Advertisement

ಕಾರಂಜಾ ಸಂತ್ರಸ್ತರಿಂದ ಉಗ್ರ ಹೋರಾಟಕ್ಕೆ ನಿರ್ಧಾರ

11:54 AM Sep 21, 2018 | Team Udayavani |

ಬೀದರ: ಜಿಲ್ಲಾಧಿಕಾರಿಗಳ ಕಚೇರಿ ಎದುರು 43 ದಿನಗಳಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿರುವುದರಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಯಲಿದೆ.

Advertisement

ಇದರಿಂದ ಮುಂದಾಗುವ ಅನಾಹುತಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವೇ ಹೊಣೆಯಾಗಿತ್ತದೆ ಎಂದು ಕಾರಂಜಾ
ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚ್ಚಕನಳ್ಳಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತರು ಕಪ್ಪು ಬಟ್ಟೆ ಧರಿಸಿ ಧರಣಿಯಲ್ಲಿ ಭಾಗವಹಿಸುವರು. ಪಂಜಿನ ಮೇರವಣಿಗೆ ನಡೆಸುವರು. ಜನ ಪ್ರತಿನಿಧಿಗಳ ಮನೆ ಎದುರು ಅರೆಬೆತ್ತಲೆ ಮೆರವಣಿಗೆ, ಧರಣಿ ಸ್ಥಳದಲ್ಲಿ ಕೇಶ ಮುಂಡನ ಮಾಡಿಕೊಳ್ಳವುದು ಸೇರಿದಂತೆ ವಿವಿಧ ಮಾದರಿಯಲ್ಲಿ ಹೊರಾಟ ಮಾಡಲಾಗುವುದು. ಬೀದರ ನಗರದಲ್ಲಿ ರಸ್ತೆ ತಡೆ ಚಳವಳಿ, ರೈಲ್ವೆ ನಿಲ್ದಾಣದಲ್ಲಿ ರೈಲು ರೋಖೋ ಆಂದೋಲನ, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-65 ರಸ್ತೆ ತಡೆ ಚಳವಳಿ, ಜೈಲ್‌ ಭರೋ ಆಂದೋಲನ ಹಂತಹಂತವಾಗಿ ನಡೆಸಲಾಗುವುದು. ಹೋರಾಟದ
ಸಂದರ್ಭದಲ್ಲಿ ಯಾವುದೇ ಅಹಿತರಕ ಘಟನೆಗಳು ನಡೆದರೆ ಅದಕ್ಕೆ ನೇರವಾಗಿ ಸರ್ಕಾರವೆ ಹೊಣೆಯಾಗುತ್ತದೆ ಎಂದರು.

1972ರಲ್ಲಿ ಕೇವಲ 9 ಕೋಟಿ ವೆಚ್ಚದ ಕಾರಂಜಾ ಜಲಾಶಯ ಯೋಜನೆ ಇತ್ತು. ಆದರೆ, ಈ ವರೆಗೆ ಕೋಟ್ಯಂತರ ರೂಪಾಯಿ ಖರ್ಚಾಗಿದೆ. ಮುಳುಗಡೆಯಾದ ಬೀದರ ದಕ್ಷಿಣ ಭಾಗದ 14 ಹಳ್ಳಿಗಳು, ಹುಮನಾಬಾದ ತಾಲೂಕಿನ 8 ಹಳ್ಳಿಗಳು, ಭಾಲ್ಕಿ ತಾಲೂಕಿನ 6 ಹಳ್ಳಿಗಳ ಭೂಮಿ ಭಾಗಶಃ ಜಲಾವೃತವಾಗಿದ್ದು, ಈ ಜಲಾಶಯದಲ್ಲಿ 14,550 ಎಕರೆ ಭೂಮಿ ಅಲ್ಲದೆ ಹೆಚ್ಚುವರಿಯಾಗಿ 1200 ಎಕರೆ ಭೂಮಿ ಮುಳುಗಡೆ ಪ್ರದೇಶದಲ್ಲಿ ಸೇರಿರುತ್ತದೆ. ಭೂ ಸ್ವಾ ಧೀನ ಮಾಡಿಕೊಂಡ ಸರಕಾರ ಎಲ್ಲ ಸಂತ್ರಸ್ತ ರೈತರಿಗೆ ಸಮಾನವಾಗಿ ಪರಿಹಾರ ಧನ ನೀಡದೆ ತಾರತಮ್ಯ ಮಾಡಿ ಅನ್ಯಾಯ ಮಾಡಿದೆ. 28 ಹಳ್ಳಿಗಳ 14,550 ಎಕರೆ ಕೃಷಿ ಯೋಗ್ಯಭೂಮಿ ಮತ್ತು 8ರಿಂದ 9 ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿವೆ ಎಂದರು.

5000 ಕುಟುಂಬಗಳು 18,500ಎಕರೆ ಭೂಮಿ ಸಂತ್ರಸ್ತರಿಗೆ ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಿ ಪರಿಹಾರ
ನೀಡಬೇಕಾಗಿತ್ತು. ಬೆರಳೆಣಿಕೆಯಷ್ಟು ಜನ ನ್ಯಾಯಾಲಯದ ಮೊರೆ ಹೋದಾಗ ಬಡ್ಡಿ ಸೇರಿಸಿ 12 ಲಕ್ಷ ರೂ. ಪಾವತಿಸುವಂತೆ ಸೂಚಿಸಿದೆ. ಅದೇ ಮಾದರಿಯಲ್ಲಿ ಇನ್ನುಳಿ ಬಡ ರೈತರಿಗೂ ನ್ಯಾಯ ಸಿಗಬೇಕಾಗಿದೆ. ಕಾರಂಜಾ ಸಂತ್ರಸ್ತರ ಮಾದರಿಯಲ್ಲಿಯೇ ಪರಿಹಾರ ಧನ ವಿತರಣೆ ಆಗಬೇಕು ಎಂದು ಆಗ್ರಹಿಸಿದರು.

Advertisement

ಸಮಿತಿ ಕಾರ್ಯಾಧ್ಯಕ್ಷ ಜಿಲಾನಿ ಪಟೇಲ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪಾ ಹಚ್ಚಿ, ಜಂಟಿ ಕಾರ್ಯದರ್ಶಿ ದತ್ತಾತ್ರೆಯರಾವ್‌ ಕುಲಕರ್ಣಿ, ಸಲಹೆಗಾರ ವೀರಭದ್ರಪ್ಪ ಉಪ್ಪಿನ, ಜಾಕೀರ ಪಟೇಲ, ಬಸವರಾಜ ಮೂಲಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next