Advertisement
ಆದರೆ, ಇನ್ನೊಂದು ಮೂಲಗಳ ಪ್ರಕಾರ, ಅವರ ಕುಟುಂಬದವರನ್ನು ಕೇರಳಕ್ಕೆ ಕರೆದೊಯ್ದು ಕಳೇಬರವನ್ನು ಗುರುತಿಸಿದ ನಂತರವಷ್ಟೇ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ನಕ್ಸಲರ ಗುಂಪು ಸಭೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಎನ್‌ಎಫ್ ತಂಡ, ಕಾರ್ಯಾಚರಣೆಗೆ ಮುಂದಾದಾಗ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ, ನಡೆಸಿದ ಪ್ರತಿದಾಳಿಯಲ್ಲಿ ಸಿಪಿಎಂ (ಮಾ ರ್ಕ್ಸಿಸ್ಟ್) ಪಕ್ಷದ ಭವಾನಿ ದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್.ಸುರೇಶ್ ಹಾಗೂ ಕಾರ್ತಿ ಸೇರಿ ಮೂರ್‍ನಾಲ್ಕು ನಕ್ಸಲರು ಹತರಾಗಿದ್ದಾರೆ ಎಂದು ಹೇಳಲಾಗಿತ್ತು.
Related Articles
Advertisement
ಈ ನಡುವೆ, ಇಬ್ಬರು ನಕ್ಸಲರ ಹತ್ಯೆ ವದಂತಿ ಹಿನ್ನೆಲೆಯಲ್ಲಿ ಎಎನ್‌ಎಫ್ ಸಿಬ್ಬಂದಿಯವರು ನಕ್ಸಲ್‌ಪೀಡಿತ ತಾಲೂಕಾಗಿರುವ ಶೃಂಗೇರಿಯ ಅರಣ್ಯ ಪ್ರದೇಶಗಳಲ್ಲಿ ಮಂಗಳವಾರ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಶ್ರೀಮತಿ ಹುಟ್ಟೂ ರಾದ ಶೃಂಗೇರಿಯ ಬೆಳಗೋಡು ಕೂಡಿಗೆ ಗ್ರಾಮದ ಸುತ್ತಮುತ್ತ ಕೂಂಬಿಂಗ್ ನಡೆಸಿದ್ದಾ ರೆಂದು ತಿಳಿದು ಬಂದಿದೆ. ಇನ್ನೊಂದೆಡೆ, ಸುರೇಶನ ಮೃತದೇಹವನ್ನು ಚಿಕ್ಕಮಗಳೂರಿಗೆ ತರಲು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಹಕರಿಸಬೇಕು ಎಂದು ಆತನ ಸಹೋದರ ಮನವಿ ಮಾಡಿದ್ದರು.
ಹತರ ಸಂಖ್ಯೆ 4ಕ್ಕೇರಿಕೆ: ಪಾಲಕ್ಕಾಡ್: ಕೇರಳದ ಅಟ್ಟಪಾಡಿಯ ದಟ್ಟಾರಣ್ಯ ದಲ್ಲಿ ವಿಶೇಷ ಥಂಡರ್‌ಬೋಲ್ಟ್ ಪೊಲೀಸರು ನಡೆಸಿದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮತ್ತೂಬ್ಬ ಮಾವೋವಾದಿ ಮೃತಪಟ್ಟಿದ್ದು, ಮೃತ ನಕ್ಸಲರ ಸಂಖ್ಯೆ ಮಂಗಳವಾರ 4ಕ್ಕೇರಿದೆ. ಸೋಮ ವಾರ ನಡೆದ ಕಾರ್ಯಾಚರಣೆ ವೇಳೆ ಒಬ್ಬ ಮಹಿಳೆ ಸೇರಿ ಮೂವರು ನಕ್ಸಲರನ್ನು ಹೊಡೆದುರುಳಿಸ ಲಾಗಿತ್ತು. ಮಂಗಳವಾರ ಬೆಳಗ್ಗೆ ಆ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾಗ ಮತ್ತೂಮ್ಮೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮತ್ತೂಬ್ಬ ನಕ್ಸಲನನ್ನು ಹತ್ಯೆಗೈಯ್ಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆ ಅಗಳಿ ಗ್ರಾಮದ ಮಂಚಕಟ್ಟಿ ಅರಣ್ಯ ಪ್ರದೇಶದಲ್ಲಿ ಸೋಮವಾರ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತರಾಗಿರುವ ನಕ್ಸಲೀಯರಲ್ಲಿ ಜಿಲ್ಲೆಯವರು ಮೃತಪಟ್ಟಿರುವುದು ದೃಢಪಟ್ಟಿಲ್ಲ.-ಹರೀಶ್ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ