Advertisement
ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮಪಂಚಾಯ್ತಿ ಕಚೇರಿಯ ಆವರಣದಲ್ಲಿ ಶನಿವಾರ ನಡೆದಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮದಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂಡಲಬೀಡು, ಕಾಟ್ನಾಳು, ರಾಂಪುರ ಗ್ರಾಮಗಳಲ್ಲಿ ಜನಸ್ಪಂದನಾ ನಡೆಸಿ ನಂತರ ಕರ್ಪೂರವಳ್ಳಿಯಲ್ಲಿಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು.
Related Articles
Advertisement
ಕೆರೆ ಕಟ್ಟೆಗಳು ಒತ್ತುವರಿಯಾಗಿರುವುದನ್ನು ಬಿಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿಜಿಲ್ಲಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ವರದಿ ನೀಡುವಂತೆಸೂಚಿಸಿದರು. ಇದೇ ಸಂದರ್ಭದಲ್ಲಿ ಸಾಲಿಗ್ರಾಮತಾಲೂಕು ನಾಯಕ ಸಮಾಜಕ್ಕೆ ವಾಲ್ಮೀಕಿಸಮುದಾಯಕ್ಕೆ ಸ್ಥಳ ನೀಡುವಂತೆ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಜಿಪಂ ಸಿಇಒ ಎ.ಎಂ.ಯೋಗೇಶ್, ಉಪವಿ ಭಾಗಾಧಿಕಾರಿ ವರ್ಣಿತ್‌ಯೋಗಿ, ತಹಶೀಲಾರರಾದ ಎಸ್.ಸಂತೋಷ್, ಕೆ.ಎನ್.ಮೋಹನ್‌ಕುಮಾರ್, ಇಒ ಎಚ್.ಕೆ.ಸತೀಶ್. ಬಿಇಒ ಟಿ.ಎನ್.ಗಾಯಿತ್ರಿ. ಗ್ರಾ.ಪಂ. ಪ್ರಭಾರ ಅಧ್ಯಕ್ಷೆ ಪ್ರೇಮಸ್ವಾಮಿ, ಪಿಡಿಒ ರಾಜಕುಮಾರ್, ವೃತ್ತ ನಿರೀಕ್ಷಕ ಆರ್.ಶ್ರೀಕಾಂತ್,ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ತೋಟಗಾರಿಗೆ ಹಿರಿಯ ಸಹಾಯಕನಿರ್ದೇಶಕ ಎನ್.ಪ್ರಸನ್ನ, ಕೃಷಿ ನಿರ್ದೆಶಕ ಗುರುಪ್ರಸಾದ್ ಮತ್ತುತರರು ಹಾಜರಿದ್ದರು.
ಇನ್ನು ಸುಮ್ಮನಿರಲು ಸಾಧ್ಯವಿಲ್ಲ: ಸಾರಾ ಮಹೇಶ್ :
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸಾ.ರಾ.ಮಹೇಶ್, ನಾನು ನಿತ್ಯ ಪ್ರತಿ ಗ್ರಾಮದಲ್ಲಿಯೂ ಸಭೆ ಮತ್ತುಕಾರ್ಯಕ್ರಮಗಳಲ್ಲಿ ಜನರ ಕೆಲಸ ಮಾಡುವಂತೆ ತಿಳಿಸಿದರೂ ಬೇಜವಾಬ್ದಾರಿತನದಿಂದ ನಾಗರಿಕರುಮತ್ತು ರೈತರನ್ನು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ತಾಲೂಕಿನಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬಾರದು ಎಂದು ಸುಮ್ಮನಿದ್ದೇನೆ. ಒಂದಿಬ್ಬರವಿರುದ್ಧ ಕ್ರಮ ಜರುಗಿಸಿದರೆ ಆಗ ಸರಿ ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಣ್ಣಪುಟ್ಟ ಸಮಸ್ಯೆ ಬಗ್ಗೆಯೂ ಅಧಿಕಾರಿಗಳ ನಿರ್ಲಕ್ಷ್ಯ :
ಸ್ಥಳೀಯ ಮಟ್ಟದಲ್ಲಿ ಹಲವಾರು ಕುಂದು ಕೊರತೆಗಳಿವೆ. ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ವೃದ್ಧಾಪ್ಯ ವೇತನ, ವಿಧವಾವೇತನ, ಸಂಧ್ಯಾಸುರಕ್ಷಾ ಮತ್ತಿತರಮಾಶಾನಗಳು, ಇ-ಸ್ವತ್ತು ಕುಟುಂಬದಲ್ಲಿ ತಾತ ಮುತ್ತಾತರಿಂದ ಬಂದ ಆಸ್ತಿಗಳನ್ನು ಹಂಚಿಕೊಳ್ಳುವಸಂದರ್ಭದಲ್ಲಿ ಉಂಟಾಗಿರುವ ಸಮಸ್ಯೆಗಳು, ಪೌತಿಖಾತೆ, ಖಾತೆ ವರ್ಗಾವಣೆ ಸೇರಿದಂತೆ ಇನ್ನಿತರ ಸಣ್ಣ ಪುಟ್ಟಕೆಲಸಗಳನ್ನು ಮಾಡದಿರುವ ಬಗ್ಗೆ ಜಿಲ್ಲಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ತಹಶೀಲ್ದಾರ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ತಕ್ಷಣ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.