Advertisement

ಸೌಲಭ್ಯವಿಲ್ಲದ ಬಿಟಿಎಂ ಕಾಲೇಜಿನ ಮಾನ್ಯತೆ ರದ್ದತಿಗೆ ತೀರ್ಮಾನ

12:18 PM May 26, 2017 | Team Udayavani |

ಬೆಂಗಳೂರು: ಮೂಲಭೂತ ಸೌಕರ್ಯ ಹಾಗೂ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದ ಕಾರಣಕ್ಕೆ ಬಿಟಿಎಂ ಪ್ರಥಮ ದರ್ಜೆ ಖಾಸಗಿ ಕಾಲೇಜಿನ ಮಾನ್ಯತೆ ರದ್ದುಪಡಿಸಲು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಬಿಟಿಎಂ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು, ಕೊಠಡಿ ಅವ್ಯವಸ್ಥಿತವಾಗಿದೆ, ಗ್ರಂಥಾಲಯ, ಶೌಚಾಲಯ ಸರಿಯಾಗಿಲ್ಲ, ಕಾಲೇಜಿನ ಮಾನ್ಯತೆ ನವೀಕರಿಸಲು ಕನಿಷ್ಠ 40 ಅಂಕ ಇರಬೇಕು. ಆದರೆ, ಈ ಬಿಟಿಎಂ ಕಾಲೇಜಿಗೆ 27 ಅಂಕ ದೊರೆತಿದೆ ಎಂದು ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿಂದಂತೆ ಕಾಲೇಜಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಥಳೀಯ ವಿಚಾರಣೆ ಸಮಿತಿ(ಎಲ್‌ಐಸಿ) ವಿವಿಗೆ ವರದಿ ಸಲ್ಲಿಸಿದೆ. ಇದರ ಆಧಾರದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಂಕಪಟ್ಟಿಯನ್ನು ಗೌಪ್ಯವಾಗಿಡದ ಸಂಸ್ಥೆಗೆ ಟೆಂಡರ್‌ ನೀಡಿರುವುದಕ್ಕೆ ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಂಕಪಟ್ಟಿ ವಿಚಾರವಾಗಿ ಗೌಪ್ಯತೆ ಕಾಪಾಡದ ಖಾಸಗಿ ಸಂಸ್ಥೆಗಳಿಗೆ ನಿರ್ವಹಣೆ ನೀಡುವುದು ಸರಿಯಲ್ಲ ಎಂದು ವಾದಿಸಿದರು. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಹಳೇ ಒಪ್ಪಂದವೇ ಮುಂದುವರಿಯಲಿದೆ. ಪರೀಕ್ಷೆ ಸಮೀಪಿಸುತ್ತಿರುವುದರಿಂದ ಹೊಸ ಟೆಂಡರ್‌ ಅಸಾಧ್ಯ ಎಂಬ ಬಗ್ಗೆಯೂ ಸುಧೀರ್ಘ‌ ಚರ್ಚೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next