Advertisement

ರಾಜ್ಯದ ಜನತೆಯ ನಿರ್ಧಾರ ದೇಶದ ಭವಿಷ್ಯ ನಿರ್ಧರಿಸಲಿದೆ: ಚಿದಂಬರಂ

06:00 AM May 09, 2018 | |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಯ ನಿರ್ಧಾರ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರ ಈಗಾಗಲೇ ಮಾಡಿರುವ ಅಭಿವೃದಿಟಛಿಯ ವೇಗ ಹೆಚ್ಚಿಸುವುದು ಮತ್ತು ದೇಶದ ಒಕ್ಕೂಟ ವ್ಯವಸ್ಥೆಯನ್ನು
ಛಿದ್ರಗೊಳಿಸುವ ಶಕ್ತಿಗಳ ವಿರುದ್ಧ  ಹೋರಾಟ ಮಾಡಬೇಕಿದೆ ಎಂದು ಹೇಳಿದರು. 2008-13ರವರೆಗೆ ರಾಜ್ಯದಲ್ಲಿ ಬಿಜೆಪಿ ದುರ್ಬಲ ಮತ್ತು ಭ್ರಷ್ಟಾಚಾರದ ಸರ್ಕಾರ ನಡೆಸಿತ್ತು.

Advertisement

ಒಂದೇ ಅವಧಿಯಲ್ಲಿ ಮೂವರು ಮುಖ್ಯಮಂತ್ರಿ ಗಳು ಬದಲಾಗಿ, ಜೈಲಿಗೆ ಹೋಗಿ ಬಂದರು. ಈಗ ಅದೇ ನಾಯಕರು ಮತ್ತೆ ಜನತೆಯ ಬಳಿ ಬಿಜೆಪಿಗೆ ಮತ ನೀಡಿ ಎಂದು ಕೇಳುತ್ತಿರುವುದು ವಿಪರ್ಯಾಸ ಎಂದರು. ಪ್ರಧಾನಿ ತಮ್ಮ ಘನತೆಗೆ ತಕ್ಕಂತೆ ಮಾತನಾಡದೇ ಪಕ್ಷದ ಪ್ರಚಾರಕರಂತೆ ಮಾತನಾಡುತ್ತಿರುವುದು ದುರದೃಷ್ಟಕರ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ವಿವಾದ ಬಗೆ ಹರಿಸುವು ದಾಗಿ ಹೇಳಿದ್ದಾರೆ. 4 ವರ್ಷದಿಂದ ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು. ಇನ್ನು ರಾಜ್ಯಕ್ಕೆ ಪ್ರತ್ಯೇಕ ಧ್ವಜ ಹಿಂದಿ ಹೇರಿಕೆ ವಿರುದಟಛಿ ರಾಜ್ಯ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ಅವರು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next