Advertisement

ಸ್ಮಾರ್ಟ್‌ ಫೋನ್‌ ಕಾಲದಲ್ಲೂ ಫೀಚರ್‌ ಫೋನ್‌ಗಳಿಗೆ ಕುಸಿಯದ ಬೇಡಿಕೆ

08:23 AM Nov 02, 2019 | Sriram |

ಮುಂಬಯಿ: ಮೊಬೈಲ್‌ ಫೋನ್‌ ಯುಗ ಆರಂಭದ ಕಾಲದಲ್ಲಿ ಸುದ್ದಿ ಮಾಡಿದ್ದು ಫೀಚರ್‌ ಫೋನ್‌ಗಳು. ಬಟನ್‌ಗಳಿರುವ ಈ ಫೋನ್‌ಗಳನ್ನು ಹೊಂದುವುದೇ ದೊಡ್ಡ ವಿಚಾರವಾಗಿತ್ತು. ಮೊಬೈಲ್‌ಗ‌ೂ ಇಂಟರ್ನೆಟ್‌ ಬಂದ ಬಳಿಕ ಫೀಚರ್‌ ಫೋನ್‌ ಹಿಂದೆ ಬೀಳತೊಡಗಿದ್ದು, ಈ ಜಾಗವನ್ನು ಟಚ್‌ ಇರುವ ಸ್ಮಾರ್ಟ್‌ಫೋನ್‌ಗಳು ಆಕ್ರಮಿಸಿಕೊಂಡವರು. ಆದರೂ ಭಾರತದಂತಹ ಮಾರುಕಟ್ಟೆಗಳಲ್ಲಿ ಫೀಚರ್‌ ಫೋನ್‌ಗಳ ಬೇಡಿಕೆ ಕಡಿಮೆಯಾಗಿಲ್ಲ.

Advertisement

ಫೀಚರ್‌ ಫೋನ್‌ಗಳಿಗೇಕೆ ಬೇಡಿಕೆ?
ಫೀಚರ್‌ ಫೋನ್‌ಗಳು ಹೆಚ್ಚು ಕಾಲ ಬ್ಯಾಟರಿ ಬಾಳಿಕೆಯನ್ನು ಹೊಂದಿರುತ್ತದೆ. ಇದರಲ್ಲಿ ಟಚ್‌, ವೀಡಿಯೋ ನೋಡುವ ವ್ಯವಸ್ಥೆಗಳು ಸಾಮಾನ್ಯವಾಗಿ ಇಲ್ಲವಾದ್ದರಿಂದ ಬ್ಯಾಟರಿ ಬೇಗನೆ ಮುಗಿದು ಹೋಗುವುದು ಕಡಿಮೆ. ಕಡಿಮೆ ರೇಂಜ್‌ ಇದ್ದಲ್ಲಿಯೂ ಕಾರ್ಯ ನಿರ್ವಹಿಸುತ್ತವೆ. ಕಿಸೆಯಲ್ಲಿ ಇಟ್ಟುಕೊಳ್ಳುವುದು ಸುಲಭ. ಗಟ್ಟಿಮುಟ್ಟಾಗಿದ್ದು ಬಾಳಿಕೆಯೂ ಹೆಚ್ಚು. ಕಡಿಮೆ ದರದಲ್ಲಿ ಲಭ್ಯವಾಗುತ್ತದೆ. ನಿರ್ದಿಷ್ಟ ವಯಸ್ಸಿನವರಿಗೆ ಇದು ಬಳಕೆಗೆ ಸುಲಭ. ಕೇವಲ ಕರೆ, ಮೆಸೇಜ್‌ ಮಾಡುತ್ತೇವೆ ಎನ್ನುವವರಿಗೂ ಇದುವೇ ಬೆಸ್ಟ್‌. ಇದರೊಂದಿಗೆ ಕಂಫ‌ರ್ಟ್‌ ಇದೆ, ಸ್ಮಾರ್ಟ್‌ ಫೋನ್‌ ಬಳಕೆ ಎಲ್ಲ ಗೊತ್ತಾಗಲ್ಲ ಎನ್ನುವ ಕಾರಣಕ್ಕೆ ಹಲವರು ಫೀಚರ್‌ ಫೋನ್‌ಗಳನ್ನು ಬಳಸುತ್ತಿದ್ದಾರೆ.

ಸ್ಮಾರ್ಟ್‌ ಫೋನ್‌ಗಳಿಗೆ ಪೆಟ್ಟು
ಫೀಚರ್‌ ಫೋನ್‌ಗಳಿಂದ ಜನರು ಇನ್ನೂ ಸ್ಮಾರ್ಟ್‌ ಫೋನ್‌ಗಳತ್ತ ಹೊರಳುತ್ತಿಲ್ಲ. ಈ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಮಾರ್ಟ್‌ ಫೋನ್‌ ಮಾರಾಟವಾಗುತ್ತಿಲ್ಲ. ಸದ್ಯದ ಮಟ್ಟಿಗೆ ಭಾರತದಲ್ಲಿ ಸ್ಮಾರ್ಟ್‌ ಫೋನ್‌ಗಳ ಮಾರಾಟವೂ ಶೇ.2.3ರಷ್ಟು ಕಡಿಮೆಯಾಗಿದೆ.

4 ಕೋಟಿ ಫೋನ್‌ಗಳು
ಭಾರತದಲ್ಲಿ ಈಗಲೂ ಸುಮಾರು 4 ಕೋಟಿ ಫೀಚರ್‌ ಫೋನ್‌ಗಳಿವೆ ಎಂದು ಅಂದಾಜಿಸಲಾಗಿದೆ. ಎರಡನೇ ಫೋನ್‌ ಇಟ್ಟುಕೊಂಡವರಲ್ಲಿ ಹಲವರು ಫೀಚರ್‌ ಫೋನ್‌ ಇಟ್ಟುಕೊಂಡಿದ್ದಾರೆ. ಹಳ್ಳಿಗಳಲ್ಲಿ ಸರಿಯಾಗಿ ರೇಂಜ್‌ ಇಲ್ಲ ಎನ್ನುವ ಕಾರಣಕ್ಕೆ, ಬಳಕೆಗೆ ಸುಲಭ ಎನ್ನುವ ಕಾರಣಕ್ಕೆ ವೃದ್ಧರೂ ಫೀಚರ್‌ ಫೋನ್‌ ನೆಚ್ಚಿಕೊಂಡಿದ್ದಾರೆ.

ಫೀಚರ್‌ ಫೋನ್‌ಗಳಲ್ಲೂ ಹೊಸ ಫೀಚರ್
ಫೀಚರ್‌ ಫೋನ್‌ಗಳಾಗಿದ್ದರೂ ಅದರಲ್ಲೂ ವೀಡಿಯೋ, ವಾಟ್ಸ್‌ ಆ್ಯಪ್‌ ನೋಡುವಂತಹ ಅನುಕೂಲಗಳು ಈಗ ವಿದೆ. ಜಿಯೋ ಫೋನ್‌ 2, ನೋಕಿಯಾ 8110 ಇತ್ಯಾದಿ ಫೋನ್‌ಗಳಲ್ಲಿ ಈ ಸೌಲಭ್ಯಗಳಿವೆ. ಕೆಲವು ಜನರೂ ಇಂತಹ ಫೋನ್‌ಗಳನ್ನು ಖರೀದಿಸುತ್ತಾರೆ. ಅವರ ಬೇಡಿಕೆಗಳು ಕಡಿಮೆ ಇರುವುದರಿಂದ ಫೀಚರ್‌ ಫೋನ್‌ ನೆಚ್ಚಿಕೊಳ್ಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next