ಒಪ್ಪಿಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Advertisement
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಚುನಾವಣೆಯ ಸೋಲಿನಿಂದ ಎದೆಗುಂದಿಲ್ಲ. ಆದರೆ, ಮುಖ್ಯಮಂತ್ರಿಯಾಗಿ ಇಷ್ಟೆಲ್ಲಾ ಕೆಲಸ ಮಾಡಿದರೂ ಜನತೆ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬ ನೋವಿದೆ ಎಂದರು. ಕಾಂಗ್ರೆಸ್‌ನಲ್ಲಿ ಅತೃಪ್ತರು ಯಾರೂ ಇಲ್ಲ. ಸಚಿವ ಸಂಪುಟ ವಿಸ್ತರಣೆ ನಂತರ ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ಸುಧಾಕರ್, ಎಂ.ಟಿ.ಬಿ.ನಾಗರಾಜ್, ಸಂಗಮೇಶ್, ಈಶ್ವರ ಖಂಡ್ರೆ, ಎಸ್.ಆರ್.ಪಾಟೀಲ್ ಸೇರಿದಂತೆ ಎಲ್ಲರ ಜೊತೆಯೂ ಮಾತನಾಡಿದ್ದೇನೆ. ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಹಣ, ಅಧಿಕಾರ ಕೊಡುತ್ತೇವೆ ಎಂದು ಬಿಜೆಪಿಯವರು ನಮ್ಮ ಶಾಸಕರಿಗೆ ದೂರವಾಣಿ ಕರೆ ಮಾಡಿ ಸೆಳೆಯಲು ಪ್ರಯತ್ನ ಮಾಡಿದ್ದಾರೆ. ಅವರು ಆಮಿಷ ಒಡ್ಡಿದ್ದನ್ನು ಬಿ.ಸಿ.ಪಾಟೀಲ್, ರಹೀಂಖಾನ್ ರೆಕಾರ್ಡ್
ಮಾಡಿಕೊಂಡಿದ್ದಾರೆ. ಜನಾರ್ದನರೆಡ್ಡಿ, ಶ್ರೀರಾಮುಲು ಬಹಳ ಪ್ರಯತ್ನ ಮಾಡಿದ್ದರು. ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಮ್ಮ ಶಾಸಕರು ಉಳಿದುಕೊಂಡಿದ್ದಾಗ ಜನಾರ್ದನ ರೆಡ್ಡಿ ಕಡೆಯವರು ಅಲ್ಲಿಗೂ ಬಂದಿದ್ದರು, ಅವರು ಎಷ್ಟೇ ಆಮಿಷ ಒಡ್ಡಿದರು ನಮ್ಮ ಶಾಸಕರ್ಯಾರು ಬಿಜೆಪಿ ಜೊತೆಗೆ ಹೋಗಲ್ಲ ಎಂದರು.
ತೊಡಿಸಿ ಗೌರವಿಸಲು ಬಂದಾಗ, “ಇದೆಲ್ಲಾ ಯಾಕಪ್ಪ, ಜನರೇ ಟೋಪಿ ಹಾಕಿದ್ದಾರೆ’ ಎಂದು ಪರೋಕ್ಷವಾಗಿ ಚುನಾವಣೆ ಸೋಲಿನ ಕಹಿಯನ್ನು ಹೊರ ಹಾಕಿದರು. ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಏರ್ಪಡಿಸಿದ್ದ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೂತನ ಶಾಸಕ ಡಾ.ಯತೀಂದ್ರ ಅವರನ್ನು ಸನ್ಮಾನಿಸಲಾಯಿತು.