Advertisement

ಸಕ್ರೆಬೈಲು ಬಿಡಾರದಲ್ಲಿ ಆನೆ ಇಂದಿರಾ ಸಾವು

03:45 AM Jan 31, 2017 | Harsha Rao |

ಶಿವಮೊಗ್ಗ: ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಅತ್ಯಂತ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಂದಿರಾ (93) ಸೋಮವಾರ ಮಧ್ಯಾಹ್ನ ಮೃತಪಟ್ಟಿದೆ. ಇತ್ತೀಚಿನ ಕೆಲವು ದಿನಗಳಿಂದ ವಯೋ ಸಹಜ ಬಳಲಿಕೆಯಿಂದ ಆಹಾರ ಸೇವನೆ ಕೂಡ ಇದಕ್ಕೆ ಕಷ್ಟವಾಗಿತ್ತು. ಹೀಗಾಗಿ ಬೇಯಿಸಿದ ಆಹಾರವನ್ನೇ ನೀಡಲಾಗುತಿತ್ತು.

Advertisement

ಕಳೆದ ಕೆಲ ದಿನಗಳಿಂದ ಆಹಾರ ಸೇವನೆ ತ್ಯಜಿಸಿದ್ದರಿಂದ ತೀರಾ ಕೃಶವಾಗಿತ್ತು. ಸಕ್ರೆಬೈಲು ಕಾಡಿನ ಮಿಲಿಟರಿ ಕ್ಯಾಂಪ್‌
ಬಳಿ ಆನೆ ಮೃತಪಟ್ಟಿದ್ದು, ಅಲ್ಲಿಯೇ ಸೋಮವಾರ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next