣೆಗೆ ಕೇಂದ್ರ ಸರ್ಕಾರ ವಿಧಿಸಿರುವ ಕಠಿಣ ನಿಯಮಗಳ ವಿರುದ್ಧ
ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ನ್ಯೂನತೆಗಳ ವಿರುದಟಛಿ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.